Uttara Kannada | ಅಂಕೋಲಾ, ಭಟ್ಕಳ, ಜೋಯಿಡಾಕ್ಕೆ ನೂತನ ತಹಶೀಲ್ದಾರ್‌ಗಳ ನೇಮಕ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ(uttara Kannada) ಅಂಕೋಲಾ, ಭಟ್ಕಳ ಹಾಗೂ ಜೋಯಿಡಾ ತಾಲೂಕುಗಳಿಗೆ ನೂತನ ತಹಶೀಲ್ದಾರ್‌ಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿ ನವೆಂಬರ್ 9ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.Uttara Kannada | ದೆಹಲಿ ಕಾರ್ಯಕ್ರಮಕ್ಕೆ ಗೈರು; ಯುವ ಕಾಂಗ್ರೆಸ್‌ನ 6 ಪದಾಧಿಕಾರಿಗಳಿಗೆ ಅಮಾನತು ಆದೇಶ!
ಬೈಂದೂರು ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿರಾಜ ದೀಕ್ಷಿತ್ ಅವರನ್ನು ಅಂಕೋಲಾ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ. ಬೈಂದೂರು ತಾಲೂಕು ಕಚೇರಿಯ ತಹಶೀಲ್ದಾರ್ ಆಗಿದ್ದ ರಾಮಚಂದ್ರಪ್ಪ ಅವರನ್ನು ಭಟ್ಕಳ ತಾಲೂಕಿಗೆ ನೇಮಕ ಮಾಡಲಾಗಿದೆ.
ಅದೇ ರೀತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ ಎಂ. ಕಲ್ಲೊಳ್ಳಿ ಅವರನ್ನು ಜೋಯಿಡಾ ತಾಲೂಕಿನ ನೂತನ ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ.
ಮೂರು ತಾಲೂಕುಗಳ ಖಾಲಿ ಹುದ್ದೆ ಭರ್ತಿ
ಅಂಕೋಲಾ, ಭಟ್ಕಳ ಹಾಗೂ ಜೋಯಿಡಾ ತಾಲೂಕುಗಳಲ್ಲಿ ಖಾಲಿ ಇದ್ದ ತಹಶೀಲ್ದಾರ್ ಹುದ್ದೆಗಳನ್ನು ಈ ವರ್ಗಾವಣೆ ಮೂಲಕ ಭರ್ತಿ ಮಾಡಲಾಗಿದೆ.Uttarakannada,ಶಿವಮೊಗ್ಗ ಸೇರಿದಂತೆ ಜಿಲ್ಲಾಧಿಕಾರಿ ವರ್ಗಾವಣೆ ಲಕ್ಷ್ಮಿಪ್ರಿಯಾ ಬೆಂಗಳೂರಿಗೆ ವರ್ಗಾವಣೆ
ಸರ್ಕಾರದ ವರ್ಗಾವಣೆ ಆದೇಶ ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ಕಂದಾಯ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


