Sirsi | ಅಕ್ರಮ ಶ್ರೀಗಂಧ ಕೆತ್ತನೆ ಪ್ರಕರಣ; 20.5 ಕೆಜಿ ಶ್ರೀಗಂಧ ವಶ, ಓರ್ವ ಆರೋಪಿ ಬಂಧನ

Sirsi | ಅಕ್ರಮ ಶ್ರೀಗಂಧ ಕೆತ್ತನೆ ಪ್ರಕರಣ; 20.5 ಕೆಜಿ ಶ್ರೀಗಂಧ ವಶ, ಓರ್ವ ಆರೋಪಿ ಬಂಧನ Sirsi | ಅಕ್ರಮ ಶ್ರೀಗಂಧ ಕೆತ್ತನೆ ಪ್ರಕರಣ; 20.5 ಕೆಜಿ ಶ್ರೀಗಂಧ ವಶ, ಓರ್ವ ಆರೋಪಿ ಬಂಧನ
Sirsi news

ಶಿರಸಿ: ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಶ್ರೀಗಂಧದ ( sandal) ತುಂಡುಗಳನ್ನು ಕೆತ್ತನೆ ಮಾಡುತ್ತಿರುವ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಶಿರಸಿ (sirsi) ತಾಲ್ಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ನಡೆದಿದೆ.

Sirsi | ಅಕ್ರಮ ಶ್ರೀಗಂಧ ಕೆತ್ತನೆ ಪ್ರಕರಣ; 20.5 ಕೆಜಿ ಶ್ರೀಗಂಧ ವಶ, ಓರ್ವ ಆರೋಪಿ ಬಂಧನ
Sirsi news

ಇಂದು ಶಿರಸಿ ತಾಲ್ಲೂಕಿನ ಬೊಮ್ಮನಳ್ಳಿ ಗ್ರಾಮದ ಅರಣ್ಯ ಸರ್ವೆ ನಂ. 325ರಲ್ಲಿ ಅನಧಿಕೃತವಾಗಿ ಶ್ರೀಗಂಧದ ಜಾತಿಯ ತುಂಡುಗಳನ್ನು ಕೆತ್ತನೆ ಮಾಡುತ್ತಿರುವ ಕುರಿತು ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದನ್ನೂ ಓದಿ:-Sirsi- ಐದು ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಕಳ್ಳಿಯರ ಬಂಧನ .

ಈ ಹಿನ್ನೆಲೆಯಲ್ಲಿ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಹೆಚ್. ಸೂರ್ಯವಂಶಿ, ಹಾಗೂ ಶಿರಸಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್‌ಕುಮಾರ ಚವ್ಹಾಣ ಅವರ ಮಾರ್ಗದರ್ಶನದಲ್ಲಿ ಶಿರಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

Advertisement

ದಾಳಿ ವೇಳೆ ಶಿರಸಿ ತಾಲೂಕಿನ ಅಡಗದ್ದೆ ಗ್ರಾಮದಮಾರುತಿ ಫಕೀರಪ್ಪ ಓಲೇಕಾರ (38), ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು 20.5 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯಾಗಿರುವ ಮುರಕಿಕೊಡ್ಲಿನ  ವಿನಾಯಕ ಮರಾಠಿ (40) ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ:-Sirsi|ಮಳೆ ಅಬ್ಬರ-ಶಿರಸಿ ನಗರದಲ್ಲಿ ಸೃಷ್ಟಿಯಾದ ಪ್ರವಾಹ-ಹಲವು ಮನೆಗಳಿಗೆ ನೀರು

ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಶ್ವನಾಥ ಅರಬಗೊಂಡ, ಅರಣ್ಯ ಪಾಲಕರಾದ ಸಂತೋಷಕುಮಾರ ರಾಠೋಡ, ಪುಂಡಲೀಕ ತಾವರಖೇಡ ಹಾಗೂ ಇತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

 

.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement