Ankola | KSRTC ಬಸ್–ಲಾರಿ ಮುಖಾಮುಖಿ ಡಿಕ್ಕಿ: ಮಗನನ್ನು ಉಳಿಸಿಕೊಳ್ಳಲು ತಂದೆ ಪಟ್ಟ ಮನಕಲಕುವ ಶ್ರಮಕ್ಕೆ ಸಿಗಲಿಲ್ಲ ಫಲ

KSRTC bus and lorry collision at Belase in Ankola, Uttara Kannada, killing a one-and-a-half-year-old child and injuring several passengers KSRTC bus and lorry collision at Belase in Ankola, Uttara Kannada, killing a one-and-a-half-year-old child and injuring several passengers
KSRTC bus and lorry collision at Belase in Ankola, Uttara Kannada, killing a one-and-a-half-year-old child and injuring several passengers

Ankola |KSRTC ಬಸ್–ಲಾರಿ ಮುಖಾಮುಖಿ ಡಿಕ್ಕಿ: ಮಗನನ್ನು ಉಳಿಸಿಕೊಳ್ಳಲು ತಂದೆ ಪಟ್ಟ ಮನಕಲಕುವ ಶ್ರಮಕ್ಕೆ ಸಿಗಲಿಲ್ಲ ಫಲ.

ವಿಡಿಯೋ ನೋಡಿ:-

Advertisement

Ankola /karwar :- ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola)ತಾಲೂಕಿನ ಬೆಳಸೆ ಗ್ರಾಮದಲ್ಲಿ KSRTC ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ನಡೆದಿದ್ದು , ಒಂದೂವರೆ ವರ್ಷದ ಗಂಡುಮಗು ವನ್ನು ಆಸ್ಪತ್ರೆ ಮಾರ್ಗವಾಗಿ ಕರೆದೊಯ್ಯುವ ವೇಳೆ ಸಾವು ಕಂಡರೇ ಹತ್ತು ಜನ ಪ್ರಯಾಣಿಕರಿಗೆ ಗಾಯಗಳಾಗಿವೆ.

ಕುಮಟಾದಿಂದ ಅಂಕೋಲದತ್ತ ತೆರಳುತ್ತಿದ್ದ KSRTC ಬಸ್‌ಗೆ, ಅಂಕೋಲ ಕಡೆಯಿಂದ ಬರುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನಲ್ಲಿದ್ದ ಒಂದೂವರೆ ವರ್ಷದ ಗಂಡು ಮಗು ಗಂಭೀರ ಗಾಯಗೊಂಡು ರಸ್ತೆ ಮಧ್ಯದಲ್ಲೇ ಅಸುನೀಗಿದೆ.

ಅಪಘಾತದಲ್ಲಿ ಸುಮಾರು 20 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗು ಉಳಿಸಿಕೊಳ್ಳಲು ತಂದೆಯ ಪರದಾಟ-ಕೊನೆಗೂ ಬದುಕುಳಿಯಲಿಲ್ಲ.

ಒಂದೂವರೆ ವರ್ಷದ ಮಗು ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ಕಾರವಾರದ ಶಾಂತಿ ದಂತ ಚಿಕಿತ್ಸಾಲಯದ  ದಂತ ವೈದ್ಯ ಡಾ. ಸಮೀರ ನಾಯಕ ಅವರು ಅಲ್ಲಿಯೇ ತೆರಳುತಿದ್ದು ತಕ್ಷಣ ಘಟನಾ ಸ್ಥಳದಿಂದ ಒಂದೂವರೆ ವರ್ಷದ ಮಗು ಮಗುವಿನ ತಂದೆ ಮತ್ತು ತಾಯಿ ಹಾಗೂ ಮತ್ತೊಬ್ಬ ಗಾಯಾಳುವನ್ನು  ಅಂಕೋಲಾ ಆಸ್ಪತ್ರೆಗೆ ಕರೆತಂದರು. ಉಸಿರಾಡಲೂ ಕಷ್ಟಪಡುತಿದ್ದ ಆ ಮಗುವನ್ನ ತಂದೆ ತನ್ನ ಕೈನಲ್ಲಿ ಎತ್ತಿಕೊಂಡು ರೋಧಿಸುತಿದ್ದ ಆ ಕ್ಷಣ ಎಂತವರ ಮನಸ್ಸು ಸಹ ಕಲಕುವಂತಿತ್ತು.ಆದರೇ ಆ ತಂದೆಗೆ ಮಾತ್ರ ಮಗನನ್ನ ಉಳಿಸಿಕೊಳ್ಳಲಾಗಲಿಲ್ಲ.ಇದನ್ನೂ ಓದಿ:-Ankola | ಹೆದ್ದಾರಿ ವಾಹನಗಳಿಂದ ಡೀಸೆಲ್ ಕಳ್ಳತನ ಆರೋಪ: ವ್ಯಕ್ತಿ ಬಂಧನ, 30 ಲೀಟರ್ ಡೀಸೆಲ್ ವಶ

ಅಫಘಾತದಲ್ಲಿ ಗಾಯಗೊಂಡ ಸುಮಾರು ಜನರ ದವಡೆಗೆ ಹಾಗೂ ಮುಖಕ್ಕೆ ಗಾಯಗಳಾಗಿದ್ದು  ದಂತ ವೈದ್ಯ ಡಾ. ಸಂಜಯ್ ಹಾಗೂ ಸಮೀರ ಕುಮಾರ ನಾಯಕ ಗಾಯಗೊಂಡವರಿಗೆ ಹೊಲಿಗೆ ಹಾಕಿ ತುರ್ತು ಚಿಕಿತ್ಸೆ ನೀಡಿ ಮಾನವೀಯತೆಯ ನೆರವು ನೀಡಿದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement