

Karwar | ದೀಪಾವಳಿಗಾಗಿ ಹಚ್ಚಿದ ಹಣತೆ ಸ್ವಲ್ಪದರಲ್ಲೇ ತಪ್ಪಿದ ಭಾರೀ ಬೆಂಕಿ ಅವಘಡ
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಮನೆಯಲ್ಲಿ ಹಚ್ಚಿಟ್ಟಿದ್ದ ದೀಪದ ಹಣತೆಯಿಂದ ಬಟ್ಟೆಗೆ ಬೆಂಕಿ ತಗುಲಿ, ಮನೆಯ ಸ್ಟೇರ್‌ಕೇಸ್ ಕೆಳಭಾಗದಲ್ಲಿ ಬೆಂಕಿ ಹರಡಿದ ಘಟನೆ ಭಾನುವಾರ ರಾತ್ರಿ ಕಾರವಾರ(karwar) ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ವಿದ್ಯಾಲಯದ ಸಮೀಪ ನಡೆದಿದೆ.
ಶೀತಲ್ ಪಾತಾರೆ ಅವರಿಗೆ ಸೇರಿದ ಮನೆಯಲ್ಲಿ ಸ್ಟೇರ್‌ಕೇಸ್ ಕೆಳಗೆ ದೀಪದ ಹಣತೆಯನ್ನು ಇಡಲಾಗಿತ್ತು. ಹಣತೆಯ ಜ್ವಾಲೆ ಸಮೀಪದಲ್ಲಿದ್ದ ಹಳೆಯ ಬಟ್ಟೆಗಳಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ವಿಲ್ಸನ್ ಫರ್ನಾಂಡಿಸ್ ಅವರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.Karwar | ತಿಂಡಿ ಸರಿಯಿಲ್ಲವೆಂದು ಪ್ರಶ್ನಿಸಿದ ಗ್ರಾಹಕನ ಮೇಲೆ ಕುದಿಯುವ ನೀರು ಎರಚಿದ ಹೋಟೆಲ್ ಮಾಲೀಕ!
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ಬೆಂಕಿ ಬಟ್ಟೆಗಳಿಗೆ ಮಾತ್ರ ಸೀಮಿತವಾಗಿದ್ದು, ಮನೆಗೆ ಹರಡುವುದನ್ನು ತಡೆದು ಭಾರೀ ಅನಾಹುತ ತಪ್ಪಿಸಿದ್ದಾರೆ.Karwar | ಬಿಜೆಪಿ ಕಾರ್ಯಕರ್ತರ ಬಳಿ ಭಿಕ್ಷೆ ಬೇಡಿಸಿದ ಸಂಸದ ಕಾಗೇರಿ! ಪ್ರತಿಭಟನೆಯಲ್ಲಿ ಸ್ವತಹಾ ಬೇಡಲಿಲ್ಲ ಕಾರಣ ?
ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ ಅವರ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಸಪ್ನಿಲ್ ಪೇಡ್ನೇಕರ, ಮಿಥುನ್ ಅಂಕೊಲೇಕರ್, ಭರತಕುಮಾರ ಜಿ.ಎಸ್. ಹಾಗೂ ಚಾಲಕ ಕೃಷ್ಣ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

