Sirsi:20 ಸಾವಿರ ಮೌಲ್ಯದ ಗಾಂಜಾ ವಶ -ಆರೋಪಿ ಬಂಧನ

Sirsi-ಶಿರಸಿಯಲ್ಲಿ ಪೊಲೀಸರು 253 ಗ್ರಾಂ ಗಾಂಜಾ ಹಾಗೂ ಹುಂಡೈ ಐ10 ಕಾರನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.ವಿವರ ನೋಡಿ
AddText 07 16 10.36.35 AddText 07 16 10.36.35

Sirsi:20 ಸಾವಿರ ಮೌಲ್ಯದ ಗಾಂಜಾ ವಶ -ಆರೋಪಿ ಬಂಧನ

ಕಾರವಾರ :- ಉತ್ತರ ಕನ್ನಡ (uttara Kannada) ಜಿಲ್ಲೆಯ ಶಿರಸಿ ನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಗಾಂಜಾ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:-Karwar|ಅರಣ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ-ಉತ್ತರ ಕನ್ನಡ ಜಿಲ್ಲೆಯ 19 RFOಗಳ ವರ್ಗಾವಣೆ

ನಗರದ ಬನವಾಸಿ ರಸ್ತೆಯ ಹಾರ್ಟಿಕಲ್ಚರ್ ಕಾಲೇಜು ಸಮೀಪ ಸಂಜೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಹಾವೇರಿ ಜಿಲ್ಲೆಯ ನವನಗರ ಮೂಲದ, ಪ್ರಸ್ತುತ ದಾಸನಕೊಪ್ಪ ನಿವಾಸಿ ಇಮ್ರಾನ್ ಅಹ್ಮದ್ (29) ಎಂಬಾತನನ್ನು ಬಂಧಿಸಿದ್ದಾರೆ.

Advertisement

ಇದನ್ನೂ ಓದಿ:-Sirsi| ಸ್ನೇಹಿತನ ಹತ್ತು ವರ್ಷದ ಬಾಲಕಿಗೆ ನಿರಂತರ ಲೈಂಗಿಕ ದೌರ್ಜನ್ಯ- ಆರೋಪಿ ಬಂಧನ

ಆರೋಪಿಯಿಂದ ಸುಮಾರು 253 ಗ್ರಾಂ ಗಾಂಜಾ (ಅಂದಾಜು ₹20 ಸಾವಿರ ಮೌಲ್ಯ) ಹಾಗೂ ಕೃತ್ಯಕ್ಕೆ ಬಳಸಿದ್ದ ಹುಂಡೈ ಐ10 ಕಾರು (ಅಂದಾಜು ₹1 ಲಕ್ಷ ಮೌಲ್ಯ) ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:-Sirsi|ಹಸಮಣೆ ಏರಬೇಕಿದ್ದ ಯುವತಿ ಪ್ರೀತಿಸಿದ ಯುವಕನೊಂದಿಗೆ ಪರಾರಿ| ಮುಂದೇನಾಯ್ತು?

ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿತನ ವಿರುದ್ಧ ಈ ಹಿಂದೆ ಮುಂಡಗೋಡ ಠಾಣೆಯಲ್ಲಿ ಎರಡು ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣಗಳು, ಅಂಕೋಲಾ ಠಾಣೆಯಲ್ಲಿ ಮನೆ ಕಳ್ಳತನ ಹಾಗೂ ಹಾನಗಲ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿವೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement