Yallapur| ಜನಪ್ರತಿನಿಧಿಗಳಿಗೆ ಮಾತಿನ ಏಟು-ಎದುರೇಟು ! ಐದು ನಿರ್ಣಯ ಕೈಗೊಂಡು 15 ದಿನದ ಗಡುವು ಏನದು ?
ಕಾರವಾರ /ಯಲ್ಲಾಪುರ: ಬೇಡ್ತಿ-ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಯಲ್ಲಾಪುರದಲ್ಲಿ(yallapur) ಪ್ರತಿಭಟನಾ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಹೋರಾಟಗಾರ ಬಿ.ಎಂ ಕುಮಾರಸ್ವಾಮಿರವರು ಮಾತಿನ ಏಟು ಕೊಟ್ಟರು.

ನದಿ ಯೋಜನೆಯನ್ನು ಕೈಬಿಡುವ ಬಗ್ಗೆ ಇಷ್ಟು ಹೋರಾಟ ನಡೆದರೂ ಸರ್ಕಾರದ ಕಡೆಯಿಂದ ಯಾವ ಪ್ರತಿಕ್ರಿಯೆಯೂ ಕಾಣುತ್ತಿಲ್ಲ, ಇಷ್ಟೆಲ್ಲಾ ಹೋರಾಟ ನಡೆದರೂ ಸರ್ಕಾರದಿಂದ ಏನೂ ಕ್ರಮ ಕಾಣುತ್ತಿಲ್ಲ,ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿರುವ ಹಗಲು ದರೋಡೆ ಇದು.ಜನರು ನಿಮ್ಮನ್ನು ಆಯ್ಕೆ ಮಾಡಿದ್ದಾರೆ ನೀವು ಬೆಂಬಲ ಕೊಡಬೇಕು,ನಾಯಕತ್ವ ನೀಡಬೇಕುಕೆಲಸಮಾಡಬೇಕು ,ಇಡೀ ಜಿಲ್ಲೆಯ ಜನರು ನಿಮ್ಮೊಂದಿಗೆ ಇದ್ದಾರೆ.ಆದರೇ ನೀವು ಅಸಾಹಯಕತೆ ಪ್ರದರ್ಶನ ಮಾಡುತ್ತಾ ,ಕೆಲವುಸಲ ಇದಾಗಬಹುದು,ಕೆಲವುಸಲ ಅದಾಗಬಹುದು ಪ್ರಜಾಪ್ರಭುತ್ವದಲ್ಲಿ ಎಂದು ಈ ರೀತಿ ಮಾತನಾಡುತ್ತಾ ಇರುತ್ತೀರಿ ,ಕಸ್ತೂರಿ ರಂಗನ್ ವರದಿ ಬೇಡ ಅಂತ ದಿನನಿತ್ಯ ಕಚ್ಚಾಡುತ್ತಾ ಇರುತ್ತೀರುವವರು ಎಲ್ಲರೂ ಒಟ್ಟಾದಿರಿ .ಆದರೇ ಈ ಯೋಜನೆ ಬೇಡ ಎಂದು ಯಾಕೆ ನೀವು ಒಗ್ಗಟ್ಟಾಗಿ ಧ್ವನಿ ಎತ್ತಲಿಲ್ಲ .ಅದೇ ಒಗ್ಗಟ್ಟನ್ನ ನದಿ ವಿಷಯದಲ್ಲಿ ಯಾಕೆ ತೋರಿಸಲಿಲ್ಲ ,ಇಲ್ಲಿನ ಜನರ ಮತ ,ಮತ್ತೊಮ್ಮೆ ಅಧಿಕಾರ ಬೇಕಾದರೇ ,ನಿಮಗೆ ರಾಜಕೀಯ ಭವಿಷ್ಯ ಇರಬೇಕು ಎಂದಾದರೇ ಇಲ್ಲಿನ ಜನರ ಧ್ವನಿಯಾಗಿ ಕೂಡಲೇ ಈ ಯೋಜನೆ ನಿಲ್ಲಬೇಕು ಎಂದು ದ್ವನಿ ಎತ್ತಿ ಎಂದು ಜಾಡಿಸಿದರು.ಇದೇ ಸಂದರ್ಭದಲ್ಲಿ ಕಾಗೇರಿ ಎದ್ದುನಿತ್ತು ಸ್ಪಷ್ಟನೆ ನೀಡಲು ಮುಂದಾದರೇ,ಶಾಸಕ ಶಿವರಾಮ್ ಹೆಬ್ಬಾರ ವೇದಿಕೆಯಿಂದ ನಿರ್ಗಮಿಸಲು ಸಿದ್ದರಾದರು.ಇನ್ನು ಸಂಸದ ಕಾಗೇರಿಯವರು ಮೈಕ್ ತೆಗೆದುಕೊಂಡು ಕುಮಾರಸ್ವಾಮಿಯವರು ಶಿವಮೊಗ್ಗ ಜಿಲ್ಲೆಯವರು. ಅವರ ಮಾತನ್ನ ಯಾವರೀತಿಯಲ್ಲಿ ಅರ್ಥೈಸಿಕೊಳ್ಳಬೇಕು ಎಂದು ಜಿಲ್ಲೆಯ ಪ್ರಜ್ಞಾವಂತ ಜನರು ಅರ್ಥೈಸಿಕೊಳ್ಳುತ್ತಾರೆ.ಇದೇ ಜನರಿಂದ ವಿಶ್ವಾಸ ಗಳಿಸಿಯೇ ಆಯ್ಕೆಯಾದವರು,ನಿಮಗಿಂತಲೂ ನಮಗೆ ವಿಶ್ವಾಸ ಇಟ್ಟುಕೊಂಡಿದ್ದಾರೆ, ನಾವು ಜನರ ಕಣ್ಣಮುಂದೆಯೇ ನಿಯೋಗ ಹೋಗಿದ್ದೇವೆ ,ಅಸೆಂಬ್ಲಿಯಲ್ಲಿ ಮಾತಾನಾಡಿ,ನಮ್ಮ ನಮ್ಮ ಪ್ರಯತ್ನ ಮಾಡಿದ್ದೇವೆ.ಆದರೇ ಈ ಯೋಜನೆ ನಿಲ್ಲಿಸುವ ಹಿನ್ನಲೆಯಲ್ಲಿ ನೀವು ನಿಮ್ಮ ಪ್ರಭಾವ ಬಳಸಿ ಈ ಯೋಜನೆ ನಿಲ್ಲಿಸಲು ನಿಮ್ಮ ಕೊಡುಗೆ ಕೊಡಿ ಎಂದು ಸವಾಲು ಹಾಕಿದರು.ನೀವು ಜನರ ಎದುರಿಗೆ ನಮ್ಮ ಬಗ್ಗೆ ಮಾತನಾಡುವುದಕ್ಕೆ ಜನರಿಗೆ ಬಹಳಾ ಸಂತೋಷ ಆಗುತ್ತೆ,ಆದರೇ ಇಂತಹ ಯೋಜನೆ ಬೇಕು ಅಂತ ಹೇಳುವವರೇ ನಿಮ್ಮಂತ ವಿಜ್ಞಾನಿಗಳು ನಮಗೆ.ಹಾಗಾಗಿ ನಾವು ಸಹ ಯಾವುದು ಬೇಕು ,ಯಾವುದು ಬೇಡ ಅಂತ ಯೋಚಿಸಿ ಸಾಕಾಗಿಹೋಗಿರ್ತೇವೆ.ಆಯಾ ಭಾಗದ ಜನರ ಬೇಡಿಕೆಗಳು ಸಹ ಇರುತ್ತದೆ.ಹಾಗಾಗಿ ನಿಮ್ಮ ಪ್ರಭಾವ ಬಳಸಿ , ನಮಗೂ ಅನಿಸುತ್ತದೆ ಇಲ್ಲಿಬಂದು ಭಾಷಣ ಮಾಡಿ ಹೋದವರು ಆಮೇಲೆ ಪತ್ತೆಯೇ ಇಲ್ಲ ಅಂತ ನಮಗೂ ಅನಿಸಬಹುದು.ಹಾಗೆ ನಮಗೆ ಅನಿಸಬಾರದು,ನಿಮ್ಮ ಹುರಿತನ ಉಪಯೋಗಿಸಿ , ಬರೀ ಭಾಷಣ ಮಾಡೋದ್ರಿಂದ ಏನೂ ಆಗೋದಿಲ್ಲ ,ನೀವು ನಿಮ್ಮ ತಾಂತ್ರಿಕ ಸಹಾಯ ನೀಡಿ ,ನಮ್ಮಜೊತೆ ಇರಿ ,ನಾವು ಇದ್ದೇವೆ ಜನರನ್ನ ಪ್ರತಿನಿಧಿಸೋಕೆ . ಕುಮಾರಸ್ವಾಮಿ ಹೋದ್ರೆ ಯಾವ ಗೌರವ ಇದೆಯೋ ,ಜನಪ್ರತಿನಿಧಿಗಳು ಹೋದ್ರೆ ಯಾವ ಗೌರವ ಸಿಗುತ್ತೆ ಅಂತ ಎಲ್ಲರಿಗೂ ಗೊತ್ತಿದೆ. ನಾವಿದ್ದೇವೆ ಜನರ ಪ್ರತಿನಿಧಿಸೋಕೆ ಎಂದು ಟಾಂಗ್ ಕೊಟ್ಟರು.ಇನ್ನು ಸಂಸದ ಕಾಗೇರಿಯಿಂದ ಮೈಕ್ ಕಿತ್ತುಕೊಂಡ ಶಾಸಕ ಹೆಬ್ಬಾರ್ ,ಕಾಗೇರಿ ಮಾತಿಗೆ ನನ್ನ ಸಹಮತ ಇದೆ.ಕಯಮಾರಸ್ವಾಮಿಯವರು ನಮಗೂ ಉಪದೇಶ ಮಾಡಲಿ,ಜನರಿಗೂ ಉಪದೇಶ ಮಾಡಲಿ, ಆದರೇ ಎಲ್ಲಾ ಜನಪ್ರತಿನಿಧಿಗಳು ಏನೂ ಅಲ್ಲ ಎನ್ನುವ ಮಾತಿದೆಯಲ್ಲಾ ,ಖಡಾಖಂಡಿತವಾಗಿ ಒಪ್ಪತಕ್ಕ ಮಾತಲ್ಲ .ಎಂದು ಉತ್ತರ ನೀಡಿದರು.

ಐದು ನಿರ್ಣಯ ! ಖಡಕ್ ಎಚ್ಚರಿಕೆ ?
ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆವಿರೋಧಿಸಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಹೆದ್ದಾರಿ ತಡೆ ಕಾರ್ಯಕ್ರಮಕ್ಕೆ ಯಲ್ಲಾಪುರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಯೋಜನೆ ರದ್ದುಪಡಿಸುವಂತೆ ಆಗ್ರಹಿಸಿ ಸಾವಿರಾರು ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳು ನದಿ ಉಳಿಸಿ ಬೋರ್ಡ್ಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಬೃಹತ್ ಪ್ರತಿಭಟನೆ ನಡೆಸಿದರು. ಈ ಮೂಲಕ ಯೋಜನೆ ವಿರುದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ತೀವ್ರ ಒತ್ತಡ ಹೇರಲಾಯಿತು.ಹಲವು ಗಂಟೆಗಳ ಕಾಲ ವಾಹನ ಸಂಚಾರ ತಡೆದು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಯಿತು.
ಪ್ರತಿಭಟನಾ ಸಮಾವೇಶದಲ್ಲಿ ಆರ್ಥಿಕ ತಜ್ಞ ಬಿ.ಎಂ. ಕುಮಾರಸ್ವಾಮಿ, ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ಶಿವರಾಮ ಹೆಬ್ಬಾರ, ಮಾಜಿ ಶಾಸಕ ವಿ.ಎಸ್. ಪಾಟೀಲ ಹಾಗೂ ತಜ್ಞ ಕುಮಾರ ಕಲಾನಂದಮಣಿ ಸೇರಿದಂತೆ ಅನೇಕರು ಭಾಗವಹಿಸಿ ಯೋಜನೆಯಿಂದಾಗುವ ಅನಾಹುತಗಳ ಬಗ್ಗೆ ಧ್ವನಿ ಎತ್ತಿದರು.
ಐದು ನಿರ್ಣಯ ಕೈಗೊಂಡ ಸಮಿತಿ -ಜನಪ್ರತಿನಿಧಿಗಳಿಗೆ ಎಚ್ಚರಿಕೆ ಸಂದೇಶ.
ಯಲ್ಲಾಪುರ (yallapur)ರಸ್ತೆ ತಡೆ ಹೋರಾಟದಲ್ಲಿ ಸಮಿತಿಯು ಐದು ನಿರ್ಣಯ ಕೈಗೊಳ್ಳುವ ಮೂಲಕ ಜಿಲ್ಲೆಯ ಜನಪ್ರತಿನಿಧಿಗಳಿಗೆ 15 ದಿನದ ಗಡುವು ನೀಡಿ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಯಿತು.
ಸೀಬರ್ಡ್ ನೌಕಾನೆಲೆ, ಕೈಗಾ ಅಣುಸ್ಥಾವರ, ಸುಪಾ ಆಣೆಕಟ್ಟು, ನಾಗಝರಿ ಪವರ್ ಹೌಸ್, ಬೊಮ್ಮನಳ್ಳಿ, ತಟ್ಟಿಹಳ್ಳ, ಕೊಡಸಳ್ಳಿ, ಕದ್ರಾ ಆಣೆಕಟ್ಟುಗಳು, ಶರಾವತಿ ಟೆಲೆರೇಸ್ ಯೋಜನೆ, ಟಿಬೆಟಿಯನ್ ಕಾಲೋನಿ ಹೀಗೆ ಹಲವು ಕಾರಣಗಳಿಗೆ ರಾಜ್ಯ ಹಾಗೂ ರಾಷ್ಟ್ರಕ್ಕಾಗಿ ಜಿಲ್ಲೆಯ ಜನತೆ ಸಾವಿರಾರು ಎಕರೆ ಭೂಮಿ ತ್ಯಾಗ ಮಾಡಿದ್ದಾರೆ. ರಾಜ್ಯ-ರಾಷ್ಟ್ರಕ್ಕಾಗಿ ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡಿದ್ದಾರೆ.ಹಾಗೆ ನೋಡಿದರೆ ಪರ ಹಿತಕ್ಕಾಗಿ ಇಷ್ಟೊಂದು ತ್ಯಾಗ ಮಾಡಿದ ಜಿಲ್ಲೆ ಇನ್ನೊಂದಿಲ್ಲ. ಆದರೆ ಮತ್ತೆ ಮತ್ತೆ ದೊಡ್ಡ ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿಗೆ ತರಲು ಮುಂದಾದರೆ ತ್ಯಾಗ ಮಾಡಲು ಜಿಲ್ಲೆಯ ಜನರು ಸಿದ್ಧರಿಲ್ಲ ಹೀಗಾಗಿ ಈ ಐದು ನಿರ್ಣಯ ಮಾಡಲಾಗಿದೆ ಎಂದು ಸಮಿತಿಯ ಸಂಚಾಲಕರಾದ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ಇದನ್ನೂ ಓದಿ:-Yallapur |ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ- ಪ್ರತಿಭಟನೆ ಕಿಚ್ಚು ಹೇಗಿತ್ತು?ವಿಡಿಯೋ ನೋಡಿ
ಮೊದಲನೆಯದಾಗಿ ಜಿಲ್ಲೆಯನ್ನು ಪ್ರತಿನಿಧಿಸುವ ಎಲ್ಲಾ ಜನಪ್ರತಿನಿಧಿಗಳು ಸಂಸದರು/ಶಾಸಕರು/ಪರಿಷತ್ ಸದಸ್ಯರು ಪಕ್ಷ ಬೇಧ ಮರೆತು ಒಂದೆಡೆ ಸೇರಿ, ಯೋಜನೆಗೆ ತಡೆ ಹಾಕುವ ಬಗ್ಗೆ ಗಟ್ಟಿಯಾದ ತೀರ್ಮಾನವನ್ನು ಮುಂದಿನ 15 ದಿನಗಳಲ್ಲಿ ಮಾಡಬೇಕು. ಅದು ಆಗದೇ ಹೋದಲ್ಲಿ ತದನಂತರ ರಾಜ್ಯದ ಹಾಗೂ ಕೇಂದ್ರದ ಜನಪ್ರತಿನಿಧಿಗಳಿಗೆ ಕಣ್ಣು ತೆರೆಸುವ ಇತರ ಮಾರ್ಗಗಳನ್ನು ಶೋಧಿಸಬೇಕಾಗಿ ಬರಬಹುದು. ಎರಡನೆಯದಾಗಿ ಮಾರಕ ಯೋಜನೆಗಳಿಂದ ಆತಂಕಕ್ಕೆ ಸಿಲುಕಿರುವ ಜನರು ಕೇಂದ್ರ ಮತ್ತು ರಾಜ್ಯದ ಮಂತ್ರಿಗಳು/ಜನಪ್ರತಿನಿಧಿಗಳ ಸಾರ್ವಜನಿಕ ಕಾರ್ಯಕ್ರಮಗಳನ್ನು ಬಹಿಷ್ಕಾರ ಹಾಕುವಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಗೆ ಹೊರಳಬಹುದು.ಮೂರನೆಯದಾಗಿ ಪಶ್ಚಿಮ ಘಟ್ಟಪ್ರದೇಶದ ಸೂಕ್ಷ್ಮ ಮತ್ತು ಅತಿ ಮಹತ್ವದ ಪರಿಸರದ ಸಂರಕ್ಷಣೆಗಾಗಿ ಮುಂಬರುವ ಎಲ್ಲಾ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಮತದಾನ ಬಹಿಷ್ಕಾರದಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬರಬಹುದು. ನಾಲ್ಕನೆಯದಾಗಿ ಇದೆಲ್ಲದಕ್ಕೂ ಪರಿಹಾರ ಜಿಲ್ಲೆಯ ಜನಪ್ರತಿನಿಧಿಯಗಳು ಒಗ್ಗಟ್ಟು ಮೆರೆದು,ಪಕ್ಷಭೇದ ಮರೆತು ಜಿಲ್ಲೆಯ ಹಿತ ಕಾಪಾಡಲು ಒಮ್ಮತದ ತೀರ್ಮಾನಕ್ಕೆ ಬರುವುದು.
ಐದನೆಯದಾಗಿ ಇಂದು ಇಲ್ಲಿ ಸಹಸ್ರಾರು ಪರಿಸರಾಸಕ್ತರು ಜಮಾಯಿಸಿದ್ದಾರೆ.ಈ ಕ್ಷಣದಿಂದ ಆಳುವ ಸರಕಾರಗಳನ್ನು ಎಚ್ಚರಿಸುವ ಸಾಮಾಜಿಕ ಜಾಲತಾಣ ಜನಜಾಗೃತಿ ಮತ್ತು ಪ್ರತಿಭಟನಾ ಚಳವಳಿಯನ್ನು ಆರಂಭಿಸುವುದು. ಎಂಬ ಐದು ನಿರ್ಣಯ ತೆಗೆದುಕೊಳ್ಳುವ ಮೂಲಕ ಜಿಲ್ಲೆಯ ಜನಪ್ರತಿನಿಧಿಗಳು, ರಾಜ್ಯ ಹಾಗೂ ಕೇಂದ್ರಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.
