Rain|ಮಳೆ ಅಬ್ಬರ -6 ಸೇತುವೆಗಳು ಮುಳುಗಡೆ.
ಚಿಕ್ಕೋಡಿ: ಅಬ್ಬರದ ಮಳೆ (Rain) ಮತ್ತೆ ಪ್ರಾರಂಭವಾಗಿದ್ದು ಕೃಷ್ಣಾ ನದಿ ಒಳಹರಿವಿನಲ್ಲಿ ಮತ್ತೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಒಟ್ಟು 65 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ, ದೂದಗಂಗಾ ವೇದಗಂಗಾ, ಹೀರಣ್ಯಕೇಶಿ ನದಿಗಳು ಮೈದುಂಬಿ ಹರಿಯುತ್ತಿವೆ.
ಇದನ್ನೂ ಓದಿ:-Karwar|ಮಾಲ್ವಾಣ್ ಯುದ್ಧ ನೌಕೆ ಕದಂಬ ನೌಕಾನೆಯಿಂದ ಜು.22ರಿಂದ ಕಾರ್ಯಾರಂಭ-ಅದರ ವಿಶೇಷ ಇಲ್ಲಿದೆ.
ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಲ್ಲಿ ಎರಡನೇ ಬಾರಿಗೆ 6 ಸೇತುವೆಗಳ ಮುಳುಗಡೆಯಾಗಿವೆ. ನಿಪ್ಪಾಣಿ ತಾಲೂಕಿನ 5 ಚಿಕ್ಕೋಡಿ ತಾಲೂಕಿನ 1 ಸೇತುವೆ ಮುಳುಗಡೆಯಾಗಿವೆ.

ಕೃಷ್ಣಾ ನದಿಗೆ ಅಡ್ಡಲಾಗಿರುವ ಚಿಕ್ಕೋಡಿ ತಾಲೂಕಿನ ಕಲ್ಲೋಳ ಯಡುವ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾದರೇ ನಿಪ್ಪಾಣಿ ತಾಲೂಕಿನ ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಜಲಾವೃತ ಹಾಗೂ ವೇದಗಂಗಾ ನದಿಗೆ ಅಡ್ಡಲಾಗಿರುವ ಬೋಜ – ಕಾರದಗಾ, ಭೋಜವಾಡಿ – ಕುನ್ನೂರು, ಅಕ್ಕೋಳ-ಸಿದ್ನಾಳ,ಹುನ್ನರಗಿ, ಮಮದಾಪೂರ, ಭಾರವಾಡಿ ಕುನ್ನೂರು ಸೇತುವೆಗಳು ಜಲಾವೃತವಾಗಿವೆ. ಸೇತುವೆಗಳು ಜಲಾವೃತ ಹಿನ್ನೆಲೆ ಪರ್ಯಾಯ ಮಾರ್ಗಗಳ ಮೂಲಕ ಜನರ ಸಂಚಾರ ನಡೆಸುತ್ತಿದ್ದಾರೆ.
