


ಕಾರವಾರ/ರಾಮನಗರದ :- ಉತ್ತರ ಕನ್ನಡ ಜಿಲ್ಲೆಯ (uttrakannada )ಜೋಯಿಡಾ ತಾಲೂಕಿನ ರಾಮನಗರದ(ramnagar) ಪ್ರಸಿದ್ಧ ಸಾತೇರಿ ಹಾಗೂ ನಾಗನಾಥ ದೇವಸ್ಥಾನದಲ್ಲಿ ಮಧ್ಯರಾತ್ರಿ ವೇಳೆ ಕಳ್ಳರು ದೇವಾಲಯದಲ್ಲಿ ಇದ್ದ ಕಾಣಿಕೆ ಡಬ್ಬಿ ವಡೆದು ನಗನಾಣ್ಯ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ:-Ramnagar | ಹೋಮ್ ಸ್ಟೇ ನಲ್ಲಿ ರೇವ್ ಪಾರ್ಟಿ | ಮಾದಕ ವಸ್ತುಗಳ ಪತ್ತೆ ಮಾಡಿ 150 ಯುವಕ ,ಯುವತಿಯರ ಬಂಧನ
ಸಾತೇರಿ ಮತ್ತು ನಾಗನಾಥ ದೇವಾಲಯವು ಒಂದೇ ಆವರಣದಲ್ಲಿ ಇದ್ದು ಕಳ್ಳರು ದೇವಾಲಯದ ಬೀಗ ಮುರಿದು ಒಳಹೊಕ್ಕಿದ್ದಾರೆ. ನಂತರ ನಾಗನಾಥ ದೇವಾಲಯದ ಮೂರು ಬೆಳ್ಳಿ ನಾಗಮೂರ್ತಿ ಹಾಗೂ ಕಾಣಿಕೆ ಡಬ್ಬಿ ಒಡೆದು ₹12 ಸಾವಿರಕ್ಕೂ ಹೆಚ್ಚು ಹಣ ದೋಚಿದ್ದಾರೆ. ಇದನ್ನೂ ಓದಿ:-Joida |ಮೂಢನಂಬಿಕೆ ಭಯಕ್ಕೆ ಗ್ರಾಮ ತೊರೆದ ಗೌಳಿ ಕುಟುಂಬಗಳು-ಇಡೀ ಗ್ರಾಮಗಳೇ ಖಾಲಿ !
ಬೆಳಗ್ಗೆ ದೇವಾಲಯಕ್ಕೆ ಪೂಜೆಗೆ ಅರ್ಚಕರು ಬಂದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ನಂತರ ದೇವಾಲಯದ ಆಡಳಿತ ಮಂಡಳಿ ರಾಮನಗರದ ಪೊಲೀಸರಿಗೆ ಮಾಹಿತಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ:-Uttara kannada |ಪ್ರತಿ ತಾಲೂಕಿನಲ್ಲೂ ಡಿಜಿಟಲ್ ಲೈಬ್ರರಿ ನಿರ್ಮಾಣ-ಲಕ್ಷ್ಮಣ್ ಸವದಿ
ಉಳಿದಂತೆ ಹೆಚ್ಚಿನ ಮಾಹಿತಿ ಬರಬೇಕಿದ್ದು ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ದೇವಾಲಯದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿ ಕಳ್ಳರನ್ನ ಹೆಡೆಮುರಿ ಕಟ್ಟಿದ್ದರು.ಆದರೇ ಇದೀಗ ಮಲೆನಾಡು ಭಾಗದಲ್ಲಿ ದೇವಾಲಯದ ಕಳ್ಳತನ ವರದಿಯಾಗುತ್ತಿದೆ.

