Karwar | ಕಾಂಗ್ರೆಸ್ ಸೇವಾದಳದಿಂದ ರವೀಂದ್ರನಾಥ ಟಾಗೋರ್ ಬೀಚ್‌ನಲ್ಲಿ ಸ್ವಚ್ಛತಾ ಅಭಿಯಾನ

IMG 20260920 WA0018 IMG 20260920 WA0018

ಕಾಂಗ್ರೆಸ್ ಸೇವಾದಳದಿಂದ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ

ಮಹಾತ್ಮ ಗಾಂಧೀಜಿಯವರು ಸ್ವಚ್ಛತೆಯನ್ನು ಕೇವಲ ವೈಯಕ್ತಿಕ ಅಭ್ಯಾಸವಲ್ಲ, ಆರೋಗ್ಯಕರ ಮತ್ತು ಶಿಸ್ತುಬದ್ಧ ಸಮಾಜ ನಿರ್ಮಾಣದ ಪ್ರಮುಖ ಜವಾಬ್ದಾರಿ ಎಂದು ಪರಿಗಣಿಸಿದ್ದರು. “ಸ್ವಚ್ಛತೆ ಸ್ವರಾಜ್ಯಕ್ಕಿಂತಲೂ ಮುಖ್ಯ” ಎಂಬ ಗಾಂಧೀಜಿಯವರ ಆಶಯದಂತೆ, ಸ್ವಚ್ಛ ಪರಿಸರ ನಿರ್ಮಾಣದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಯಿತು.

ಇಂದು ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ಮುಖ್ಯ ಸಂಘಟಕರಾದ (ರಾಷ್ಟ್ರೀಯ ಅಧ್ಯಕ್ಷರು) ಶ್ರೀ ಬಿ.ವಿ. ಶ್ರೀನಿವಾಸ್ ಜಿ ಅವರ ಮಾರ್ಗದರ್ಶನ ಮತ್ತು ಸಲಹೆಯಂತೆ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ, ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನಾಚರಣೆಯ ಅಂಗವಾಗಿ ಕಾರವಾರ ನಗರದ ರವೀಂದ್ರನಾಥ್ ಟಾಗೋರ್ ಬೀಚ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಯಿತು.

Advertisement

ಇದನ್ನೂ ಓದಿ:-Karwar | ₹26 ಲಕ್ಷ ಪಾವತಿಸಿದರೂ ಮತ್ತಷ್ಟು ಬಡ್ಡಿ ಬೇಡಿಕೆ ಆರೋಪ: ರಿವಾಲ್ವರ್‌ನಿಂದ ಗುಂಡಿಕ್ಕುವುದಾಗಿ ಬೆದರಿಕೆ; ದೂರು ದಾಖಲು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಟಿ. ನಾಯ್ಕ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಸ್ವಚ್ಛತೆ ಹಾಗೂ ಸಮಾಜದಲ್ಲಿ ಒಗ್ಗಟ್ಟಿನ ಮಹತ್ವವನ್ನು ಸದಾ ಪ್ರತಿಪಾದಿಸಿದ್ದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಶಂಭು ಶೆಟ್ಟಿ ಮಾತನಾಡಿ, ಈ ಸ್ವಚ್ಛತಾ ಅಭಿಯಾನವು ಕಾಂಗ್ರೆಸ್ ಪಕ್ಷದ ನಿಷ್ಠೆ, ಬದ್ಧತೆ, ಸಹಬಾಳ್ವೆ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿಯೂ ಇಂತಹ ಅಭಿಯಾನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರೊಂದಿಗೆ ಆಯೋಜಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾರವಾರ ವಿಧಾನಸಭಾ ಕ್ಷೇತ್ರದ ಯುವ ಮುಖಂಡರಾದ ಗೋಪಾಲಕೃಷ್ಣ ನಾಯಕ್, ರಾಷ್ಟ್ರೀಯ ಸೇವಾದಳದ ಸಂಯೋಜಕರಾದ ಸೂರಜ್ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ್ ಕಲ್ಗುಟ್ಕರ್, ಉಪಾಧ್ಯಕ್ಷರಾದ ಬಾಬು ಶೇಕ್, ಕಾರವಾರ ಪ್ರಚಾರ ಸಮಿತಿಯ ಅಧ್ಯಕ್ಷರಾದ ಜೆ.ಪಿ. ನಾಯಕ, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ರಾಜ್ಯ ಸಂಯೋಜಕರಾದ ಸೈಯದ್ ಅಶ್ರಫ್ ಖಾದ್ರಿ, ಕಾರವಾರ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ರಾಜೇಂದ್ರ ರಾಣೆ, ಕಾರವಾರ ಸೇವಾದಳದ ಅಧ್ಯಕ್ಷರಾದ ರಾಜೇಂದ್ರ ಅಂಚೆಕರ್, NSUI ಅಧ್ಯಕ್ಷರಾದ ವಿಶ್ವ ಮಡಿವಾಳ, ದೇವಾನಂದ ಠಾಣೆಕರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಎಕ್ಬಾಲ್ ಸೈಯದ್, ಅಬ್ದುಲ್ ಅಜೀಜ್, ಇಮ್ತಿಯಾಜ್ ಖುರೇಷಿ, ಮೆಹಬೂಬ್, ದಿಲ್ಶಾದ್ ಕುಟ್ಟಿ, ಲೀಲಾಬಾಯಿ, ಶ್ವೇತಾ ನಾಯ್ಕ್, ಸರೋಜಾ ಶೆಟ್ಟಿ, ಸ್ನೇಹಾ, ಮೇಘನಾ, ವಸಂತ್ ನಾಯಕ, ಶಶಿಕಾಂತ್, ಫ್ರಾಂಕಿ ಗುಡಿನ್ಯೂ, ಸೂರಜ್ ಕುರುಮ್ಕುರ್ ಹಾಗೂ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ:- Karwar | 20 ವರ್ಷಗಳ ಸೇವೆಯ ಬಳಿಕ ICGS ಸಾವಿತ್ರಿಬಾಯಿ ಫುಲೆ ನೌಕೆ ಡಿ-ಕಮಿಷನ್

ಗಾಂಧೀಜಿಯವರ ಸ್ವಚ್ಛತೆ, ಸೇವೆ, ಶಿಸ್ತು ಮತ್ತು ಸಹಬಾಳ್ವೆಯ ಆದರ್ಶಗಳನ್ನು ಮುಂದುವರಿಸುವ ಸಂಕಲ್ಪದೊಂದಿಗೆ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement