


ಕಾರವಾರ: ಗೃಹಜ್ಯೋತಿ ಯೋಜನೆಯ (Gruha Jyothi ) ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯಕ್ಕೆ ಸೆಪ್ಟೆಂಬರ್ 30, 2026 ಕೊನೆಯ ದಿನವಾಗಿದೆ.ಇದನ್ನೂ ಓದಿ:-Gruha lakshmi Yojana:ಗೃಹಲಕ್ಷ್ಮಿ ಬೇಡ ಎಂದು ಬರೆದುಕೊಟ್ರು ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರು !
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಪರಿಶೀಲನಾ ಕಾರ್ಯವು 2026ರ ಜುಲೈನಲ್ಲಿ ಆರಂಭವಾಗಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಹೆಸ್ಕಾಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.ಇದನ್ನೂ ಓದಿ:-Karwar | ಕಾಂಗ್ರೆಸ್ ಸೇವಾದಳದಿಂದ ರವೀಂದ್ರನಾಥ ಟಾಗೋರ್ ಬೀಚ್‌ನಲ್ಲಿ ಸ್ವಚ್ಛತಾ ಅಭಿಯಾನ
ಹೆಸ್ಕಾಂ ಕಾರವಾರದ ಮಾಪಕ ಓದುಗರು ಹಾಗೂ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ, ಸರ್ವೆ ಆ್ಯಪ್‌ನಲ್ಲಿ ಅಗತ್ಯ ಮಾಹಿತಿಯನ್ನು ದಾಖಲಿಸುತ್ತಿದ್ದಾರೆ.
ಈ ಹಿಂದೆ ಭಾಗ್ಯಜ್ಯೋತಿ ಹಾಗೂ ಕುಟೀರಜ್ಯೋತಿ ಸ್ಥಾವರಗಳ ಗ್ರಾಹಕರಿಗೆ ಸ್ವಯಂಚಾಲಿತವಾಗಿ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತಿದ್ದು, ಅಂತಹ ಗ್ರಾಹಕರ ದಾಖಲೆಗಳನ್ನು ಸರ್ವೆ ಆ್ಯಪ್‌ನಲ್ಲಿ ದಾಖಲಿಸಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ವಿವಿಧ ಕಾರಣಗಳಿಂದ ಮನೆ-ಮನೆ ಸರ್ವೆ ನಡೆಯದಿರುವ ಗ್ರಾಹಕರು ಮಾಪಕ ಓದುಗರಿಗೆ ಮಾಹಿತಿ ನೀಡಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಬಹುದು.
ಇದಲ್ಲದೇ ಹೆಸ್ಕಾಂನ ಶಾಖಾ ಕಚೇರಿ ಹಾಗೂ ಕಾರವಾರ ಉಪವಿಭಾಗ ಕಚೇರಿಯಲ್ಲಿ ಸರ್ವೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಗ್ರಾಹಕರು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಸರ್ವೆ ಕಾರ್ಯವನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸಬಹುದಾಗಿದೆ.
ಈ ಕುರಿತು ಹೆಸ್ಕಾಂ ಕಾರವಾರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
