Karwar | ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಅಪಘಾತ: ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಸಾವು
ಕಾರವಾರ: ಬೈಕ್ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ ಯುವಕ ಮೃತಪಟ್ಟ ಘಟನೆ ಕಾರವಾರ(karwar) ತಾಲೂಕಿನ ಮಾಜಾಳಿಯಲ್ಲಿ ನಡೆದಿದೆ.
ಮೃತರನ್ನು ಹಳಿಯಾಳ ಮೂಲದ ಅಭಿಷೇಕ ಪುರುಷೋತ್ತಮ ಹಳಿಯಾಳಕರ (21) ಎಂದು ಗುರುತಿಸಲಾಗಿದೆ. ಇವರು ಕಾರವಾರದ ಜಿಲ್ಲಾಧಿಕಾರಿ ಕಚೇರಿಯ ಖಜಾನೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ (SDA) ಕರ್ತವ್ಯ ನಿರ್ವಹಿಸುತ್ತಿದ್ದರು.
ನವೆಂಬರ್ 21ರ ರಾತ್ರಿ ಸುಮಾರು 11.15ರ ವೇಳೆಗೆ ಅಭಿಷೇಕ ಅವರು ಕೆಎ-65/ಕೆ-7169 ನೋಂದಣಿ ಸಂಖ್ಯೆಯ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಮಾಜಾಳಿಯ ಬಾಬಾ ರಾಮದೇವ ಹೋಟೆಲ್ ಕಡೆಯಿಂದ ಕಾರವಾರ ನಗರದತ್ತ ತೆರಳುತ್ತಿದ್ದರು.Karwar | ಸಿದ್ದರಾಮಯ್ಯನವರಿಗೆ ಅವಮಾನದಿಂದ ಹಿಡಿದು ಎಥನಾಲ್ ಮಿಶ್ರಣ ವಿವಾದ ಕುರಿತು ಸಚಿವ ಲಕ್ಷ್ಮಣ ಸವದಿ ಹೇಳಿದ್ದೇನು ?
ಈ ಸಂದರ್ಭದಲ್ಲಿ ಮಾಜಾಳಿಯ ಶ್ರೀ ವಿಠಲ-ರುಕ್ಕಿಣಿ ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ರಸ್ತೆಗೆ ಬಿದ್ದ ಅಭಿಷೇಕ ಅವರ ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಯುವಕನ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಪರಿಚಿತರಲ್ಲಿ ದುಃಖ ಮಡುಗಟ್ಟಿದೆ.






