Gokarna |ಗೋಕರ್ಣ ದಲ್ಲಿ ಶಿಲಾಮೂರ್ತಿ ಸವಕಳಿ  ಸ್ಪರ್ಶ ದರ್ಶನ ನಿಷೇಧ

Gokarna:ಗೋಕರ್ಣ ಮಹಾಗಣಪತಿ ದೇವಾಲಯದ ಪ್ರಾಚೀನ ಶಿಲಾಮೂರ್ತಿ ಸವಕಳಿಯಾಗಿರುವ ಹಿನ್ನೆಲೆಯಲ್ಲಿ ಸ್ಪರ್ಶ ದರ್ಶನ ಹಾಗೂ ಕೆಲವು ಪೂಜಾ ಸೇವೆಗಳನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ತಾತ್ಕಾಲಿಕವಾಗಿ ನಿಷೇಧಿಸಿದೆ.
ಗೋಕರ್ಣ ಮಹಾಗಣಪತಿ ದೇವಸ್ಥಾನದ ಪ್ರಾಚೀನ ಶಿಲಾಮೂರ್ತಿ ಸವಕಳಿಯಾದ ಹಿನ್ನೆಲೆಯಲ್ಲಿ ಸ್ಪರ್ಶ ದರ್ಶನ ಹಾಗೂ ಪೂಜಾ ಸೇವೆಗೆ ನಿಷೇಧ ವಿಧಿಸಿರುವ ದೃಶ್ಯ. ಗೋಕರ್ಣ ಮಹಾಗಣಪತಿ ದೇವಸ್ಥಾನದ ಪ್ರಾಚೀನ ಶಿಲಾಮೂರ್ತಿ ಸವಕಳಿಯಾದ ಹಿನ್ನೆಲೆಯಲ್ಲಿ ಸ್ಪರ್ಶ ದರ್ಶನ ಹಾಗೂ ಪೂಜಾ ಸೇವೆಗೆ ನಿಷೇಧ ವಿಧಿಸಿರುವ ದೃಶ್ಯ.

Gokarna |ಗೋಕರ್ಣ ದಲ್ಲಿ ಶಿಲಾಮೂರ್ತಿ ಸವಕಳಿ  ಸ್ಪರ್ಶ ದರ್ಶನ ನಿಷೇಧ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ(gokarna) ಪುರಾಣ ಪ್ರಸಿದ್ದ ಮಹಾಗಣಪತಿ ಮಂದಿರದ ಪ್ರಾಚೀನ ಶಿಲಾ ಮೂರ್ತಿ ಸವಕಳಿಯಾದ ಹಿನ್ನೆಲೆಯಲ್ಲಿ ಭಕ್ತರಿಗೆ ಸ್ಪರ್ಶ ದರ್ಶನ, ಪೂಜಾ ಸೇವೆಗಳನ್ನು ಬಂದ್ ಮಾಡಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.

ಬುಧವಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಸುಧಾ ತಳವಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೂರ್ತಿಯ ಕೈ, ಭುಜ ಹಾಗೂ ಎದೆ ಭಾಗ ಹೆಚ್ಚು ಸವಕಳಿಯಾಗುತ್ತಿರುವುದರಿಂದ ಮೂರ್ತಿಯ ರಕ್ಷಣೆಗಾಗಿ ಈ ಕ್ರಮಕೈಗೊಳ್ಳ ಲಾಗಿದೆ. ಇನ್ನು ಮುಂದೆ ಸ್ಥಳೀಯರು ಸೇರಿದಂತೆ ಗಣ್ಯ ವ್ಯಕ್ತಿಗಳೂ ಸಹಹೊರಗಿನಿಂದಲೇ ದರ್ಶನ ಪಡೆಯಬೇಕಿದೆ.

ಇದನ್ನೂ ಓದಿ:-Gokarna|ಮಹಾಬಲೇಶ್ವರನಿಗೆ  ಕೊಳಚೆ ನೀರು- ಸಿ.ಎ ಡಿಕೆ ಶಿವಕುಮಾರ್ ಆದೇಶವೇನು ಗೊತ್ತಾ!

Advertisement

ಮಹಾಬಲೇಶ್ವರ ನ ದರ್ಶನಕ್ಕೂ ಮೊದಲು ಗಣಪತಿ ದರ್ಶನ.

ಗೋಕರ್ಣಕ್ಕೆ ಬರುವ ಭಕ್ತರು ಮಹಾಬಲೇಶ್ವರ ದರ್ಶನ ಪಡೆಯುವ ಮೊದಲು ಮಹಾಗಣಪತಿ ದರ್ಶನ ಪಡೆದು ಪೂಜೆ ಸಲ್ಲಿಸಿ ನಂತರ ಮಹಾಬಲೇಶ್ವರನ ಆತ್ಮಲಿಂಗ ದರ್ಶನ ಪಡೆಯುತ್ತಾರೆ. ಆದರೇ ಇದೀಗ ಮಹಾಗಣಪತಿ ಮೂರ್ತಿ ಸವಕಳಿ ಆಗಿದ್ದು ದರ್ಶನಕ್ಕೆ ಮಾತ್ರ ಅವಕಾಶ ಸಿಗಲಿದೆ.

ಇದನ್ನೂ ಓದಿ:-Gokarna| 30 ರಿಂದ 40 ಕೋಟಿಯಲ್ಲಿ ಮಹಾಬಲೇಶ್ವರ ಸನ್ನಿದಿ ಅಭಿವೃದ್ಧಿಗೆ ನೀಲನಕ್ಷೆ ಸಿದ್ದ!

ಇನ್ನು ಸಂಕಷ್ಟಿ, ಗಣೇಶ ಚತುರ್ಥಿ ಸಂದರ್ಭದಲ್ಲೂ ಈ ನಿಯಮ ಮುಂದುವರಿಯಲಿದ್ದು, ವಿಶೇಷವಾಗಿ ನಡೆಯುವ ಕೊಟ್ಟೆ ಕಣಜ ಹಾಗೂ ಸಕ್ಕರೆ ಕಣಜ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮೂರ್ತಿಯ ರಕ್ಷಣೆಗೆ ಭಕ್ತರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement