Gokarna :- ಗೋಕರ್ಣದಲ್ಲಿ(gokarna ) ಪ್ರವಾಸಕ್ಕೆ ಬಂದ ಪ್ರವಾಸಿಗರಿಗೆ ಸಮುದ್ರ ಗಡಿಯಲ್ಲಿ ಶಾಕ್ ಎದುರಾಗಿದೆ. ಹೌದು ಕಡಲ ತೀರದಲ್ಲಿ ಸಮುದ್ರಕ್ಕಿಳಿದ ಇಬ್ಬರು ಪ್ರವಾಸಿಗರು ಸಮುದ್ರದಲ್ಲಿ ಮುಳಗುವ ಹಂತ ತಲುಪಿದರೇ ಪಾರ್ಕಿಂಗ್ ಸ್ಥಳದಲ್ಲಿ ಪುಟ್ಟ ಮಗುವಿಗೆ ನಾಗರಹಾವು ಕಚ್ಚಿದೆ. ಏನಾಯ್ತು ವಿವರ ಇಲ್ಲಿದೆ.Gokarna| ಗೋಕರ್ಣದ ತದಡಿಯಲ್ಲಿ ಬೋಟ್ ಮುಳುಗಡೆ -ನಾಲ್ವರ ರಕ್ಷಣೆ
ಸಮುದ್ರದಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನGokarna |ಗೋಕರ್ಣ ದಲ್ಲಿ ಶಿಲಾಮೂರ್ತಿ ಸವಕಳಿ ಸ್ಪರ್ಶ ದರ್ಶನ ನಿಷೇಧ
ಗೋಕರ್ಣದ ಕುಡ್ಲೆ ಕಡಲ ತೀರದಲ್ಲಿ ನಡೆದಿದೆ. ದೇವರಾಜ್(24) ಹಾಗೂ ಅರವಿಂದ (25) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದು ,ಗೋಕರ್ಣ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳು ರಕ್ಷಣೆ ಮಾಡಿದವರಾಗಿದ್ದು , ಸಮುದ್ರದಲ್ಲಿ ಅಲೆಗಳಿಗೆ ಸಿಲುಕಿ ಮುಳುಗುತಿದ್ದ ವೇಳೆ ಜೆಟ್ ಸ್ಕೀ ಮೂಲಕ ಸ್ಥಳಕ್ಕೆ ತೆರಳಿ ಪ್ರವಾಸಿಗರನ್ನ ರಕ್ಷಿಸಿದ್ದಾರೆ.
ಪಾರ್ಕಿಂಗ್ ಸ್ಥಳದಲ್ಲಿ ಮಗುವಿಗೆ ಕಡಿದ ನಾಗರಹಾವು
ಕುಟುಂಬದೊಂದಿಗೆ ಗೋಕರ್ಣ ಕ್ಕೆ ಪ್ರವಾಸಕ್ಕೆ ಬಂದಿದ್ದ ಮಗುವಿಗೆ ನಾಗರ ಹಾವು ಕಡಿದ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ.
ಕಡಲ ತೀರದ ಸಮೀಪ ಇರುವ ಪಾರ್ಕಿಂಗ್ ಜಾಗದಲ್ಲಿ ಮಗು ಇದ್ದಾಗ ನಾಗರಹಾವು ಕಡಿತ ಮಾಡಿದೆ.ಐದು ವರ್ಷದ ಧಾರವಾಡ ಮೂಲದ ಮಗವಾಗಿದ್ದು ,ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆಉರುಗ ರಕ್ಷಕನನ್ನ ಕರೆಸಿ ಹಾವನ್ನ ಸೆರೆ ಹಿಡಿಯಲಾಗಿದ್ದಿದೆ
