Sirsi-ಬೋಲ್ಟ್ ನಟ್ ಉದುರಿ ವಾಯವ್ಯ ಸಾರಿಗೆ ಬಸ್ ನ ಟಯರ್ ಹೊರಕ್ಕೆ -ಸ್ವಲ್ಪದರಲ್ಲೇ ತಪ್ಪಿದ ದುರಂತ.

ಕಾರವಾರ :- ವಾಯುವ್ಯ ಸಾರಿಗೆ ಬಸ್ ಸಂಚರಿಸುತ್ತಿರುವಾಗಲೇ ಹಿಂಭಾಗದ ಟಯರ್ ನ ನಟ್ ಬೋಲ್ಟ್ ಕಳಚಿ ಟಯರ್ ಹೊರಕ್ಕೆ ಬಂದು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಶಿವಾಜಿ ಚೌಕ್ ಬಳಿ ನಡೆದಿದ್ದು ಅದೃಷ್ಟವಶಾತ್ ದೊಡ್ಡ ಅವಘಡ ತಪ್ಪಿದೆ.
ಇದನ್ನೂ ಓದಿ:-Sirsi |ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ- ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಹಿಳೆ
ಚಂದ್ರಗುತ್ತಿಯಿಂದ ಶಿರಸಿಗೆ ಬರುತ್ತಿದ್ದ ವಾಯವ್ಯ ಸಾರಿಗೆ ಬಸ್ ನಲ್ಲಿ 40 ಜನ ವಿದ್ಯಾರ್ಥಿಗಳು ಶಾಲಾಕಾಲೇಜುಗಳಿಗಾಗಿ ಶಿರಸಿ ಕಡೆಗೆ ಪ್ರಯಾಣಿಸುತಿದ್ದರು. ಶಿರಸಿಯ ಬಸ್ ನಿಲ್ದಾಣಕ್ಕೆ ಬರುತಿದ್ದ ವೇಳೆ ಶಿವಾಜಿ ಚೌಕ್ ಬಳಿ ವಾಯುವ್ಯ ಸಾರಿಗೆ ಬಸ್ ನ ಹಿಂಭಾಗದ ಟಯರ್ ನ ಬೋಲ್ಟ್ ಕಳಚಿ ಟಯರ್ ಹೊರಬಂದಿದೆ. ಬಸ್ ನಿಲ್ದಾಣದ ಬಳಿಯೇ ನಿಧಾನವಾಗಿ ಚಲಿಸುತಿದ್ದರಿಂದ ದೊಡ್ಡ ಅವಘಡ ತಪ್ಪಿದೆ.

ಇನ್ನು ಶಿರಸಿ ಡಿಪೋ ಗೆ ಸೇರಿದ ಈ ಬಸ್ ಡಿಪೋದಲ್ಲಿ ಬಸ್ ರಿಪೇರಿ ಮಾಡುವಾಗ ಸಿಬ್ಬಂದಿಗಳ ನಿರ್ಲಕ್ಷದಿಂದ ಬೋಲ್ಟ್ ಲಾಕ್ ಮಾಡದೇ ಹಾಗೆಯೇ ಬಿಟ್ಟಿರುವ ಸಾಧ್ಯತೆಗಳಬಗ್ಗೆ ಆರೋಪ ಮಾಡಲಾಗಿದೆ. ಬಸ್ ಏನಾದರೂ ವೇಗವಾಗಿ ಸಂಚರಿಸಿದ್ದರೇ ಅಪಘಾತ ಆಗುವ ಸಾಧ್ಯತೆಗಳಿತ್ತು. ಆದರೇ ಬಸ್ ನಿಲ್ದಾಣದ ಬಳಿ ನಿಧಾನವಾಗಿ ಚಲಿಸಿದ್ದರಿಂದ ದುರಂತ ತಪ್ಪಿದೆ. ವಾಯುವ್ಯ ಸಾರಿಗೆ ಇಲಾಖೆಯ ನಿರ್ಲಕ್ಷದ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.




