Karwar | ಕೋಡಿಬಾಗ ಸೇತುವೆಯಿಂದ ಹಾರಲು ಯತ್ನಿಸಿದ ಮಹಿಳೆಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿ
ಕಾರವಾರ: ಸಮಯಪ್ರಜ್ಞೆ, ಧೈರ್ಯ ಹಾಗೂ ಮಾನವೀಯ ಕಾಳಜಿಯಿಂದ ಸೇತುವೆಯಿಂದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಮಹಿಳೆಯೊಬ್ಬರ ಜೀವವನ್ನು ಪೊಲೀಸ್ ಸಿಬ್ಬಂದಿ ಉಳಿಸಿದ ಘಟನೆ ಕಾರವಾರದ (karwar) ಕೋಡಿಬಾಗ ಸೇತುವೆಯಬಳಿ ನಡೆದಿದೆ.
ಸೋಮವಾರ ಬೆಳಿಗ್ಗೆ ಸುಮಾರು 8:25ರ ವೇಳೆಗೆ ಮಲ್ಲಾಪುರ ಪೊಲೀಸ್ ಠಾಣೆಯ ಸಿ.ಎಚ್.ಸಿ. ಸಾಯಿನಂದ ವಿ. ನಾಯ್ಕ ಅವರು 112-ಇ.ಆರ್.ಎಸ್.ಎಸ್. ಕರ್ತವ್ಯದ ನಿಮಿತ್ತ ಮಲ್ಲಾಪುರದಿಂದ ಕಾರವಾರಕ್ಕೆ ಬರುತ್ತಿದ್ದರು. ಈ ವೇಳೆ ಕೋಡಿಬಾಗ ಸೇತುವೆಯ ಮೇಲೆ ಮಹಿಳೆಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ.Karwar | ಬಿಜೆಪಿ ಕಾರ್ಯಕರ್ತರ ಬಳಿ ಭಿಕ್ಷೆ ಬೇಡಿಸಿದ ಸಂಸದ ಕಾಗೇರಿ! ಪ್ರತಿಭಟನೆಯಲ್ಲಿ ಸ್ವತಹಾ ಬೇಡಲಿಲ್ಲ ಕಾರಣ ?
ತಕ್ಷಣವೇ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮಹಿಳೆಯ ಬಳಿಗೆ ಧಾವಿಸಿದ ಅವರು, ಆಕೆಯನ್ನು ಹಿಡಿದುಕೊಂಡು ಸಾರ್ವಜನಿಕರ ಸಹಾಯದಿಂದ ಸುರಕ್ಷಿತವಾಗಿ ಸೇತುವೆಯಿಂದ ಕೆಳಗಿಳಿಸಿದ್ದಾರೆ. ಬಳಿಕ ಮಹಿಳೆಗೆ ಧೈರ್ಯ ತುಂಬಿ ಸಮಾಧಾನಪಡಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ 112-ಇ.ಆರ್.ಎಸ್.ಎಸ್. ಸಿಬ್ಬಂದಿ ಸೇತುವೆಯ ಮೇಲೆ ಜಮಾಯಿಸಿದ್ದ ಜನರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ನಂತರ ಮಹಿಳೆಯನ್ನು 112 ವಾಹನದ ಮೂಲಕ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.Karwar | ದೀಪಾವಳಿಗಾಗಿ ಹಚ್ಚಿದ ಹಣತೆ ಸ್ವಲ್ಪದರಲ್ಲೇ ತಪ್ಪಿದ ಭಾರೀ ಬೆಂಕಿ ಅವಘಡ
ತಕ್ಷಣದ ಸ್ಪಂದನೆ, ಸಮಯಪ್ರಜ್ಞೆ ಮತ್ತು ಮಾನವೀಯ ಕಾಳಜಿಯಿಂದ ಅಮೂಲ್ಯ ಜೀವವೊಂದನ್ನು ಉಳಿಸಿದ ಸಿ.ಎಚ್.ಸಿ. ಸಾಯಿನಂದ ವಿ. ನಾಯ್ಕ ಹಾಗೂ 112-ಇ.ಆರ್.ಎಸ್.ಎಸ್. ಸಿಬ್ಬಂದಿ ಎ.ಎಚ್.ಸಿ. ದಿನೇಶ್ ನಾಗೇಕರ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಗೆ ಈ ಘಟನೆ ಸಾಕ್ಷಿಯಾಗಿದೆ.


