ಕಾರವಾರ :- ಉತ್ತರ ಕನ್ನಡ (uttara Kannada) ಜಿಲ್ಲೆಯ ಅಂಕೋಲದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸಮಾರಂಭ ನಾಡವರ ಸಭಾಂಗಣದಲ್ಲಿ ಜರುಗಿತು.ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿಯವರು ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ನೆರವೇರಿಸಿದು. ಇದನ್ನೂ ಓದಿ:-Uttara kannada | ಇಂದು ಎಲ್ಲಿ ಏನಾಯ್ತು ? ಸಮಗ್ರ ಜಿಲ್ಲಾ ಸುದ್ದಿ ಇಲ್ಲಿದೆ
ಶಿಕ್ಷಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಅವರು ಶಿಕ್ಷರನ್ನು ಗುರುವಿನ ಸ್ಥಾನದಲ್ಲಿ ನೋಡಲು ಹೆಮ್ಮೆ ಮತ್ತು ಗೌರವ ಇದೆ.ಕಾರ್ಯಾಂಗ ವ್ಯವಸ್ಥೆ ಉತ್ತಮವಾಗಿ ಸಾಗಲು ಕಾರಣ ಯಾರು ಅಂದರೇ ಅವರೇ ಶಿಕ್ಷಕರು. ಶಿಕ್ಷಕರ ಪ್ರಾಮಾಣಿಕ ಸೇವೆ ನಾಡು,ದೇಶ ಕಟ್ಟುವಲ್ಲಿ ಸಹಾಯ ಮಾಡುತ್ತಿದೆ. ಸರ್ಕಾರಿ ಶಾಲೆಯ ಶಿಕ್ಷಕರ ಶ್ರಮದಿಂದ ಅನೇಕರು ದೊಡ್ಡ ಸ್ಥಾನ ಅಲಂಕರಿಸಿದ್ದಾರೆ.ಈ ದೇಶದ ಪ್ರಧಾನಿ ನರೇಂದ್ರ ಮೋದಿ ಸಹ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ,ಸಿದ್ದರಾಮಯ್ಯನವರು ಒಂದನೇ ತರಗತಿಯಲ್ಲಿ ಶಾಲೆಗೆ ಹೋಗಿಲ್ಲ, ಐದನೇ ತರಗತಿಯಲ್ಲಿ ಶಾಲೆಗೆ ಹೋದರು ,ಉತ್ತಮ ವಕೀಲರಾದರು, ಫೈನಾನ್ಸ್ ಮಿನಿಸ್ಟರ್ ಆದರು ,ಮುಖ್ಯಮಂತ್ರಿ ಆದರೂ ಅವರು ಸಹ ಸರ್ಕಾರಿ ಶಾಲೆಯಲ್ಲಿ ಓದಿದವರು .ಯಾರಾದರೂ ಉನ್ನತ ಸ್ಥಾನ ಪಡೆದಿದ್ದಾರೆ ಎಂದರೇ ಅದಕ್ಕೆ ಸರ್ಕಾರಿ ಶಾಲೆಯ ಶಿಕ್ಷಕರೇ ಕಾರಣ ಎಂದರು. ಇದನ್ನೂ ಓದಿ:-Ankola |ಬಿಜೆಪಿ ಪಾದಯಾತ್ರೆಯಿಂದ ಅವರ ಬಿಪಿ,ಶುಗರ್ ಕಡಿಮೆಯಾಗುತ್ತಿದೆ-ಲಕ್ಷಣ್ ಸವದಿ
ಇನ್ನು ಜಿಲ್ಲಾಧಿಕಾರಿಗಳಿಗೆ ಡಿಜಿಟಲ್ ಲೈಬ್ರೆರಿ ತಾಲೂಕು ಮಟ್ಟದಲ್ಲಿ ಮಾಡಲು ಸೂಚನೆ ನೀಡಿದ್ದು , ಅದಕ್ಕಾಗಿ ಎರಡು ಕೋಟಿ ಅನುದಾನ ಮೀಸಲಿಡಲು ಸೂಚಿಸಿದ್ದು ,ಮೊದಲಬಾರಿ ಅಂಕೋಲ ದಲ್ಲಿ ಡಿಜಿಟಲ್ ಲೈಬ್ರೆರಿ ನಿರ್ಮಾಣ ಮಾಡುವುದಾಗಿ ಹೇಳಿದರು.
