Bhatkal|ಮುರುಡೇಶ್ವರ -₹11.10 ಲಕ್ಷಕ್ಕೆ ಹರಾಜಾದ ದೇವರ ಮುಡಿಗಂಧ ಪ್ರಸಾದ

ಮುರುಡೇಶ್ವರದಲ್ಲಿ ₹11.10 ಲಕ್ಷಕ್ಕೆ ಹರಾಜಾದ ದೇವರ ಮುಡಿಗಂಧ ಪ್ರಸಾದ ಮುರುಡೇಶ್ವರದಲ್ಲಿ ₹11.10 ಲಕ್ಷಕ್ಕೆ ಹರಾಜಾದ ದೇವರ ಮುಡಿಗಂಧ ಪ್ರಸಾದ
ಮುರುಡೇಶ್ವರದಲ್ಲಿ ₹11.10 ಲಕ್ಷಕ್ಕೆ ಹರಾಜಾದ ದೇವರ ಮುಡಿಗಂಧ ಪ್ರಸಾದ

Bhatkal|ಮುರುಡೇಶ್ವರ -₹11.10 ಲಕ್ಷಕ್ಕೆ ಹರಾಜಾದ ದೇವರ ಮುಡಿಗಂಧ ಪ್ರಸಾದ

ಕಾರವಾರ :-ಮುರುಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವದ 50ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ನಡೆದ ಫಲಾವಳಿ ಹರಾಜಿನಲ್ಲಿ ದೇವರ ಮುಡಿಗಂಧ ಪ್ರಸಾದವು ₹11 ಲಕ್ಷ 10 ಸಾವಿರಕ್ಕೆ ಹರಾಜಾಗಿದೆ. ಉದ್ಯಮಿ ನೇತ್ರಾಣಿ ಗಣೇಶ ಹರಿಕಾಂತ ಅವರು ಈ ಪ್ರಸಾದವನ್ನು ಪಡೆದುಕೊಂಡಿದ್ದಾರೆ.ಇದನ್ನೂ ಓದಿ:-Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ.

ದೇವರಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ದೇವರ ಮುಡಿಗೆ ಅಲಂಕರಿಸುವ ಹೂವು, ತುಳಸಿ, ಶ್ರೀಗಂಧ, ಕುಂಕುಮ ಹಾಗೂ ನೈವೇದ್ಯದಂತಹ ವಸ್ತುಗಳನ್ನು ಮುಡಿಗಂಧ ಪ್ರಸಾದ ಎಂದು ಕರೆಯಲಾಗುತ್ತದೆ. ಭಕ್ತರು ಇದನ್ನು ಅತ್ಯಂತ ಪವಿತ್ರವಾದ ಪ್ರಸಾದ ಹಾಗೂ ದೇವರ ನೇರ ಆಶೀರ್ವಾದದ ಪ್ರತೀಕವೆಂದು ನಂಬುತ್ತಾರೆ.

Advertisement

ಮುರುಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಈ ಬಾರಿ 50ನೇ ವರ್ಷದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಿಂದ 24ರವರೆಗೆ 11 ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಸುಮಾರು ₹1 ಕೋಟಿ ವೆಚ್ಚದಲ್ಲಿ ಆಯೋಜಿಸಲಾಗಿದ್ದ ಉತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರುಗಿದವು. ಇದನ್ನೂ ಓದಿ:-Bhatkal : ಗಣಪತಿ ವಿಸರ್ಜನೆ ವೇಳೆ ಕಲ್ಲುತೂರಾಟ ಪ್ರಕರಣ ಆರೋಪಿಗಳಿಗೆ ಜಾಮೀನು

ಉತ್ಸವದ ಕೊನೆಯ ದಿನವಾದ ಗುರುವಾರ ಸಂಜೆ ಒಲಗ ಮಂಟಪದ ಗಣೇಶನನ್ನು ಮುರುಡೇಶ್ವರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು. ಬಳಿಕ ನಡೆದ ಫಲಾವಳಿ ಹರಾಜು ಪ್ರಕ್ರಿಯೆಯಲ್ಲಿ ದೇವರ ಮುಡಿಗಂಧ ಪ್ರಸಾದವನ್ನು ₹11.10 ಲಕ್ಷಕ್ಕೆ ಉದ್ಯಮಿ ನೇತ್ರಾಣಿ ಗಣೇಶ ಹರಿಕಾಂತ ಅವರು ಪಡೆದುಕೊಂಡರು.

ಈ ಹರಾಜು ಮೊತ್ತವು ಮುರುಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಇತಿಹಾಸದಲ್ಲಿ ಅತ್ಯಧಿಕ ಮೊತ್ತದ ಮುಡಿಗಂಧ ಪ್ರಸಾದ ಹರಾಜು ಎಂಬ ದಾಖಲೆಗೆ ಪಾತ್ರವಾಗಿದೆ. ಅಲ್ಲದೆ, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮುಡಿಗಂಧ ಪ್ರಸಾದಕ್ಕೆ ನಡೆದ ಗಮನಾರ್ಹ ಹಾಗೂ ಅತ್ಯಧಿಕ ಮೊತ್ತದ ಹರಾಜುಗಳಲ್ಲಿ ಒಂದಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement