Karwar | ತಿಂಡಿ ಸರಿಯಿಲ್ಲವೆಂದು ಪ್ರಶ್ನಿಸಿದ ಗ್ರಾಹಕನ ಮೇಲೆ ಕುದಿಯುವ ನೀರು ಎರಚಿದ ಹೋಟೆಲ್ ಮಾಲೀಕ!

Customer injured after a hotel owner allegedly pours boiling water on him at Karwar hotel near the bus stand Customer injured after a hotel owner allegedly pours boiling water on him at Karwar hotel near the bus stand
ಗಾಯಗೊಂಡ ಗ್ರಾಹಕ ಮತ್ತು ಹೋಟಲ್ ಚಿತ್ರ

IMG 20261105 140902

Karwar | ತಿಂಡಿ ಸರಿಯಿಲ್ಲವೆಂದು ಪ್ರಶ್ನಿಸಿದ ಗ್ರಾಹಕನ ಮೇಲೆ ಕುದಿಯುವ ನೀರು ಎರಚಿದ ಹೋಟೆಲ್ ಮಾಲೀಕ!

ಕಾರವಾರ: ಹೋಟೆಲ್‌ನಲ್ಲಿ ತಿಂಡಿ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಗ್ರಾಹಕನ ಮೇಲೆ ಹೋಟೆಲ್ ಮಾಲೀಕ ಕುದಿಯುತ್ತಿದ್ದ ನೀರನ್ನು ಎರಚಿದ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಗ್ರಾಹಕನ ದೇಹದ ಹಲವು ಭಾಗಗಳಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರವಾರ ನಗರದ ಬಸ್ ನಿಲ್ದಾಣದ ಸಮೀಪವಿರುವ ಕರಾವಳಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್ ಮಾಲೀಕ KHB ನಿವಾಸಿ ಜಯರಾಮ ಮಡಿವಾಳ ಎಂಬಾತ ಗ್ರಾಹಕನ ಮೇಲೆ ಬಿಸಿನೀರು ಎರಚಿದ ಆರೋಪ ಎದುರಿಸುತ್ತಿದ್ದಾನೆ. ಗಾಯಗೊಂಡ ವ್ಯಕ್ತಿಯನ್ನು ಹಳಿಯಾಳದ ಸರ್ಕಾರಿ ನೌಕರ ಶಾಂತಕುಮಾರ ಕೆಂಪಣ್ಣಗೋಳ್ ಎಂದು ಗುರುತಿಸಲಾಗಿದೆ.

Customer injured after a hotel owner allegedly pours boiling water on him at Karwar hotel near the bus stand
ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿರುವುದು

ತಿಂಡಿ ಸರಿಯಿಲ್ಲವೆಂದು ಪ್ರಶ್ನಿಸಿದ್ದಕ್ಕೆ ಗಲಾಟೆ

ಶಾಂತಕುಮಾರ್ ಅವರು ಹಳಿಯಾಳದ ಖಜಾನೆ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿ ಕೆಲಸದ ನಿಮಿತ್ತ ಕಾರವಾರಕ್ಕೆ ಬಂದಿದ್ದ ಅವರಿಗೆ ಕೆಲಸ ಮುಗಿಯಲು ತಡವಾದ ಹಿನ್ನೆಲೆಯಲ್ಲಿ ಹಳಿಯಾಳಕ್ಕೆ ತೆರಳಲು ಬಸ್ ಸಿಗದೆ ಕಾರವಾರದಲ್ಲೇ ಉಳಿದುಕೊಂಡಿದ್ದರು.

Advertisement

ಮರುದಿನ ಬೆಳಗ್ಗೆ ತಿಂಡಿ ಸೇವಿಸಲು ಕರಾವಳಿ ಹೋಟೆಲ್‌ಗೆ ತೆರಳಿದ್ದ ವೇಳೆ, ನೀಡಿದ ಆಹಾರ ಸರಿಯಾಗಿಲ್ಲ ಎಂದು ಹೋಟೆಲ್ ಮಾಲೀಕನ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಕುದಿಯುತ್ತಿದ್ದ ನೀರು ಎರಚಿದ ಆರೋಪ

ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ಸಿಟ್ಟಿಗೆದ್ದ ಹೋಟೆಲ್ ಮಾಲೀಕ ಜಯರಾಮ ಮಡಿವಾಳ, ಅಡುಗೆ ಮನೆಯಲ್ಲಿ ಕುದಿಯುತ್ತಿದ್ದ ನೀರನ್ನು ಶಾಂತಕುಮಾರ್ ಅವರ ಮೇಲೆ ಎರಚಿದ್ದಾನೆ ಎನ್ನಲಾಗಿದೆ. ಇದರಿಂದ ಅವರ ದೇಹದ ಹಲವು ಭಾಗಗಳಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.

ತಕ್ಷಣ ಗಾಯಾಳುವನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.Karwar |ಕೈಗಾ-ಇಳೆಕಲ್ ಹೆದ್ದಾರಿಯಲ್ಲಿ ಬೃಹತ್ ವಿಕಿರಣ ರಕ್ಷಾಕವಚ ಸಾಗಾಟ – ಗ್ರಾಮಗಳಿಗಿಲ್ಲ ಕರೆಂಟ್ ! ಜನರಿಗೆ ರಸ್ತೆಯದ್ದೇ ಭಯ!

ಹೋಟೆಲ್ ಮಾಲೀಕನ ವಿರುದ್ಧ ಪ್ರಕರಣ ದಾಖಲು

ಘಟನೆಗೆ ಸಂಬಂಧಿಸಿದಂತೆ ಕಾರವಾರ ನಗರ ಠಾಣೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಹೋಟೆಲ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಹಕನ ಮೇಲೆ ಕುದಿಯುವ ನೀರು ಎರಚಿದ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕಾದ ಹೋಟೆಲ್ ಮಾಲೀಕನೇ ಇಂತಹ ಕೃತ್ಯಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement