Yana | ಯಾಣಕ್ಕೆ ತೆರಳಲು ಪ್ರವಾಸಿಗರಿಗೆ ದರ ನಿಗದಿ | ನೀರು ಬಾಟಲ್ ಗೆ ₹100?

Yana Tourist Entry Fee and ₹100 Water Bottle Deposit in Uttara Kannada Yana Tourist Entry Fee and ₹100 Water Bottle Deposit in Uttara Kannada
Yana Tourist Entry Fee and ₹100 Water Bottle Deposit in Uttara Kannada

Yana./ಕಾರವಾರ :- ದೇಶದ ಪ್ರಸಿದ್ಧ ಪ್ರಾಕೃತಿಕ ತಾಣವಾದ ಯಾಣ ಪ್ರದೇಶಕ್ಕೆ ತೆರಳಲು ಇದೀಗ ಪ್ರವಾಸಿಗರ ಪ್ರವೇಶಕ್ಕೆ ಶುಲ್ಕವನ್ನು ನಿಗದಿ ಮಾಡಲಾಗಿದೆ. ಇತ್ತೋಚೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಬರುವ ಯಾಣ ಪ್ರದೇಶವನ್ನು ಭಾರತೀಯ ಭೂವೈಜ್ಞಾನಿಕ ಸಂಸ್ಥೆ (GSI) ರಾಷ್ಟ್ರೀಯ ಭೂಪಾರಂಪರಿಕ ತಾಣ ಎಂದು ಘೋಷಣೆ ಮಾಡಿದೆ. ಹೀಗಾಗಿ ಪ್ರವಾಸಿಗರು ಸಹ ಈ ಪ್ರದೇಶಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.
ಯಾಣ ಪ್ರದೇಶವು ಕುಮಟಾ (kumta)ತಾಲೂಕಿನ ಕತಗಾಲ್ ಅರಣ್ಯ ವಾಪ್ತಿಯಲ್ಲಿ ಬರುತ್ತದೆ‌. ಅಲಕೋಡು ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಈ ಪ್ರದೇಶ ಸೇರುತ್ತದೆ. ಕತಗಾಲ್ ಅರಣ್ಯ ಇಲಾಖೆಯಿಂದ ಈ ಪ್ರದೇಶವನ್ನು ನೋಡಿಕೊಳ್ಳಲು ಅರಣ್ಯ ಸಮಿತಿ ರಚನೆ ಮಾಡಲಾಗಿದೆ.
ಇದೀಗ ಈ ಅರಣ್ಯ ಸಮಿತಿಯಿಂದ ಯಾಣಕ್ಕೆ ಭೇಟಿ ನೀಡುವ ಪ್ರತಿ ಪ್ರವಾಸಿಗರಿಗೆ ₹10 ಶುಲ್ಕ ಹಾಗೂ ನೀರಿನ ಬಾಟಲ್ ಗೆ ₹100 ಟೇವಣಿ ಶುಲ್ಕ ವಿಧಿಸುತ್ತಿದೆ. ಯಾಣಕ್ಕೆ ತೆರಳುವ ವಿಭೂತಿ ಪಾಲ್ಸ್ ನಿಂದ ತೆರಳುವ ಹಾದಿ ಹಾಗೂ ಕತಗಾಲ್ ನಿಂದ ತೆರಳುವ ಹಾದಿಯಲ್ಲಿ ಈ ಶುಲ್ಕಗಳು ಅನ್ವಯವಾಗುತ್ತದೆ. ಅರಣ್ಯಾಧಿಕಾರಿಗಳು ಹೇಳುವ ಪ್ರಕಾರ ಈ ಪ್ರದೇಶವು ರಿಸರ್ವ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುವುದರಿಂದ ಮೇಲಾಧಿಕಾರಿಗಳ ಸೂಚನೆಯಂತೆ ಈ ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.Yana: 29 ವರ್ಷದ ಬಳಿಕ ಯಾಣಕ್ಕೆ ಭೇಟಿ ನೀಡಿ ಶಿವಣ್ಣ ಭಾವುಕ! ಏನಂದ್ರು ಗೊತ್ತಾ

ಶುಲ್ಕ ವಿಧಿಸಿದ್ದಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರಿಂದ ವಿರೋಧ.
ಯಾಣಕ್ಕೆ (yana) ತೆರಳಲು ಶುಲ್ಕ ವಿಧಿಸಿದ್ದಕ್ಕೆ ಸ್ಥಳೀಯ ಗ್ರಾಮಸ್ಥರು ,ಪ್ರವಾಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ರಿಸರ್ವ ಫಾರೆಸ್ಟ್ ನಲ್ಲಿ ದಾಂಡೇಲಿ ಹಾಗೂ ಇತರೆ ಕೆಲವು ಪ್ರದೇಶಗಳು ಸಹ ಬರುತ್ತವೆ .ಆದರೇ ಈ ಪ್ರದೇಶದಲ್ಲಿ ವಿಧಿಸದ ಶುಲ್ಕವನ್ನು ಇಲ್ಲಿ ಮಾತ್ರ ವಿಧಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಮಾಡುತಿದ್ದಾರೆ.
ಇನ್ನು ಈ ಸಮಿತಿ ಬರುವ ಪ್ರವಾಸಿಗರಿಗೆ ಒಂದು ಲೀಟರ್ ಬಾಟಲ್ ನೀರಿಗೆ ₹100 ಡೆಪಾಸಿಟ್ ಶುಲ್ಕ ವಿಧಿಸುತ್ತಿದೆ. ಇದಲ್ಲದೇ ಪ್ಲಾಸ್ಟಿಕ್ ಬಾಟಲ್ ನಿಷೇಧ ಮಾಡಲಾಗಿದ್ದು , ಗಾಜಿನ ಬಾಟಲ್ ಗೆ ₹100 ಕೊಡಬೇಕು. ಪ್ಲಾಸ್ಟಿಕ್ ಬಾಟಲ್ ನಿಷೇಧವಿದ್ರೂ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲ್ ತಂದರೇ ಅದಕ್ಕೂ ₹100 ಕೊಡಬೇಕು. ₹20 ಬಾಟಲ್ ಗೆ ₹100 ಕೊಟ್ಟು ಹೋಗುವ ಪರಿಸ್ಥಿತಿ ಇದ್ದು ಇದನ್ನು ಜನ ಖಂಡಿಸಿದ್ದಾರೆ. ಇನ್ನು ಇಲ್ಲಿ ತೆರಳಲು ಗ್ರಾಮಪಂಚಾಯ್ತಿ ಸಹ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಸಮರ್ಪಕ ವ್ಯವಸ್ಥೆ ಇಲ್ಲದಿದ್ದರೂ ದರ ಏಕೆ ಎಂಬ ಪ್ರಶ್ನೆ ಸ್ಥಳೀಯರದ್ದಾಗಿದ್ದು ,ಇದೀಗ ದರ ವಿಧಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ:-GSI ನಿಂದ Yana ಶಿಲಾಗುಹೆಗಳಿಗೆ ಭೂ ಪರಂಪರೆಯ ತಾಣ ಮಾನ್ಯತೆ| ವಿಶೇಷ ಇಲ್ಲಿದೆ

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement