Karwar|ಡ್ರಾಪ್ ನೀಡಲಿಲ್ಲ ಎಂದು ಕಾರು ಚಾಲಕನಿಗೆ ಕಾರವಾರ ಪೊಲೀಸ್ ಕಾನಸ್ಟೇಬಲ್ ಧಮ್ಕಿ: ಐಜಿಗೆ ದೂರು!

Karwar:ಡ್ರಾಪ್ ನೀಡಲಿಲ್ಲ ಎಂಬ ಕಾರಣಕ್ಕೆ ಕಾರು ಚಾಲಕನಿಗೆ ಪೊಲೀಸ್ ಕಾನಸ್ಟೇಬಲ್ ಧಮ್ಕಿ ಹಾಕಿದ ಆರೋಪ. ಆಡಿಯೋ ವೈರಲ್ ಆಗಿದ್ದು, DG & IGPಗೆ ದೂರು; ಎಸ್‌ಪಿ ತನಿಖೆ ಆರಂಭ.
Karwar Police Karwar Police
Karwar Police

Karwar|ಡ್ರಾಪ್ ನೀಡಲಿಲ್ಲ ಎಂದು ಕಾರು ಚಾಲಕನಿಗೆ ಕಾರವಾರ ಪೊಲೀಸ್ ಕಾನಸ್ಟೇಬಲ್ ಧಮ್ಕಿ: ಐಜಿಗೆ ದೂರು!.

 

ಕಾರವಾರ/ಅಂಕೋಲ:-  ಲಿಫ್ಟ್  ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಾರವಾರದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕಾರು ಚಾಲಕನಿಗೆ ಬೆದರಿಕೆ ಹಾಕಿ, ದರ್ಪ ತೋರಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನೊಂದ ಕಾರು ಚಾಲಕ ಇದೀಗ ಪೊಲೀಸ್ ಮಹಾನಿರ್ದೇಶಕರಿಗೆ (ಐಜಿಪಿ) ದೂರು ನೀಡಿದ್ದಾರೆ.

ಇದನ್ನೂ ಓದಿ:-Karwar|ಗೋವಾ ಮದ್ಯ ಸಾಗಾಟ: 26 ಸಾವಿರ ಮೌಲ್ಯದ ಮದ್ಯ ವಶ- ಓರ್ವನ ಬಂಧನ

Advertisement

​ಕಾರವಾರ(Karwar) ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನಸ್ಟೇಬಲ್ ಪ್ರಸಾದ್  ಎಂಬುವವರೇ ಈ ರೀತಿ ಸಾರ್ವಜನಿಕರ ಮೇಲೆ ದರ್ಪ ತೋರಿದ ಆರೋಪ ಎದುರಿಸುತ್ತಿದ್ದಾರೆ.

​ಇಂದು ಬೆಳಿಗ್ಗೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಕಾನಸ್ಟೇಬಲ್ ಪ್ರಸಾದ್ ಕಾರವಾರಕ್ಕೆ ಹೋಗಲು ಡ್ರಾಪ್ ಕೇಳಲು ನಿಂತಿದ್ದರು. ಇದೇ ವೇಳೆ ಅಂಕೋಲಾದಿಂದ ಕಾರವಾರದ ಕಡೆಗೆ ಇನೋವಾ ಕಾರೊಂದು ತೆರಳುತ್ತಿತ್ತು. ತಮಗೆ ಕೆಲಸದ ವೇಳೆಯಾಗಿದ್ದರಿಂದ ಕಾರು ಚಾಲಕ ವಾಹನವನ್ನು ನಿಲ್ಲಿಸದೇ ಮುಂದುವರಿದಿದ್ದಾರೆ.

​ತಾನು ಕೈ ತೋರಿಸಿದರೂ ಕಾರು ನಿಲ್ಲಿಸಲಿಲ್ಲ ಎಂಬ ಅಹಂನಿಂದ ಕಾನಸ್ಟೇಬಲ್ ಪ್ರಸಾದ್, ಇನೋವಾ ಕಾರಿನ ನೋಂದಣಿ ಸಂಖ್ಯೆಯನ್ನು (ರಿಜಿಸ್ಟ್ರೇಷನ್ ನಂಬರ್) ಪಡೆದುಕೊಂಡಿದ್ದಾರೆ. ಬಳಿಕ ಆ ನಂಬರ್ ಆಧರಿಸಿ ಮಾಲೀಕರ/ಚಾಲಕನ ಮೊಬೈಲ್ ಸಂಖ್ಯೆಯನ್ನ ಇಲಾಖೆಯ ಆಪ್ ನಲ್ಲಿ ಪತ್ತೆಹಚ್ಚಿ ಕರೆ ಮಾಡಿದ್ದಾರೆ.

ಇದನ್ನೂ ಓದಿ:-Karwar| ಕನ್ನಡ ಮರೆತ ಕದಂಬ ನೌಕಾನೆಲೆ -ಕನ್ನಡ ನಾಮಫಲಕಕ್ಕಿಲ್ಲ ಬೆಲೆ 

​”ನಾನು ಕೈ ಮಾಡಿದರೂ ವಾಹನವನ್ನು ಏಕೆ ನಿಲ್ಲಿಸಲಿಲ್ಲ? ವಾಹನ ನಿಲ್ಲಿಸದಿದ್ದಕ್ಕೆ 5,000 ರೂಪಾಯಿ ಫೈನ್ ಆಗುತ್ತದೆ” ಎಂದು ಚಾಲಕನಿಗೆ ಫೋನಿನಲ್ಲೇ ತರಾಟೆಗೆ ತೆಗೆದುಕೊಂಡು ಧಮ್ಕಿ ಹಾಕಿದ್ದಾರೆ.

​ತಮ್ಮ ವೈಯಕ್ತಿಕ ಡ್ರಾಪ್‌ಗಾಗಿ ಕಾರು ನಿಲ್ಲಿಸಲು ಯತ್ನಿಸಿದ್ದ ಕಾನಸ್ಟೇಬಲ್  ಚಾಲಕ ಪ್ರಶ್ನಿಸುತ್ತಿದ್ದಂತೆ ಕಥೆ ಬದಲಿಸಿದ್ದಾರೆ. “ನಾನು ಅಲ್ಲಿ ವಾಹನ ತಪಾಸಣೆ  ಮಾಡುತ್ತಿದ್ದೆ” ಎಂದು ಸುಳ್ಳು ಅಪವಾದ ಹೊರಿಸಿದ್ದಾರೆ. ಚಾಲಕ ನೀವು ಯಾವ ಪೊಲೀಸ್ ಸ್ಟೇಷನ್ ಎಂದು ಕೇಳಿದರೂ ಉತ್ತರಿಸದ ಕಾನ್ಸ್ಟೇಬಲ್, ಹಟ್ಟಿಕೇರಿ ಬಳಿ ನಾನು ಒಬ್ಬನೇ ತಪಾಸಣೆ ನಡೆಸುತ್ತಿದ್ದೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಇನ್ನು ASI ಮೇಲ್ಪಟ್ಟ ಅಧಿಕಾರಿಗಳು ಮಾತ್ರ ಇದ್ದರೆ ತಪಾಸಣೆ ಮಾಡಲು ಸಾಧ್ಯ.ಇದಲ್ಲದೇ ಕಾರವಾರ ಲಿಮಿಟ್ ನವರು ಅಂಕೋಲ ಲಿಮಿಟ್ ನಲ್ಲಿ ಹೇಗೆ ತಪಾಸಣೆ ಮಾಡಲು ಸಾಧ್ಯ ಎಂಬುದಕ್ಕೆ ಉತ್ತರ ಸಿಗಲಿಲ್ಲ.

ಇನ್ನು ಪೊಲೀಸ್ ಕಾನಸ್ಟೇಬಲ್ ಮಾತನಾಡಿದ ಆಡಿಯೋ ವನ್ನ ಇನೋವಾ ಮಾಲೀಕ ರೆಕಾರ್ಡ ಮಾಡಿದ್ದಾರೆ.

​ಇದನ್ನೂ ಓದಿ:-Karwar |ಕಾಳಿ ಬ್ರಿಡ್ಜ್ ಬಳಿ ಕಾರ್ಮಿಕರ ಟೆಂಟ್ ಗೆ ಬೆಂಕಿ -ತಪ್ಪಿದ ಅನಾಹುತ-ವಿಡಿಯೋ ನೋಡಿ

​ಆಡಿಯೋ ವೈರಲ್ – ಐಜಿಗೆ ದೂರು:

​ಕಾರು ಚಾಲಕನಿಗೆ ಪೊಲೀಸಪ್ಪ ದರ್ಪದ ಮಾತುಗಳನ್ನಾಡಿ, ಬೆದರಿಕೆ ಹಾಕಿರುವ ದೂರವಾಣಿ ಸಂಭಾಷಣೆಯ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ. ಕೇವಲ ವೈಯಕ್ತಿಕ ಕಾರಣಕ್ಕೆ ಅಧಿಕಾರ ದುರುಪಯೋಗಪಡಿಸಿಕೊಂಡು, ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಈ ಕಾನಸ್ಟೇಬಲ್ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂದು ನೊಂದ ಕಾರು ಚಾಲಕರು ಪೊಲೀಸ್ ಮಹಾನಿರ್ದೇಶಕರಿಗೆ (DG & IGP) ದೂರು ದಾಖಲಿಸಿದ್ದಾರೆ.

ಇನ್ನು ಈ ದೂರು ದಾಖಲಾಗುತಿದ್ದಂತೆ ಸ್ವತಹ ಎಸ್.ಪಿ ದೀಪನ್ ರವರು ತನಿಖೆ ಕೈಗೊಂಡಿದ್ದು ಕಾರವಾರದ ಠಾಣೆಗೆ ಭೇಟಿನೀಡಿ ಮಾಹಿತಿ ಪಡೆದಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement