ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal) ತಾಲೂಕಿನ ಮಂಕಿ ಹಾಗೂ ಮುರುಡೇಶ್ವರದಲ್ಲಿ ಅಕ್ರಮವಾಗಿ ಸಾಗಾಟ ಮಾಡುತಿದ್ದ ಆರು ಮರಳು ಲಾರಿಯನ್ನು ವಶಕ್ಕೆ ಪಡೆದು ಚಾಲಕರನ್ನ ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಭಟ್ಕಳ ಉಪವಿಭಾಗದ ಎ.ಎಸ್.ಪಿ ರಾನು ಗುಪ್ತಾ ರವರು ಮುರುಡೇಶ್ವರದಲ್ಲಿ ಮೂರು ಹಾಗೂ ಮಂಕಿಯಲ್ಲಿ ಮೂರು ಅಕ್ರಮ ಮರಳು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧ ಮುರುಡೇಶ್ವರ ಹಾಗೂ ಮಂಕಿ ಠಾಣೆಯಲ್ಲಿ ಪ್ರತ್ತೇಕ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಎಲ್ಲಿ ಯಾವ ಲಾರಿಗಳು ವಶಕ್ಕೆ?
ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಎ-35/ಎ-6189, ಕೆಎ-20/ಎಚ್-6405 ಹಾಗೂ ಕೆಎ-47/ಎ-4658 ಸಂಖ್ಯೆಯ ಮೂರು ಟಿಪ್ಪರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಎ-47/7250, ಜಿಎ-05/ಟಿ-0502 ಹಾಗೂ ಕೆಎ-47/1412 ಸಂಖ್ಯೆಯ ಮತ್ತೂ ಮೂರು ಟಿಪ್ಪರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:-Bhatkal- ದಾಂಡೇಲಿ ಆಯ್ತು ಇದೀಗ ಭಟ್ಕಳದಲ್ಲಿ ಮೊಸಳೆ ಪ್ರತ್ಯಕ್ಷ
ಬಂಧಿತರು ಯಾರು
ಕಾರ್ಯಾಚರಣೆಯಲ್ಲಿ ಹರೀಶ ತಂದೆ ವಿಷ್ಣು ನಾಯ್ಕ ಮಂಕಿ ಅನಂತವಾಡಿ, ಅಜೀತ ತಂದೆ ಸುರೇಶ ನಾಯ್ಕ ಮಂಕಿ ಚಿತ್ತಾರ, ಆನಂದ ತಂದೆ ಅಣ್ಣಪ್ಪ ನಾಯ್ಕ ಹೊನ್ನಾವರ ಬಳ್ಕೂರು, ಪ್ರಕಾಶ ತಂದೆ ಶ್ರೀನಿವಾಸ ಪುರಾಣಿಕ, ಹೊನ್ನಾವರ ಕಾಸರಕೋಡ, ಮಾರುತಿ ತಂದೆ ಶ್ರೀಧರ ನಾಯ್ಕ ಹೊನ್ನಾವರ ಬಳ್ಕೂರು,ಹಾಗೂ ನಜೀರ್ ಮಹ್ಮದ್ ಮೈದಿನ್‌ಕುಟ್ಟಿ,ಹೊನ್ನಾವರ ಗೇರುಸೊಪ್ಪಾ, ಅವರನ್ನು ವಶಕ್ಕೆ ಪಡೆಯಲಾಗಿದೆ.
ದೂರು ನೀಡಿದ್ರೂ ಕ್ರಮ ಇಲ್ಲ.
ಭಟ್ಕಳ ಹಾಗೂ ಹೊನ್ನಾವರ ಭಾಗದಲ್ಲಿ ನದಿ ತೀರಭಾಗದಲ್ಲಿ ನಿರಂತರ ಅಕ್ರಮ ಮರಳುಗಾರಿಕೆ ನಡೆಯುತ್ತಲೇ ಇದೆ. ಈಬಗ್ಗೆ ಸ್ಥಳೀಯರು ಗಣಿಮತ್ತು ಭೂವಿಜ್ಞಾನ ಇಲಾಖೆ,ಜಿಲ್ಲಾಡಳಿತ ,ಪೊಲೀಸ್ ಇಲಾಖೆಗೆ ದೂರು ನೀಡುತ್ತಲೇ ಬಂದಿದ್ದಾರೆ. ಆದರೇ ಈವರೆಗೂ ಕ್ರಮ ಕೈಗೊಳ್ಳದೇ ಅಕ್ರಮ ಮರಳು ಸಾಗಾಟದಾರರಿಗೆ ಮರಳು ಸಾಗಾಟಕ್ಕೆ ಬೆಂಬಲವಾಗಿ ನಿಂತ ಆರೋಪಗಳಿವೆ.
ಆದ್ರೆ ಇದೀಗ ಹೊಸದಾಗಿ ಅಧಿಕಾರ ವಹಿಸಿಕೊಂಡ ಭಟ್ಕಳ ಎ.ಎಸ್ ಪಿ ದಾಳಿ ನಡೆಸಿರುವುದು ,ಇನ್ನಾದರೂ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಬೀಳುತ್ತಾ ಎಂಬ ನಿರೀಕ್ಷೆ ಸ್ಥಳೀಯರದ್ದು .
