Honnavar |ಶೌಚಾಲಯದ ಕೊಠಡಿಯಲ್ಲಿ ಅಕ್ರಮವಾಗಿ ಗೋವಾ ಮದ್ಯ ದಾಸ್ತಾನು ಮಾಡಿದವ ಅಂದರ್ !

IMG 20261029 WA0022 IMG 20261029 WA0022

ಕಾರವಾರ: ಮನೆಯ ಪಕ್ಕದ ಶೌಚಾಲಯದ ಕೊಠಡಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavar)ತಾಲೂಕಿನ ತಗ್ಗುಪಾಳ್ಯದಲ್ಲಿ ನಡೆದಿದೆ.

ಹೊನ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಗ್ಗುಪಾಳ್ಯದಲ್ಲಿರುವ ಮನೆಯೊಂದರ ಪಕ್ಕದ ಶೌಚಾಲಯದಲ್ಲಿ ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಅನುಮತಿ ಹೊಂದಿರುವ ಮದ್ಯವನ್ನು ದಾಸ್ತಾನು ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಹೊನ್ನಾವರ ಉಪವಿಭಾಗದ ಅಬಕಾರಿ ನಿರೀಕ್ಷಕಿ ಶಾಂತಾ ಅಪ್ಪಯ್ಯ ತೇರದಾಳ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

30 ಲೀಟರ್ ಗೋವಾ ಫೆನ್ನಿ ವಶಕ್ಕೆ

ದಾಳಿಯ ವೇಳೆ ಒಟ್ಟು 30 ಲೀಟರ್ ಗೋವಾ ಫೆನ್ನಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರೆಮಂದಿನ್ ಸಾಂತೋಲಿನ್ ಡಿಕೋಸ್ತಾ ಅವರಿಗೆ ಸೇರಿದ ಮನೆಯ ಪಕ್ಕದ ಶೌಚಾಲಯದಲ್ಲಿ ಮದ್ಯವನ್ನು ಸಂಗ್ರಹಿಸಿಡಲಾಗಿತ್ತು.

ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಅನುಮತಿ ಹೊಂದಿರುವ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ರೆಮಂದಿನ್ ಸಾಂತೋಲಿನ್ ಡಿಕೋಸ್ತಾ ವಿರುದ್ಧ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement