


ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಇಂದು ಗಣಪತಿ ವಿಸರ್ಜನೆಗೆ ಸಿದ್ಧತೆ ನಡೆಯುತ್ತಿದ್ದ ವೇಳೆ ಗಣಪತಿ ಪೆಂಡಾಲ್ ಮೇಲೆ ಕಲ್ಲುತೂರಾಟ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ:-Bhatkal : ಗಣಪತಿ ವಿಸರ್ಜನೆ ವೇಳೆ ಕಲ್ಲುತೂರಾಟ ಪ್ರಕರಣ ಆರೋಪಿಗಳಿಗೆ ಜಾಮೀನು
(Bhatkal)ಭಟ್ಕಳ ನಗರದ ತಾಲೂಕು ರಿಕ್ಷಾ ಚಾಲಕ ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿದ್ದ ಗಣಪತಿ ಪೆಂಡಾಲ್‌ನ ಹಿಂಭಾಗದಿಂದ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ ಎನ್ನಲಾಗಿದೆ.
ಕಲ್ಲುತೂರಾಟದ ಮಾಹಿತಿ ತಿಳಿಯುತ್ತಿದ್ದಂತೆ ಭಟ್ಕಳ ಶಹರಾ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇಂದು ಗಣಪತಿ ವಿಸರ್ಜನೆಗೆ ಸಿದ್ಧವಾಗಿದ್ದ ಸಮಿತಿಯ ಪೆಂಡಾಲ್ ಮೇಲೆ ವಿಸರ್ಜನೆ ಸಮಯದಲ್ಲೇ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ:–Karwar | ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿ |ಎಲ್ಲಿ ಏನಾಯ್ತು ? ವಿವರ ನೋಡಿ
ಘಟನೆಗೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷ ಮಂಜುನಾಥ ಗಣಪತಿ ನಾಯ್ಕ ಅವರು ಭಟ್ಕಳ ಶಹರಾ ಠಾಣೆಯಲ್ಲಿ ಎಸ್.ಪಿ ದೀಪನ್ ಗೆ ಮನವಿ ನೀಡಿದ್ದಾರೆ. ಇದನ್ನೂ ಓದಿ:-Bhatkal- ದಾಂಡೇಲಿ ಆಯ್ತು ಇದೀಗ ಭಟ್ಕಳದಲ್ಲಿ ಮೊಸಳೆ ಪ್ರತ್ಯಕ್ಷ
ಪೊಲೀಸರ ತನಿಖೆ -ಸಿಕ್ಕಿದ್ದು ಕ್ರಿಕೆಟ್ ಬಾಲ್.
ಇನ್ನು ಪೊಲೀಸರು ತನಿಖೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದಾಗ ಕ್ರಿಕೆಟ್ ಬಾಲ ಸಿಕ್ಕಿದೆ. ಪಕ್ಕದಲ್ಲೇ ಮೈದಾನ ಇದ್ದು ಮಕ್ಕಳು ಕ್ರಿಕೆಟ್ ಆಡಿದಾಗ ಪೆಂಡಾಲ್ ಮೇಲೆ ಬಾಲ್ ಬಿದ್ದಿರುವ ಬಗ್ಗೆ ಎಸ್.ಪಿ ದೀಪನ್ ರವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಪೆಂಡಾಲ್ ಮೇಲೆ ಕಲ್ಲು ಎಸೆದಿಲ್ಲ ,ಬಾಲ್ ಬಿದ್ದಿರುವುದು ಎಂದು ಸ್ಪಷ್ಟೀಕರಣ ನೀಡಲಾಗಿದೆ.
ಇಂದು ಭಟ್ಕಳ ನಗರದಲ್ಲಿ ನಾಲ್ಕು ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ನಗರದಲ್ಲಿ RAF ಕಂಪನಿ, 3 KSRF ತುಕಡಿಗಳು ಹಾಗೂ 5 ಡಿಆರ್ ತುಕಡಿಗಳು ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ನಗರದಾದ್ಯಂತ ಸಿಸಿ ಕ್ಯಾಮೆರಾಗಳ ಮೂಲಕವೂ ನಿಗಾ ವಹಿಸಲಾಗುತ್ತಿದೆ.
ಘಟನೆಯ ಹಿನ್ನೆಲೆಯಲ್ಲಿ ಎಸ್‌ಪಿ ದೀಪನ್ ಎಂ.ಎನ್. ಅವರು ಭಟ್ಕಳದಲ್ಲೇ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

