Ankola | ಶಾಲೆ ಪ್ರಾರಂಭಕ್ಕೂ ಮುನ್ನ ವಿಘ್ನ -ಕಟ್ಟಡಕ್ಕೆ ಬೆಂಕಿ -ವಿಡಿಯೋ ನೋಡಿ
ಕಾರವಾರ /ankola :-ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ(ankola) ತಾಲೂಕಿನ ತೆಂಕಣಕೇರಿ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಕಟ್ಟಡಕ್ಕೆ ಹಾನಿ ಜೊತೆ ಪೀಠೋಪಕರಣಗಳು ಬೆಂಕಿಗಾಹುತಿಯಾಗಿದೆ.Ankola | KSRTC ಬಸ್–ಲಾರಿ ಮುಖಾಮುಖಿ ಡಿಕ್ಕಿ: ಮಗನನ್ನು ಉಳಿಸಿಕೊಳ್ಳಲು ತಂದೆ ಪಟ್ಟ ಮನಕಲಕುವ ಶ್ರಮಕ್ಕೆ ಸಿಗಲಿಲ್ಲ ಫಲ
ಶಾಲೆಯ ವಿದ್ಯುತ್ ಸರ್ಕ್ಯೂಟ್‌ನಲ್ಲಿ ಉಂಟಾದ ದೋಷದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿ ವೇಳೆ ಘಟನೆ ಸಂಭವಿಸಿದ್ದು
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.ಪೊಲೀಸರು ಕೂಡ ಶಾಲೆಗೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದರು.
ಶಾಲೆ ಪುನರಾರಂಭಕ್ಕೂ ಮುನ್ನ ಬೆಂಕಿ ಅವಘಡ.

ಇoದು ಶಾಲೆ ಆರಂಭವಾಗಬೇಕಿದ್ದ ,ನಿನ್ನೆ ರಾತ್ರಿ ಅವಘಡ ಶಾಲೆ ಆಡಳಿತಕ್ಕೆ ಆಘಾತ ತಂದಿದೆ. ಬೆಂಕಿಯಿಂದ ಶಾಲೆಯ ಕಟ್ಟಡ, ಪೀಠೋಪಕರಣಗಳು ಹಾಗೂ ಶೈಕ್ಷಣಿಕ ಉಪಕರಣಗಳು ಹಾನಿಯಾಗಿದೆ. ಲಕ್ಷಾಂತರ ರುಪಾಯಿ ಹಾನಿಯಾಗಿದ್ದು ,ಸಂಬಂಧಪಟ್ಟ ಅಧಿಕಾರಿಗಳು ವಿವರವಾದ ಪರಿಶೀಲನೆ ನಡೆಸಿದ ಬಳಿಕ ಬೆಂಕಿ ಅವಘಡಕ್ಕೆ ನಿಖರ ಕಾರಣ ಹಾಗೂ ಎಷ್ಟು ಹಾನಿಯಾಗಿದೆ ಎಂಬಬಗ್ಗೆ ತಿಳಿದುಬರಲಿದೆ.Ankola | KSRTC ಬಸ್–ಲಾರಿ ಮುಖಾಮುಖಿ ಡಿಕ್ಕಿ: ಮಗನನ್ನು ಉಳಿಸಿಕೊಳ್ಳಲು ತಂದೆ ಪಟ್ಟ ಮನಕಲಕುವ ಶ್ರಮಕ್ಕೆ ಸಿಗಲಿಲ್ಲ ಫಲ
