Ankola |ಬಿಜೆಪಿ ಪಾದಯಾತ್ರೆಯಿಂದ ಅವರ ಬಿಪಿ,ಶುಗರ್ ಕಡಿಮೆಯಾಗುತ್ತಿದೆ-ಲಕ್ಷಣ್ ಸವದಿ

Videoshot 20260905 140709 Videoshot 20260905 140709

ಕಾರವಾರ :- ಬಿಜೆಪಿ ಪಾದಯಾತ್ರೆ ಯಿಂದ ಆಡಳಿತ ಪಕ್ಷಕ್ಕೆ ಆತಂಕ ಎನ್ನುವುದು ಸುಳ್ಳು,ಪಾದಯಾತ್ರೆಯಿಂದ ನಮಗೆ ನಷ್ಟ ಇಲ್ಲ ಬಿಜೆಪಿಗರ ಬಿಪಿ, ಶುಗರ್ ಖಾಯಿಲೆ ಕಡಿಮೆ ಆಗುತ್ತದೆ ಎಂದು ಬಿಜೆಪಿಗರ ಮಾತಿಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಹೇಳಿದರು.

ಇದನ್ನೂ ಓದಿ:-Ankola| ಗ್ಯಾಸ್ ಟ್ಯಾಂಕರ್ ಪಲ್ಟಿ -ಪೊಲೀಸರ ಮುಂಜಾಗ್ರತಾ ಕ್ರಮದಿಂದ ತಪ್ಪಿದ ಅನಾಹುತ

ಇಂದು ಅಂಕೋಲದಲ್ಲಿ (ankola) ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಜೆಪಿಗರಿಗೆ ಪಾದಯಾತ್ರೆಯಿಂದ ಬಿಬಿ-ಷುಗರ್ ಕಡಿಮೆ ಆದರೇ ಅವರನ್ನ ನೋಡುವ ವೈದ್ಯರಿಗೆ ಆದಾಯಕ್ಕೆ ನಷ್ಟ  ಆಗುತ್ತೆ ಅಂತ ವೈದ್ಯರಿಗೆ ಆತಂಕ ಹೊರತು ಕಾಂಗ್ರೆಸ್ ನವರಿಗೆ ಯಾವುದೇ ನಷ್ಟ ಇಲ್ಲ ,ಬಿಜೆಪಿಗರ ಬಿಪಿ ಶುಗರ್ ಖಾಯಿಲೆ ಕಡಿಮೆ ಆಗುತ್ತೆ ಎನ್ನೋದೆ ಒಂದು ದೊಡ್ಡ ಹೈಲೆಟ್ ಈ ಪಾದಯಾತ್ರೆಯದ್ದು ಎಂದು ಬಿಜೆಪಿ ನಾಯಕರ ಮಾತಿಗೆ ಟಾಂಗ್ ನೀಡಿದರು.ಇನ್ನು ರಾಜ್ಯದಲ್ಲಿ ನಿಗಮ ಮಂಡಳಿ ನೇಮಕ ಕುರಿತು ಮಾತನಾಡಿದ ಅವರು ಮುಖ್ಯಮಂತ್ರಿಗಳೇ ತಮ್ಮ ಸ್ಥಾನ ಬಿಟ್ಟು ಕೊಟ್ಟಮೇಲೆ ನಿಗಮ ಮಂಡಳಿಯ ಅಧ್ಯಕ್ಷರೂ ಬಿಟ್ಟುಕೊಡಬೇಕು.ಹೀಗಂತ ಮೊದಲೇ ಮಾತಾಗಿತ್ತು. ಕೆಲವೇ ದಿನದಲ್ಲಿ ನಿಗಮಮಂಡಳಿಗೂ ನೇಮಕ ಆಗಲಿದೆ ಎಂದರು.

Advertisement

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement