Dandeli | ಆಂಧ್ರಪ್ರದೇಶದ ಕತ್ತಲೆಗೆ ಬೆಳಕಾದ ಉತ್ತರ ಕನ್ನಡದ ಹೆಸ್ಕಾಂ ಸಿಬ್ಬಂದಿ: ಆಂಧ್ರ ಜನರಿಂದ ಮೆಚ್ಚುಗೆ.
ಕಾರವಾರ: ಚಂಡಮಾರುತ ಹಾಗೂ ಭೀಕರ ಪ್ರವಾಹದಿಂದ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದ ಆಂಧ್ರಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸುವ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ(dandeli) ಇಬ್ಬರು ಹೆಸ್ಕಾಂ ಸಿಬ್ಬಂದಿ ಸಲ್ಲಿಸಿದ ಸೇವೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.Dandeli | ಪ್ರವಾಸಿಗನ ಒಂದು ಧ್ವನಿಗೆ ಓಡೋಡಿ ಬಂತು ಮೊಸಳೆ -ಕೊನೆಗಾಗಿದ್ದೇನು?
ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಚಂಡಮಾರುತ ಹಾಗೂ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದ ಸಾವಿರಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಹಲವು ಗ್ರಾಮಗಳು ಕತ್ತಲಿನಲ್ಲಿ ಮುಳುಗಿದ್ದವು. ಈ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವನ್ನು ತುರ್ತಾಗಿ ಮರುಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರ ಕರ್ನಾಟಕದ ಸಹಕಾರ ಕೋರಿತ್ತು.Dandeli |ರೈಲ್ವೆ ಬ್ರಿಡ್ಜ್ ಕಾಮಗಾರಿವೇಳೆ ಮಣ್ಣು ಕುಸಿತ ರೈಲ್ವೆ ಸಿಬ್ಬಂದಿ ಸಾವು -ಓರ್ವ ಗಂಭೀರ
ಆಂಧ್ರಪ್ರದೇಶದ ನೆರವಿಗೆ ಧಾವಿಸಿದ ಕರ್ನಾಟಕದ ಹೆಸ್ಕಾಂ ಸಿಬ್ಬಂದಿ ತಂಡದಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಇಬ್ಬರು ಲೈನ್‌ಮನ್‌ಗಳಾದ ಬಾಳೇಶ ರುದ್ರಾಪುರ ಹಾಗೂ ರೇವಣಸಿದ್ದಪ್ಪ ಡಂಬಳ ಅವರೂ ಭಾಗಿಯಾಗಿದ್ದರು.
ಕರ್ನಾಟಕದ ಹೆಸ್ಕಾಂನ ಎಂಟು ವಿಭಾಗಗಳಿಂದ ಆಯ್ಕೆ ಮಾಡಲಾದ ಲೈನ್‌ಮನ್‌ಗಳನ್ನು ವಿದ್ಯುತ್ ಮರುಸ್ಥಾಪನೆ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಅದರಂತೆ ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದ ಈ ಇಬ್ಬರು ಸಿಬ್ಬಂದಿ ಆಂಧ್ರಪ್ರದೇಶಕ್ಕೆ ತೆರಳಿ ಸತತ ಎಂಟು ದಿನಗಳ ಕಾಲ ಹಗಲಿರುಳು ಶ್ರಮಿಸಿದ್ದಾರೆ.Dandeli | ದಾಂಡೇಲಿ ಉರುಗ ರಕ್ಷಕ ರಜಾಕ್ ಶಾಕ್ ಗೆ ಅರಣ್ಯ ಇಲಾಖೆ ನೋಟಿಸ್ – ಪರಿಸರ ಪ್ರೇವಿಗಳಿಂದ ಪ್ರಕರಣ ದಾಖಲಿಸುವ ಎಚ್ಚರಿಕೆ .
ಪ್ರವಾಹದ ಭೀಕರತೆ, ಪ್ರತಿಕೂಲ ಹವಾಮಾನ ಹಾಗೂ ಹಲವು ಸವಾಲುಗಳ ನಡುವೆಯೂ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡ ಇವರು, ವಿದ್ಯುತ್ ಕಂಬಗಳನ್ನು ಮರುಸ್ಥಾಪಿಸಿ ತುಂಡಾಗಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸುವ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಆಂಧ್ರಪ್ರದೇಶದ ನಾಗಲುಪ್ಪಲಪಾಡು ಸೇರಿದಂತೆ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ವಿದ್ಯುತ್ ಮರುಸ್ಥಾಪನೆ ಕಾರ್ಯದಲ್ಲಿ ಈ ಸಿಬ್ಬಂದಿ ಶ್ರಮಿಸಿದ್ದಾರೆ. ಸುಮಾರು 30 ಸಾವಿರ ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ದುರಸ್ತಿ ಕಾರ್ಯಾಚರಣೆ ಮುಂದುವರಿದಿತ್ತು.
ಸ್ವಂತ ಊರು, ಕುಟುಂಬದಿಂದ ದೂರವಿದ್ದು, ಮತ್ತೊಂದು ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಸೇವೆ ಸಲ್ಲಿಸಿದ ದಾಂಡೇಲಿಯ ಈ ಇಬ್ಬರು ಹೆಸ್ಕಾಂ ಸಿಬ್ಬಂದಿಯ ಕರ್ತವ್ಯನಿಷ್ಠೆ ಹಾಗೂ ಮಾನವೀಯ ಸೇವೆಗೆ ಆಂಧ್ರಪ್ರದೇಶದ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆಂಧ್ರಪ್ರದೇಶ ಸರ್ಕಾರವೂ ಇವರ ಸೇವೆಯನ್ನು ಶ್ಲಾಘಿಸಿದೆ.
ತಮ್ಮ ಕರ್ತವ್ಯವನ್ನು ಕೇವಲ ಕೆಲಸವೆಂದು ಪರಿಗಣಿಸದೆ, ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗುವ ಸೇವೆಯಾಗಿ ಸ್ವೀಕರಿಸಿದ ಬಾಳೇಶ ರುದ್ರಾಪುರ ಹಾಗೂ ರೇವಣಸಿದ್ದಪ್ಪ ಡಂಬಳ ಅವರು ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.


