Karwar | ಬಿಜೆಪಿ ಕಾರ್ಯಕರ್ತರ ಬಳಿ ಭಿಕ್ಷೆ ಬೇಡಿಸಿದ ಸಂಸದ ಕಾಗೇರಿ! ಪ್ರತಿಭಟನೆಯಲ್ಲಿ ಸ್ವತಹಾ ಬೇಡಲಿಲ್ಲ  ಕಾರಣ ?

ಕಾರವಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು. ಕಾರವಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು.
ಕಾರವಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು.

Karwar | ಬಿಜೆಪಿ ಕಾರ್ಯಕರ್ತರ ಬಳಿ ಭಿಕ್ಷೆ ಬೇಡಿಸಿದ ಸಂಸದ ಕಾಗೇರಿ! ಪ್ರತಿಭಟನೆಯಲ್ಲಿ ಸ್ವತಹಾ ಬೇಡಲಿಲ್ಲ  ಕಾರಣ ? ವಿಡಿಯೋ ನೋಡಿ:-

ಕಾರವಾರ:ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ಆಡಳಿತ ವೈಫಲ್ಯವನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ನಗರದ ಸುಭಾಷ್ ವೃತ್ತದಲ್ಲಿ ಶುಕ್ರವಾರ ಭಿಕ್ಷೆ ಬೇಡುವ ಮೂಲಕ ವಿನೂತನ ರೀತಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತ್ರತ್ವದಲ್ಲಿ ನಡೆಯಿತು.

Advertisement

ಈ ಸಂದರ್ಭದಲ್ಲಿ ಬಿಜೆಪಿ(bjp) ಕಾರ್ಯಕರ್ತರು ಕೈಯಲ್ಲಿ ವಿನೂತನ ರೀತಿಯಲ್ಲಿ ಸುತ್ತಮುತ್ತಲ ಅಂಗಡಿಯಲ್ಲಿ ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಭಿಕ್ಷೆ ಬೇಡಿದರು. ಆದರೇ ಖುದ್ದು ಉಪಸ್ತಿತರಿದ್ದ ಸಂಸದ ಕಾಗೇರಿ ಕಾಯಯಲ್ಲಿ ಡಬ್ಬಿ ಹಿಡಿದು ಭಿಕ್ಷೆ ಬೇಡಲಿಲ್ಲ.

ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ, 1975 (Karnataka Prohibition of Beggary Act, 1975) ನಡಿ ಸಾರ್ವಜನಿಕವಾಗಿ ಭಿಕ್ಷೆ ಬೇಡುವುದು ಅಪರಾಧ .ಆದರೇ ಕೆಲವು ಸಂದರ್ಭದಲ್ಲಿ ಈ ಕಾಯ್ದೆಯಲ್ಲಿ ವಿನಾಯಿತಿ ಸಹ ಇದೆ.ಸಾರ್ವಜನಿಕ ಸ್ಥಳದಲ್ಲಿ ಹಣ ಕ್ಕಾಗಿ ಭಿಕ್ಷೆ ಬೇಡುವುದು ಅಪರಾಧ . ಆದರೇ ಸಾಂಕೇತಿಕವಾಗಿ ಅನುಮತಿ ಪಡೆದು ಪ್ರತಿಭಟನಾ ರೂಪದಲ್ಲಿ ಭಿಕ್ಷೆ ಬೇಡುವುದಕ್ಕೆ ವಿನಾಯಿತಿ ಇದೆ. ದವಂಗತ ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದಾಗ ಈ ಕಾಯ್ಸೆಯನ್ನ ಜಾರಿಗೆ ತಂದರು. 6 ಜೂನ್ 1975 ರಲ್ಲಿ ಈ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದರು. ಸೆಕ್ಷನ್ 2(2)(a): ಸಾರ್ವಜನಿಕ ಸ್ಥಳದಲ್ಲಿ ಯಾವುದೇ ನೆಪದಲ್ಲಾದರೂ ಹಣ ಅಥವಾ ಇತರ ವಸ್ತುಗಳನ್ನು ಭಿಕ್ಷೆಯಾಗಿ ಕೇಳುವುದು ಭಿಕ್ಷಾಟನೆಯ ವ್ಯಾಖ್ಯಾನಕ್ಕೆ ಬರಬಹುದು.ಇದು ಪ್ರತಿಭಟನೆಯ ಸಾಂಕೇತಿಕ ಇರಬಹುದು ,ಅಥವಾ ಇನ್ಯಾವುದೇ ಕಾರಣ ಇರಬಹುದು ಆದರೇ ಕ್ರಮ ಕೈಗೊಂಡರೆ ಇದು ಅಪರಾಧ ಆಗುತ್ತದೆ. ನ್ಯಾಯವಾದಿಗಳ ಹಾಗೂ ನ್ಯಾಯಮೂರ್ತಿಗಳ ಮೇಲೆ ಶಿಕ್ಷೆ ಹಾಗೂ ಕುಲಾಸೆಗೊಳಿಸುವ ಅಧಿಕಾರವಿದೆ. ಕಾಗೇರಿ ರವರು ಸ್ಪೀಕರ್ ಆಗಿದ್ದವರು. ಹಲವು ಬಾರಿ ಸಚಿವರಾಗಿ ಜವಬ್ದಾರಿ ಸ್ಥಾನ ಹೊತ್ತವರು. ಹೀಗಾಗಿ ಜಾಣ ನಡೆ ತೆಗೆದುಕೊಂಡರೇ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

ಸರ್ಕಾರದ ವಿರುದ್ಧ ಬಿಜೆಪಿ ಆರೋಪ.

 ಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೇರಿರುವ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ರಸ್ತೆಯಲ್ಲಿ ಭಿಕ್ಷಾಟನೆ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, “ರಾಜ್ಯದಲ್ಲಿ ನಡೆಯುತ್ತಿರುವ ಸಾಲು ಸಾಲು ಹಗರಣಗಳು ಹಾಗೂ ಆಡಳಿತಾತ್ಮಕ ವೈಫಲ್ಯಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದೆ. ದೆಹಲಿಗೆ ಹೋದಾಗ ಅಲ್ಲಿನ ಸಂಸದರು ‘ಕರ್ನಾಟಕದಲ್ಲಿ ಏನು ನಡೆಯುತ್ತಿದೆ?’ (ಕರ್ನಾಟಕ ಮೆ ಕ್ಯಾ ಚಲ್ ರಹಾ ಹೈ?) ಎಂದು ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ತೀವ್ರ ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಯೋಜನೆಗಳ ಹಣ ಸಮರ್ಪಕವಾಗಿ ತಲುಪದಿರುವುದು, ವಾಲ್ಮೀಕಿ ನಿಗಮದ ಹಗರಣ, ಕೆಪಿಎಸ್‌ಸಿ ನೇಮಕಾತಿಯಲ್ಲಿ ಲಂಚ, ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸದಿರುವುದು ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸರ್ಕಾರದ ವೈಫಲ್ಯಕ್ಕೆ ಕನ್ನಡಿಯಾಗಿವೆ ಎಂದರು.

“ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಮುಖ್ಯಮಂತ್ರಿಗಳ ಅಧೀನದಲ್ಲಿರುವ ಆರ್ಥಿಕ ಇಲಾಖೆಯೇ ಬೊಕ್ಕಸದಲ್ಲಿ ಹಣವಿಲ್ಲವೆಂದು ಹೊಸ ಯೋಜನೆ ಘೋಷಿಸದಂತೆ ಸೂಚಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದೊಡ್ಡ ಮೊತ್ತದ ಅನುದಾನ ಘೋಷಿಸಿರುವುದು ಸರ್ಕಾರದ ವಿಪರ್ಯಾಸ” ಎಂದು ಕಾಗೇರಿ ಟೀಕಿಸಿದರು.

ಅಲ್ಲದೆ, ಸರ್ಕಾರವು ಕುಡಿಯುವ ನೀರು ಪೂರೈಸುವುದನ್ನು ಬಿಟ್ಟು ಕೇವಲ ಅಬಕಾರಿ ಇಲಾಖೆಯ ಆದಾಯವನ್ನೇ ನೆಚ್ಚಿಕೊಂಡು ಎಲ್ಲೆಡೆ ಮದ್ಯ ಲಭ್ಯವಾಗುವಂತೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಭಾಷ್ ವೃತ್ತದಿಂದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಮಾರ್ಗಮಧ್ಯೆ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ಹಣವನ್ನು ಆರ್ಥಿಕ ದಿವಾಳಿಯಾಗಿರುವ ರಾಜ್ಯ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಳುಹಿಸಿಕೊಡುವುದಾಗಿ ಮುಖಂಡರು ತಿಳಿಸಿದರು. Sirsi | ಶಿರಸಿಯ ಈ ಊರಿನ ಬಾವಿಯಲ್ಲಿ ಕಡ್ಡಿ ಗೀರಿದ್ರೂ ಬೆಂಕಿ ಹತ್ತುತ್ತೆ! ಕಾರಣ ಪತ್ತೆಗೆ ತಜ್ಞರ ಹರಸಾಹಸ?

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನ್ಯಾಯವಾದಿ ನಾಗರಾಜ ನಾಯಕ ಸೇರಿದಂತೆ ಪಕ್ಷದ ಹಲವು ಪ್ರಮುಖರು ಪಾಲ್ಗೊಂಡಿದ್ದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement