Sirsi | ವಿದ್ಯುತ್ ಶಾಕ್ ನೀಡಿ ಕಾಡಾನೆ ಹತ್ಯೆ- ತಂದೆ-ಮಗನ ಬಂಧನ.
ಶಿರಸಿ: ಬೆಳೆ ರಕ್ಷಣೆಗಾಗಿ ಭತ್ತದ ಗದ್ದೆಯ ಸುತ್ತ ಅಕ್ರಮವಾಗಿ ವಿದ್ಯುತ್ ಹರಿಸಿದ ಪರಿಣಾಮ ಕಾಡಾನೆಯೊಂದು ವಿದ್ಯುತ್ ಶಾಕ್ಗೆ ಬಲಿಯಾದ ಘಟನೆ ಶಿರಸಿ(sirsi) ತಾಲೂಕಿನ ಮಳಲಗಾಂವ್ ಗ್ರಾಮದಲ್ಲಿ ನಡೆದಿದೆ.
ಕಾಡಾನೆಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ರೈತನೋರ್ವ ತನ್ನ ಭತ್ತದ ಗದ್ದೆಯ ಸುತ್ತ ತಂತಿಬೇಲಿ ಅಳವಡಿಸಿದ್ದು ಇದಕ್ಕೆ ನೇರವಾಗಿ ವಿದ್ಯುತ್ ಹರಿಸಿದ್ದಾನೆ. ಆದರೆ ಈ ಬೇಲಿಗೆ ವಿದ್ಯುತ್ ಸ್ಪರ್ಶಿಸಿ ಗಂಡಾನೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಶಿರಸಿ ವಿಭಾಗದ ಬನವಾಸಿ ವೃತ್ತದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಆನೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.Sirsi |ಶಿರಸಿಯಲ್ಲಿ ಹಾರಾಡಿದ ಲಘು ವಿಮಾನ -ಜನರ ಆತಂಕಕ್ಕೆ ಜಿಐಎಸ್ ಸ್ಪಷ್ಟನೆ!
ಬಂಧಿತರನ್ನು ಮಳಲಗಾಂವ್ ನ ಶಿವಪ್ಪ ನಾಯ್ಕ (76) ಹಾಗೂ ಅವರ ಪುತ್ರ ನಾಗರಾಜ್ ನಾಯ್ಕ (40) ಎಂದು ಗುರುತಿಸಲಾಗಿದೆ. ವಿದ್ಯುತ್ ಲೈನ್ನಿಂದ ನೇರವಾಗಿ ಗದ್ದೆಯ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.Sirsi |ಹೆದ್ದಾರಿ ಅಗಲೀಕರಣ -ಆರು ವರ್ಷವಾದರೂ ಕೆಡವಿದ ಬಸ್ ನಿಲ್ದಾಣ ಕಟ್ಟುವುದನ್ನೇ ಮರೆತರು!
ಘಟನಾ ಸ್ಥಳಕ್ಕೆ ಡಿಸಿಎಫ್ ಸಂದೀಪ್ ಹಿಂದೂರಾವ್ ಸೂರ್ಯವಂಶಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಗಂಡಾನೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದೆ.
ಮಂಡಗೋಡು ಹಾಗೂ ಶಿರಸಿ ಗಡಿ ಭಾಗದಲ್ಲಿ ಕಾಡಾನೆಗಳ ಹಿಂಡು ಕಳೆದ ಒಂದು ತಿಂಗಳಿಂದ ಬೀಡು ಬಿಟ್ಟುದ್ದು ಹಲವು ಕಡೆ ಕೃಷಿ ಜಮೀನಿಗೆ ನುಗ್ಗುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡುತಿದ್ದರೂ ಮರಳಿ ಗ್ರಾಮದ ಕೃಷಿ ಜಮೀನಿನತ್ತ ಬರುತ್ತಿವೆ. ಆದರೇ ಕೆಲವು ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಇತರೆ ಮಾರ್ಗ ಅನುಸರಿಸುವ ಬದಲು ವಿದ್ಯುತ್ ಕಂಬಗಳಿಂದ ನೇರ ವಿದ್ಯುತ್ ಹರಿಸಿ ಮುಗ್ದ ಜೀವಿಗಳ ಸಾವಿಗೆ ಕಾರಣರಾಗುತಿದ್ದಾರೆ.ಬನವಾಸಿ ವಲಯ ಅರಣ್ಯ ಇಲಾಖೆಯಿಂದ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.






