Mundgod|12 ವರ್ಷದ ಬಾಲಕಿ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ್ದ ಆರೋಪಿ ಮನೆ ಧ್ವಂಸ

12-year-old minor girl rape case in Mundgod, Uttara Kannada, accused arrested and his house demolished by angry locals. 12-year-old minor girl rape case in Mundgod, Uttara Kannada, accused arrested and his house demolished by angry locals.
12-year-old minor girl rape case in Mundgod, Uttara Kannada, accused arrested and his house demolished by angry locals.

ಆರೋ ಡ್ರೈ ಕ್ಲೀನ್ ಕಾರವಾರಮಿಲನ್ ಎಂಟರ್ ಪ್ರೈಸೆಸ್ ಉತ್ತರ ಕನ್ನಡ

Mundgod|12 ವರ್ಷದ ಬಾಲಕಿ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ್ದ ಆರೋಪಿ ಮನೆ ಧ್ವಂಸ

ಕಾರವಾರ :- ಅಪ್ರಾಪ್ತ ಬಾಲಕಿ ಅತ್ಯಾಚಾರ ಮಾಡಿದ ಅರೋಪಿಯ ಮನೆಯನ್ನು ಉದ್ರಿಕ್ತಗೊಂಡ ಜನ ಧ್ವಂಸಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮಂಡಗೋಡಿನಲ್ಲಿ(mundgod) ನಡೆದಿದೆ.12 ವರ್ಷದ ದಲಿತ ಬಾಲಕಿಯನ್ನ ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿ ಮನೆಯವರಿಗೆ ಹೇಳದಂತೆ ನೋಡಿಕೊಂಡಿದ್ದನು. ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ ಪೋಷಕರು ವೈದ್ಯರಿಗೆ ತೋರಿಸಿದ್ದು ಈವೇಳೆ ಆ ಬಾಲಕಿ ಗರ್ಭಿಣಿ ಎಂದು ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತರಾದ ಮುಂಡಗೋಡು ಪೊಲೀಸರು ಅತ್ಯಾಚಾರ ಆರೋಪಿ ಇಸ್ಮಯಿಲ್ ಹುಲಗೂರು (65) ನಿನ್ನೆ ದಿನ ಬಂಧಿಸಿದ್ದರು. ಈ ಘಟನೆ ಊರಿನ ಜನರಿಗೆ ತಿಳಿಯುತಿದ್ಧಂತೆ ಅಕ್ರೋಶಗೊಂಡ ಜನ ಆರೋಪಿಯ ಮನೆಯನ್ನೇ ಧ್ವಂಸ ಮಾಡಿ ಅಕ್ರೋಶ ಹೊರಹಾಕಿದ್ದಾರೆ.

Advertisement

Mundgodu | 12 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ 65 ರ ವೃದ್ಧ !

ಘಟನೆ ಏನು ?

12 ವರ್ಷದ ಅತ್ಯಾಚಾರಕ್ಕೆ ಒಳಗಾದ ದಲಿತ ಬಾಲಕಿ ಹಾಗೂ ಆರೋಪಿ ಒಂದೇ ಊರಿನವರಾಗಿದ್ದು ,ಇಸ್ಮಯಿಲ್ ಹುಲಗೂರು ಈ ಬಾಲಕಿಯನ್ನ ಮೊದಲು ಪುಸಲಾಯಿಸಿ ವಿಶ್ವಾಸ ಗಳಿಸಿದ್ದಾನೆ .ಈ ವಿಶ್ವಾಸಕ್ಕೆ ನಂಬಿಕೆ ದ್ರೋಹ ವೆಸಗಿದ ಆರೋಪಿ ಕಳೆದ ಎಂಟೂವರೆ ತಿಂಗಳ ಹಿಂದೆ ತನ್ನ ಮನೆಯಲ್ಲಿ ಅತ್ಯಾಚಾರ ಎಸಗಿದ್ದಾನೆ. ಯಾರಿಗೂ ಹೇಳದಂತೆ ಬಾಲಕಿಗೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾನೆ. ನಂತರ ಬಾಲಕಿಯು ಗರ್ಭಿಣಿಯಾಗಿದ್ದು , ತೀವ್ರ ಹೊಟ್ಟೆನೋವು ಬಂದಾಗ ಪೋಷಕರು ಮಗಳನ್ನ ಮುಂಡಗೋಡಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ತಪಾಸಣೆ ಮಾಡಿದಾಗ ಬಾಲಕಿ ಗರ್ಭಿಣಿಯಾಗಿದ್ದು ಎಂಟೂವರೆ ತಿಂಗಳು ಎಂದು ಗೊತ್ತಾಗಿದೆ. ಬಾಲಕಿಯನ್ನ ತನಿಖೆ ನಡೆಸಿದಾಗ ಇಸ್ಮಯಿಲ್ ಹುಲಗೂರು ಅತ್ಯಾಚಾರ ಮಾಡಿದ ಬಗ್ಗೆ ಬೆಳಕಿಗೆ ಬಂದಿದೆ. ಇನ್ನು ಆರೋಪಿಯನ್ನ ಬಂಧಿಸಿದ್ದು ಜನ ಈತನ ಹೇಯ ಕೃತ್ಯಕ್ಕೆ ಆಗ್ರೋಶಗೊಂಡು ಆತನ ಮನೆಯನ್ನ ಸಂಪೂರ್ಣ ಧ್ವಂಸ ಮಾಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement