Dandeli | ದಾಂಡೇಲಿ ಉರುಗ ರಕ್ಷಕ ರಜಾಕ್ ಶಾಕ್ ಗೆ ಅರಣ್ಯ ಇಲಾಖೆ ನೋಟಿಸ್ – ಪರಿಸರ ಪ್ರೇವಿಗಳಿಂದ ಪ್ರಕರಣ ದಾಖಲಿಸುವ ಎಚ್ಚರಿಕೆ .

Dandeli news Dandeli news
Rajak sha

 Dandeli | ದಾಂಡೇಲಿ ಉರುಗ ರಕ್ಷಕ ರಜಾಕ್ ಶಾಕ್ ಗೆ ಅರಣ್ಯ ಇಲಾಖೆ ನೋಟಿಸ್ – ಪರಿಸರ ಪ್ರೇವಿಗಳಿಂದ ಪ್ರಕರಣ ದಾಖಲಿಸುವ ಎಚ್ಚರಿಕೆ .

Dandeli/ ಕಾರವಾರ:- ಆಹಾರ ನುಂಗಿ ಹೊಲದ ಮರವೊಂದರ ಬಳಿ ವಿಶ್ರಮಿಸಿದ್ದ ಹೆಬ್ಬಾವನ್ನು ರಕ್ಷಣೆ ಹೆಸರಿನಲ್ಲಿ ಹಿಡಿದು ಬೇರೆಡೆ ಬಿಟ್ಟಿದ್ದಲ್ಲದೇ ಅದನ್ನು ಹಿಂಸಾತ್ಮಕ ರೀತಿಯಲ್ಲಿ ಹಿಡಿದು ಅದರ ವಿಡಿಯೋ ಮಾಡಿ YouTube ಗೆ ವಿಡಿಯೋ ಹಂಚಿಕೆ ಸಂಬಂಧ ಹಳಿಯಾಳ ವಿಭಾಗದ ಡಿ.ಎಫ್.ಓ ಪ್ರಶಾಂತ್ ರವರು ದಾಂಡೇಲಿಯ ಉರುಗ ರಕ್ಷಕ ರಜಾಕ್ ಶಾ ರವರಿಗೆ ಅರಣ್ಯ ಕಾಯ್ದೆ ಷೆಡ್ಯುಲ್ 1 ರ ಉಲ್ಲಂಘನೆಯ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ:-Dandeli|ಕನ್ನಡವಾಣಿ ವರದಿ ಫಲಶೃತಿ-ಸ್ವಚ್ಛವಾದ ಕಾಳಿ ನದಿ ತೀರ ಪ್ರದೇಶ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೊಣಪ ಗ್ರಾಮದ ಬೇಬಿ ಶಟ್ಟಿ ರವರ ಹೊಲದಲ್ಲಿ 15 ಅಡಿ ಉದ್ದದ ಹೆಬ್ಬಾವು ಹಲವು ದಿನದಿಂದ ಓಡಾಡಿಕೊಂಡಿದ್ದು, ಅಂದು ಬೇಬಿಶಟ್ಟಿ ರವರ ಮನೆಯ ಕೋಳಿಯನ್ನ ನುಂಗಿ ವಿಶ್ರಮಿಸಿತ್ತು. ಈ ವೇಳೆ ಮನೆಯವರ ಮಾಹಿತಿ ಮೇರೆಗೆ ಬಂದ ರಜಾಕ್ ಶಾ ಮಲಗಿದ್ದ ಹೆಬ್ಬಾವನ್ನು ಎಳೆದು ಚೀಲಕ್ಕೆ ತುಂಬಲು ಪ್ರಯತ್ನ ಮಾಡಿದ್ದಾರೆ. ಈವೇಳೆ ಅವರ ಕೈಗೂ ಕಚ್ಚಿದ್ದು, ಕೈಗೆ ಗ್ಲೋಸ್ ಇದ್ದರಿಂದ ಯಾವುದೇ ತೊಂದರೆ ಆಗಲಿಲ್ಲ. ನಂತರ ಈ ಹೆಬ್ಬಾವನ್ನು ಹೊರಗೆ ಕೊಂಡೊಯ್ದು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ವೇಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಇದ್ದ ಕೋಳಿ ಹೊರಬಂದಿದೆ. ಇನ್ನು ಇತರ ಜನರು ಹೆಬ್ಬಾವನ್ನ ಮುಟ್ಟಿದ್ದಾರೆ. ಹೆಬ್ಬಾವನ್ನು ಉರುಗ ರಕ್ಷಕರು ಹಿಡಿಯುವ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಇರಬೇಕು ಹಾಗೂ ಅವರ ಉಪಸ್ತಿತಿಯಲ್ಲಿಯೇ ಹಿಡಿಯಬೇಕು. ಇನ್ನು ವಿಡಿಯೋ ಮಾಡುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಇರಲಿಲ್ಲ ಎಂಬ ಆರೋಪ ವಿದೆ. ನಂತರ ಅರಣ್ಯ ಇಲಾಖೆಯ ವಾಹನದಲ್ಲಿ ಈ ಹೆಬ್ಬಾವನ್ನು ಬಿಡಲಾಗಿದೆ. ಎಲ್ಲಾ ಹಂತವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು , ಉರಗ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನಲೆಯಲ್ಲಿ ರಜಾಕ್ ಶಾಗೆ ಅರಣ್ಯ ಇಲಾಖೆ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರ ನೀಡಿದ ರಜಾಕ್ ಶಾ ನೋಟಿಸ್ ಗೆ ಉತ್ತರ ನೀಡಿದ್ದು ಅರಣ್ಯ ಕಾಯ್ದೆ 1972 ರಡಿ ಯಾವುದೇ ಕಾಯ್ದೆ ಉಲ್ಲಂಘನೆ ಮಾಡಿಲ್ಲ, ಮಾಡಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಬದ್ದನಾಗಿರುತ್ತೇನೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದು ,ತಾವು YouTube ನಲ್ಲಿ ಷೇರ್ ಮಾಡಿದ್ದ ವಿಡಿಯೋವನ್ನು ಡಿಲಿಟ್ ಮಾಡಿದ್ದಾರೆ.  ಇದನ್ನೂ ಓದಿ:-Dandeli|ಅಂಬೇವಾಡಿ ಜನವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ

Advertisement

ರಾಜಾಕ್ ಶಾ ರವರು ಹಲವು ರೆಸ್ಕ್ಯೂ ಕಾರ್ಯವನ್ನು ಮಾಡಿದ್ದಾರೆ.ಆದರೇ ಯೂಟ್ಯೂಬ್ ಹುಚ್ಚಿನಲ್ಲಿ ಹಲವು ಪಕ್ಷಿ ,ಹಾವುಗಳ ವಿಡಿಯೋ ಹಂಚಿಕೊಂಡಿದ್ದಾರೆ. ಕೆಲವು ವಿಡೊಯೋಗಳು ಅತೀರೇಕದ್ದು ಇದ್ದು ಈ ವಿಡಿಯೋಗಳು ಸಮಾಜದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಪರಿಸರವಾದಿಗಳ ದೂರಾಗಿದ್ದು, ರಜಾಕ್ ಶಾ ರವರ ವಿರುದ್ಧ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement