Yallapur | ಮೀನು ಮಾರಾಟಕ್ಕೆ ಆಕ್ಷೇಪ -ಚೀಫ್ ಆಫೀಸರ್ ರಿಂದ ಮಹಿಳೆಯರ ಮೇಲೆ ಹಲ್ಲೆ 

Women fish and vegetable vendors involved in assault case in Yallapur Women fish and vegetable vendors involved in assault case in Yallapur
Women fish and vegetable vendors involved in assault case in Yallapur

IMG 20260913 WA0009Karwar Shetty Eye Hospital

    Ad karwar autoಕಾರವಾರ ದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಮ್ಮ ಬಟ್ಟೆಗಳಿಗೆ ಹೊಳಪು ನೀಡುವ ಆರೋ ಡ್ರೈಕ್ಲೀನ್ -ಒಮ್ನೆ ಭೇಟಿ ನೀಡಿ

ಕಾರವಾರ/ಯಲ್ಲಾಪುರ :- ತಮ್ಮ ಮನೆಯ ಮುಂದೆ ಮೀನು ಹಾಗೂ ತರಕಾರಿ ಮಾರಾಟ ಮಾಡುತಿದ್ದುದಕ್ಕೆ  ವ್ಯಾಪಾರಸ್ತ ಮಹಿಳೆಯರ ಮೇಲೆ ಬೈಂದೂರು ಪಟ್ಟಣ ಪಂಚಾಯಯತ್ ಚೀಪ್ ಆಫೀಸರ್  ಹಲ್ಲೆಮಾಡಿದ ಘಟನೆ ಯಲ್ಲಾಪುರದ (yallapur)ಮಂಚಿಕೇರಿಯ ಮಾಗೋಡು ಕ್ರಾಸ್ ಬಳಿ ನಡೆದಿದ್ದು ,ಇದೀಗ ಯಲ್ಲಾಪುರ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Women Assault Case,
ಹಲ್ಲೆ ಮಾಡುತ್ತಿರುವ ದೃಶ್ಯ

ಮೂಲತಹ ಯಲ್ಲಾಪುರದ ಮಂಚಿಕೇರಿಯ ನಿವಾಸಿಯಾಗಿರುವ ಅಜೇಯ್ ಬಂಡಾರಕರ್ ಭಾನುವಾರ ಮಂಚಿಕೇರಿಯ ತಮ್ಮ ನಿವಾಸಕ್ಕೆ ಬಂದಿದ್ದು ತಮ್ಮ ಮನೆ ಹಾಗೂ ದೇವಸ್ಥಾನದ ಬಳಿಯೇ ಮಹಿಳೆಯರು ರಸ್ತೆಯಲ್ಲಿ ಮೀನು ಮಾರಾಟ ಮಾಡುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಈವೇಳೆ ಅಂಕೋಲದ ಬೇಲಿಕೇರಿಯ ಮೀನುಗಾರ ಮಹಿಳೆ ಸರಸ್ವತಿ ಹಾಗೂ ಮಾಗೋಡಿನ ತರಕಾರಿ ವ್ಯಾಪಾರಿ ಸೀತಲ್ ಲಂಬಾಣಿ ಜೊತೆ ಮಾತಿನ ಚಕಮಕಿ ನಡೆದಿದೆ.

Advertisement

ಈವೇಳೆ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಈವೇಳೆ ಮಹಿಳೆಯರ ಮೇಲೂ ಅಧಿಕಾರಿ ಹಲ್ಲೆ ಮಾಡಿದ್ದು , ಮಾರಲು ತಂದ ಮೀನುಗಳು ಚಲ್ಲಾಪಿಲ್ಲಿಯಾಗಿ ಮಹಿಳೆಯರಿಗೆ ಗಾಯವಾಗಿದೆ. ಘಟನೆ ಸಂಬಂಧ ಸೋಮವಾರ ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದು ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement