Sirsi|ಮಳೆ ಅಬ್ಬರ-ಶಿರಸಿ ನಗರದಲ್ಲಿ ಸೃಷ್ಟಿಯಾದ ಪ್ರವಾಹ-ಹಲವು ಮನೆಗಳಿಗೆ ನೀರು

Sirsi-ಶಿರಸಿಯಲ್ಲಿ ಭಾರೀ ಮಳೆಯಿಂದ ಕೋಟೆಕೆರೆ ತುಂಬಿ ರಸ್ತೆಗಳಲ್ಲಿ ಪ್ರವಾಹ ಉಂಟಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಗರಸಭೆ ನಿರ್ಲಕ್ಷ್ಯದಿಂದ ಕೃತಕ ಪ್ರವಾಹ ಸೃಷ್ಟಿಯಾಗಿದೆ
ಶಿರಸಿ ನಗರದಲ್ಲಿ ಭಾರೀ ಮಳೆಯಿಂದ ರಸ್ತೆಗಳಲ್ಲಿ ಹರಿದ ಪ್ರವಾಹದ ನೀರು ಶಿರಸಿ ನಗರದಲ್ಲಿ ಭಾರೀ ಮಳೆಯಿಂದ ರಸ್ತೆಗಳಲ್ಲಿ ಹರಿದ ಪ್ರವಾಹದ ನೀರು
ಶಿರಸಿ ಮಳೆಯ ಪ್ರವಾಹದ ಚಿತ್ರ

Sirsi|ಮಳೆ ಅಬ್ಬರ-ಶಿರಸಿ ನಗರದಲ್ಲಿ ಸೃಷ್ಟಿಯಾದ ಪ್ರವಾಹ-ಹಲವು ಮನೆಗಳಿಗೆ ನೀರು.

IMG 20260801 WA0003
ಕಾರವಾರದಲ್ಲಿ ಶುಭಾರಂಭ

IMG 20260801 WA0002

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಮಳೆನಾಡು ಭಾಗದಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಭಾರೀ ಮಳೆಗೆ ಶಿರಸಿ (sirsi)ನಗರದಲ್ಲಿ ಅನಾಹುತವನ್ನೇ ಸೃಷ್ಟಿ ಮಾಡಿದೆ.

ಮಳೆ ಅಬ್ಬರಕ್ಕೆ ಶಿರಸಿಯ ನಗರದ ಹೃದಯಭಾಗದ ಕೋಟೆಕೆರೆ ತುಂಬಿ ರಸ್ತೆಯ ಮೇಲೆ ಹರಿದ ನೀರು ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಶಿರಸಿ ನಗರದ ಸಂವೃದ್ಧಿ ನಗರ,ಹುಬ್ಬಳ್ಳಿ ರಸ್ತೆಯ ಶ್ರೀಧರ ನಗರ ಅಯ್ಯಪ್ಪ ನಗರದ ಚೌಡೇಶ್ವರಿ ಕಾಲೋನಿಗಳಲ್ಲಿ ಮಳೆಗೆ ನೀರು ನಿಂತು ಮನೆಗಳಿಗೆ ನುಗ್ಗಿದ್ದು ಹಲವು ಕಡೆ ಜಲಾವೃತವಾಗಿದೆ. ಇನ್ನು ಮಳೆ,ಗಾಳಿ ಅಬ್ಬರಕ್ಕೆ ಬಿಕ್ನಳ್ಳಿ ಬಳಿ ಸಾವಿತ್ರಿ ಗೌಡ ಎಂಬುವವರಿಗೆ ಸೇರಿದ  ಧನದ ಕೊಟ್ಟಿಗೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ.ಇನ್ನೂ ಹೆಚ್ಚಿನ ಭಾಗದಲ್ಲಿ ಮತ್ತೆ ಮಳೆಬಂದರೇ ಸಂಪೂರ್ಣ ಜಲಾವೃತವಾಗುವ ಸಾಧ್ಯತೆಗಳಿವೆ.

Advertisement

sirsi-ಶಿರಸಿಯಲ್ಲಿ ಮಳೆಯಿಂದ ಹಳವು ಕಡೆ ಜಲಾವೃತ
sirsi-ಶಿರಸಿಯಲ್ಲಿ ಮಳೆಯಿಂದ ಹಳವು ಕಡೆ ಜಲಾವೃತ

ನಗರಸಭೆ ನಿರ್ಲಕ್ಷ ಕೃತಕ ಪ್ರವಾಹ.

ನಗರಸಭೆ ಯಿಂದ ಸೂಕ್ತ ಕಸ ವಿಲೇವಾರಿ ಆಗದೇ ಕಸಗಳು ಚಿರಂಡಿಯಲ್ಲಿ ಸಿಲುಕಿವೆ. ಇನ್ನು ಕೆಲವು ಕಡೆ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಸರಾಗವಾಗಿ ಸಾಗದೇ ರಸ್ತೆಯಲ್ಲಿ ತುಂಬಿ ಮನೆಗಳಿಗೆ ನುಗ್ಗಿದ್ದು ಜನ ಹಿಡಿ ಶಾಪ ಹಾಕುವಂತೆ ಮಾಡಿದೆ.

ಇದನ್ನೂ ಓದಿ:-Sirsi:20 ಸಾವಿರ ಮೌಲ್ಯದ ಗಾಂಜಾ ವಶ -ಆರೋಪಿ ಬಂಧನ

ಸಧ್ಯ ಬೆಳಗಿನಿಂದ ಅಲ್ಪ ಮಳೆ ಬಿಡುವು ಕೊಟ್ಟಿದೆ. ಆದರೇ ಹೆಚ್ಚಿನ ಮಳೆ ಸುರಿದರೇ ಮತ್ತೆ ಹಲವು ಕಾಲೋನಿಗಳಲ್ಲಿ ಜಲಾವೃತವಾಗುವ ಭೀತಿ ಎದುರಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement