Yallapur | ಒಂಟಿಮನೆ ದರೋಡೆ ಪ್ರಕರಣ ಭೇದಿಸಿದ ಯಲ್ಲಾಪುರ ಪೊಲೀಸರು: ನಾಲ್ವರು ಆರೋಪಿಗಳ ಬಂಧನ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapur) ತಾಲೂಕಿನ ಹುಟ್ಕಮನೆ ಗ್ರಾಮದಲ್ಲಿ ನಡೆದ ಒಂಟಿಮನೆ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ನವೆಂಬರ್ 5ರಂದು ರಾತ್ರಿ ಸುಮಾರು 8.30ರ ವೇಳೆಗೆ ಹುಟ್ಕಮನ ಗ್ರಾಮದ ಮೂಲೆಗುಂಡ್ಲಲ್ ನಿವಾಸಿ ರಾಮಚಂದ್ರ ಮಹಾಬಲೇಶ್ವರ ಭಟ್ಟ (63) ಅವರ ಮನೆಗೆ ನುಗ್ಗಿದ್ದ ದರೋಡೆಕೋರರು, ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ್ದರು. ಬಳಿಕ ಮನೆಯವರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ನಗದು ಹಣ ಹಾಗೂ ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.Yallapur| ಜನಪ್ರತಿನಿಧಿಗಳಿಗೆ ಮಾತಿನ ಏಟು-ಎದುರೇಟು ! ಐದು ನಿರ್ಣಯ ಕೈಗೊಂಡು 15 ದಿನದ ಗಡುವು ಏನದು ?
ದರೋಡೆಕೋರರು ಸುಮಾರು 20 ಗ್ರಾಂ ತೂಕದ ಬಂಗಾರದ ಕರಿಮಣಿ ಸರ, ಎರಡು ಬಂಗಾರದ ಬಳೆಗಳು, ಕಿವಿಯೋಲೆಗಳು, ಉಂಗುರ, ಲಾಕೆಟ್, ಬೆಳ್ಳಿಯ ಬಟ್ಟಲುಗಳು, ಎರಡು ಕೈಗಡಿಯಾರಗಳು, ಸ್ಯಾಮ್ಸಂಗ್ ಮತ್ತು ವಿವೋ ಮೊಬೈಲ್ಗಳು, ₹12 ಸಾವಿರ ನಗದು ಹಾಗೂ ಟಿವಿಎಸ್ ಅಪಾಚೆ ಬೈಕ್ ಕಳವು ಮಾಡಿದ್ದರು.
ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.
ನವೆಂಬರ್ 9ರಂದು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಹಸನ್ಸಾಬ ರಾಜೇಸಾಬ ಅಮೀನಗಡ (48), ಮುಬಾರಕ್ ಮಾಸಿಮ್ ಮಕಾನದಾರ (26), ಮಹಮ್ಮದ್ ಖಾಸಿಂ ಸುಭಾನಿ ದಂಡಿನವರ (38) ಹಾಗೂ ಅಬ್ಬಾಸಅಲಿ ಫೀರಸಾಬ ಮಕಾನದಾರ (50) ಎಂದು ಗುರುತಿಸಲಾಗಿದೆ.Yallapur |ಅಂಬುಲೆನ್ಸ್ ಬರಲು ವಿಳಂಬ, ರಸ್ತೆಯಲ್ಲೆ ಚಿಕಿತ್ಸೆ ನೀಡಿ ಮಾನವೀಯತೆ ತೋರಿದ ಶಿರಸಿಯ ವೈದ್ಯ
ಬಂಧಿತರಲ್ಲಿ ಹಸನ್ಸಾಬ ಬೆಳಗಾವಿಯ ನ್ಯೂ ಗಾಂಧಿನಗರ ನಿವಾಸಿಯಾಗಿದ್ದು, ಉಳಿದ ಮೂವರು ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದವರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ದರೋಡೆಗೆ ಬಳಸಿದ ಕಾರು, ಬೈಕ್ ವಶ
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬಿಳಿ ಬಣ್ಣದ ಫೋರ್ಡ್ ಕಾರು, ಹೀರೋ ಮೋಟಾರ್ ಸೈಕಲ್, ದರೋಡೆ ಮಾಡಿದ್ದ ಟಿವಿಎಸ್ ಅಪಾಚೆ ಬೈಕ್, ಎರಡು ಮೊಬೈಲ್ಗಳು ಸೇರಿದಂತೆ ಕಳವು ಮಾಡಿದ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.Yallapur | ಗಣಪತಿ ವಿಸರ್ಜನೆ ಸ್ಥಳದಲ್ಲಿ ಮೊಸಳೆ -ಬಲೆ ಅಳವಡಿಸಿ ಮುಂದುವರೆದ ಶೋಧ ಕಾರ್ಯ
ಯಲ್ಲಾಪುರ ಪೊಲೀಸ್ ನಿರೀಕ್ಷಕ ಸುರೇಶ ಜಿ. ಕುಂಬಾರ ಹಾಗೂ ಗೋಕರ್ಣ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರವಾರದ ತಾಂತ್ರಿಕ ವಿಭಾಗದ ಸಿಬ್ಬಂದಿಯೂ ಆರೋಪಿಗಳ ಪತ್ತೆಗೆ ಸಹಕರಿಸಿದ್ದರು.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.


