Shivamogga dashara | ಜಂಬೂಸವಾರಿ ನಡುವೆ ದಿಕ್ಕಾಪಾಲಾಗಿ ಓಡಿದ ಆನೆ -ಕೆಳಕ್ಕೆ ಬಿದ್ದ ಬೆಳ್ಳಿ ಅಂಬಾರಿ-ವಿಡಿಯೋ ನೋಡಿ-
ಶಿವಮೊಗ್ಗ:ಶಿವಮೊಗ್ಗ(shivamogga)ನಗರದ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಾರಿ ಬದಲಿಸಿ ಹಿಂದಿರುಗಿದ ಹಿನ್ನೆಲೆಯಲ್ಲಿ ಮೆರವಣಿಗೆಯನ್ನು ಅರ್ಧದಲ್ಲೇ ನಿಲ್ಲಿಸಲಾಯಿತು. ಈ ವೇಳೆ ಚಾಮುಂಡೇಶ್ವರಿ ಮೂರ್ತಿ ಇದ್ದ ಬೆಳ್ಳಿಯ ಅಂಬಾರಿ ಕೆಳಕ್ಕೆ ಬಿದ್ದ ಘಟನೆ ನಡೆದಿದೆ.
ನಗರದ ಕೋಟೆ ಪ್ರದೇಶದಲ್ಲಿರುವ ಶಿವಪ್ಪ ನಾಯಕ ಅರಮನೆಯಿಂದ ಜಂಬೂಸವಾರಿ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆಯ ಸಂದರ್ಭದಲ್ಲಿ ಸೋಮಣ್ಣ ಆನೆ ದಾರಿ ಬದಲಿಸಿ ಹಿಂದಿರುಗಿತು. ಈ ವೇಳೆ ಅಂಬಾರಿ ಕೆಳಕ್ಕೆ ಬಿದ್ದು ಹಾನಿಗೊಳಗಾಯಿತು.Shivamogga | ಸಕ್ರೆಬೈಲಿನಲ್ಲಿ ಏಕಾ ಏಕಿ ಕುಸಿದುಬಿದ್ದ ಆನೆ ಸಾವು!
ಆನೆ ಸಾಗಿದ ಸಂದರ್ಭದಲ್ಲಿ ಎರಡು ಕಾರುಗಳು ಹಾಗೂ ಮೂರು ಬೈಕ್‌ಗಳಿಗೆ ಹಾನಿಯಾಗಿದೆ. ಆನೆಯ ಚಲನೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರು ಆತಂಕಗೊಂಡು ಸ್ಥಳದಿಂದ ಚದುರಿದರು.
ಆನೆಯನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಘಟನೆಯ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಯಿತು.Shivamogga | 5 ತಿಂಗಳ ಬಳಿಕ ಪ್ರವಾಸಿಗರಿಗೆ ತೆರೆದ ಸಕ್ರೆಬೈಲು ಆನೆ ಶಿಬಿರ; ಮೊದಲ ದಿನವೇ 534 ಪ್ರವಾಸಿಗರ ಭೇಟಿ
ದಿಕ್ಕಾಪಾಲಾಗಿ ಓಡಿದ ಸೋಮಣ್ಣ ಆನೆಯನ್ನು ನಿಯಂತ್ರಣಕ್ಕೆ ತರಲು ವೈದ್ಯಾಧಿಕಾರಿಗಳು ಅರವಳಿಕೆ ನೀಡಿ ಹರಸಾಹಸ ಪಟ್ಟರು. ಜನರ ನಿಯಂತ್ರಣಕ್ಕೂ ಪೊಲೀಸರು ಹರಸಾಹಸ ಪಟ್ಟರು.
ಪ್ರಸ್ತುತ ಸೋಮಣ್ಣ ಆನೆ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿದೆ. ಅರವಳಿಕೆ ನೀಡಿದ ನಂತರ ಸೋಮಣ್ಣ ಆನೆ ಸುಧಾರಿಸಿಕೊಳ್ಳುತ್ತಿದೆ.Sagar | ಕೆಳದಿ ಅರಸರ ಕಾಲದ ಅಪರೂಪದ ಪಚ್ಚೆಲಿಂಗ ದರ್ಶನ- ಇದರ ವಿಶೇಷ ಏನು ಗೊತ್ತಾ?
ಕೊನೆ ಕ್ಷಣದಲ್ಲಿ ಆನೆ ಬದಲಿಸಿದ್ದ ಅರಣ್ಯ ಇಲಾಖೆ.

ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿತ್ತು. ಆನೆಗಳಿಗೆ ಅಲಂಕಾರ ನಡೆಯುತ್ತಿದ್ದರೇ ಇತ್ತ ಕೊನೆಯ ಕ್ಷಣದಲ್ಲಿ ಅಂಬಾರಿ ಹೊರುವ ಆನೆಯನ್ನು ಬದಲಾಯಿಸಿ ಅರಣ್ಯ ಇಲಾಖೆ ನಿರ್ಧಾರ ಕೈಗೊಂಡಿತ್ತು.
ಇದನ್ನೂ ಓದಿ:-Shivamogga | ಈ ಊರಿನಲ್ಲಿ ಬೀಗರೂಟ ಅರೇಂಜ್ ಮಾಡಿದ್ರೆ ಒಂದು ಲಕ್ಷ ರೂಪಾಯಿ ದಂಡ,ಬೀಗರೂಟ ತಿಂದು ಬಂದರೆ ₹50 ಸಾವಿರ ದಂಡ!
ಕಳೆದ ಆರು ವರ್ಷಗಳಿಂದ ಅಂಬಾರಿ ಹೊರತ್ತಿದ್ದ ಸಾಗರ್ ಆನೆಯ ಬದಲಾಗಿ, ಈ ಬಾರಿ ಸೋಮಣ್ಣ ಆನೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊರಲು ಅವಕಾಶ ನೀಡಲಾಗಿತ್ತು. ಇದರ ಪರಿಣಾಮ ಸೂಕ್ತ ತಾಲೀಮು ಇಲ್ಲದೇ ಈ ದುರಂತ ನಡೆಯುವಂತಾಯಿತು.
