Karwar| ಕನ್ನಡ ಮರೆತ ಕದಂಬ ನೌಕಾನೆಲೆ -ಕನ್ನಡ ನಾಮಫಲಕಕ್ಕಿಲ್ಲ ಬೆಲೆ 

Karwar:ಕಾರವಾರದ ಕದಂಬ ನೌಕಾನೆಲೆಯಲ್ಲಿ ಕನ್ನಡ ನಾಮಫಲಕ ಅಳವಡಿಸದಿರುವುದಕ್ಕೆ ಕನ್ನಡ ಸಂಘಟನೆಗಳ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಫಲಕ ಹಾಕದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ.
ಕಾರವಾರದ ಕದಂಬ ನೌಕಾನೆಲೆಯ ಹೊಸ ಪ್ರವೇಶ ದ್ವಾರದಲ್ಲಿ ಕನ್ನಡ ನಾಮಫಲಕವಿಲ್ಲದೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಫಲಕ ಮಾತ್ರ ಅಳವಡಿಸಿರುವ ದೃಶ್ಯ. ಕಾರವಾರದ ಕದಂಬ ನೌಕಾನೆಲೆಯ ಹೊಸ ಪ್ರವೇಶ ದ್ವಾರದಲ್ಲಿ ಕನ್ನಡ ನಾಮಫಲಕವಿಲ್ಲದೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಫಲಕ ಮಾತ್ರ ಅಳವಡಿಸಿರುವ ದೃಶ್ಯ.
ಕಾರವಾರದ ಕದಂಬ ನೌಕಾನೆಲೆಯ ಹೊಸ ಪ್ರವೇಶ ದ್ವಾರದಲ್ಲಿ ಕನ್ನಡ ನಾಮಫಲಕವಿಲ್ಲದೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಫಲಕ ಮಾತ್ರ ಅಳವಡಿಸಿರುವ ದೃಶ್ಯ.

Karwar| ಕನ್ನಡ ಮರೆತ ಕದಂಬ ನೌಕಾನೆಲೆ -ಕನ್ನಡ ನಾಮಫಲಕಕ್ಕಿಲ್ಲ ಬೆಲೆ.

 

ಕಾರವಾರ :- ಉತ್ತರ ಕನ್ನಡ (uttara kannada)ಜಿಲ್ಲೆಯ ಕಾರವಾರ (karwar)ತಾಲೂಕಿನ ಕದಂಬ ನೌಕಾನೆಲೆಯಲ್ಲೀಗ ಕನ್ನಡ ನಾಮಫಲಕ ವಿವಾದವೇಳುವಂತೆ ಮಾಡಿದೆ. ಕಾರವಾರದ ಕದಂಬ ನೌಕಾನೆಲೆಯಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗದ ಅವಕಾಶಗಳು ಮರೀಚಿಕೆಯಾಗಿದೆ. ಕನ್ನಡಿಗರು ಎಂದರೇ ತಾಸ್ಸಾರ ಮಾಡುವ ಕದಂಬ ನೌಕಾನೆಲೆ ಆಡಳಿತ ಶಿವಾಜಿ ಉತ್ಸವವನ್ನು ವಿಜ್ರಂಭಣೆಯಿಂದ ಮಾಡುತ್ತದೆ. ಆದರೇ ಕನ್ನಡ ರಾಜ್ಯೋತ್ಸವಕ್ಕೆ ಕದಂಬ ನೌಕಾನೆಲೆಯಲ್ಲಿ ಅವಕಾಶ ಇಲ್ಲ. ಹಿಂದಿ ಸಿನಿಮಾಗಳು ಕದಂಬ ನೌಕಾನೆಲೆಯಲ್ಲಿ ಪ್ರಮೋಷನ್ ಮಾಡಲು ವೇದಿಕೆ ಕಲ್ಪಿಸುತ್ತಾರೆ. ಆದರೇ ಕನ್ನಡಿಗರಿಗೆ ನೌಕಾನೆಲೆಯ ಪ್ರವೇಶವನ್ನೇ ನಿರಾಕರಿಸುತ್ತಾರೆ.

ಏನಿದು ಕನ್ನಡ ನಾಮಫಲಕ ಸಮಸ್ಯೆ

ಕಾರವಾರದಲ್ಲಿ ಚತುಷ್ಪತ ಹೆದ್ದಾರಿ ಕಾಮಗಾರಿ ನಡೆಸುತಿದ್ದು ಕದಂಬ ನೌಕಾನೆಲೆಗೆ ತೆರಳುವ ಹಿಂದಿನ ಜಾಗವನ್ನು ಬಂದ್ ಮಾಡಲಾಗಿದೆ. ಇದಲ್ಲದೇ ಕದಂಬ ನೌಕಾಲೆಗೆ ಹೊಸ ದ್ವಾರವನ್ನು ಮಾಡಿ ,ಹೊಸ ರಸ್ತೆ ಸಂಪರ್ಕ ಮಾಡಲಾಗಿದೆ. ಇನ್ನು ಕದಂಬ ನೌಕಾನೆಯ ದೊಡ್ಡ ಕಮಾನು ನಿರ್ಮಾಣ ಮಾಡಿ ಹೊಸ ರಸ್ತೆ ಮೂಲಕ ಸಂಪರ್ಕ ಕೊಡಲಾಗಿದೆ. ಹೊಸ ಕಮಾನು ನಿರ್ಮಾಣ ಮಾಡುತಿದ್ದಂತೆ ನೌಕಾನೆಲೆಯ ಕರ್ನಾಟಕ ಭಾಗದ ಸಿಬ್ಬಂದಿಗಳು ಕನ್ನಡ ನಾಮಪಲಫಲಕ ಹಾಕಬೇಕು ಎಂಬ ಮನವಿಯನ್ನು ಮಾಡಿದ್ದರು. ಆದರೇ ಕಮಾನು ನಿರ್ಮಾಣ ಆದ ನಂತರ ಕೇವಲ ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಮಾತ್ರ ನಾಮಫಲಕ ಹಾಕಲಾಗಿದೆ.

Advertisement

ಇದನ್ನೂ ಓದಿ:-Karwar|ಜಾತಿ ಆಧಾರದಲ್ಲಿ ಕೆಲಸಕ್ಕೆ ಬಾರದವರಿಗೆ ಸಚಿವ ಸ್ಥಾನ ಕೊಡಬಾರದು-ವಿ.ಎಸ್.ಉಗ್ರಪ್ಪ

 ಕರ್ನಾಟಕದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳಿಗೆ ಕೇವಲ ಕನ್ನಡ ನಾಮಫಲಕ ಕಡ್ಡಾಯ ಎಂಬ ಕಾನೂನು ಇಲ್ಲ. ಆದರೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಾಮಫಲಕಗಳನ್ನು ಪ್ರದರ್ಶಿಸುವುದು ಕೇಂದ್ರ ಸರ್ಕಾರದ ಅಧಿಕೃತ ಭಾಷಾ ನಿಯಮಗಳ ಪ್ರಕಾರ ಕಡ್ಡಾಯವಾಗಿದೆ.ಆದರೇ ಪ್ರಾದೇಶಿಕತೆ ಎಂದು ಬಂದಾಗ ಕರ್ನಾಟಕ ಸರ್ಕಾರದ ಕಾನೂನುಗಳು ಮತ್ತು ನೀತಿಗಳ ಪ್ರಕಾರ, ರಾಜ್ಯದ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಅನೇಕ ಸಾರ್ವಜನಿಕ ಸಂಸ್ಥೆಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯ ನೀಡಬೇಕು. 2023ರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯು ರಾಜ್ಯ ಇಲಾಖೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳ ನಾಮಫಲಕಗಳಲ್ಲಿ ಪ್ರಾಥಮಿಕವಾಗಿ ಕನ್ನಡ ಇರಬೇಕು ಎಂದು ಹೇಳುತ್ತದೆ.

ಇದನ್ನೂ ಓದಿ:-Ankola | ಒಂದೇ ಅಂಗಡಿಗೆ 5 ಬಾರಿ ಕಳ್ಳತನ! ಶಟರ್‌ಗೆ ಕರೆಂಟ್ ಹರಿಸಿ ಪರಾರಿಯಾಗುವ ಖತರ್ನಾಕ್ ಕಳ್ಳ -ವಿಡಿಯೋ ನೋಡಿ

ಕರ್ನಾಟಕದಲ್ಲಿರುವ ಅನೇಕ ಕೇಂದ್ರ ಸರ್ಕಾರಿ ಕಚೇರಿಗಳು ಸ್ಥಳೀಯ ಜನರ ಅನುಕೂಲಕ್ಕಾಗಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತ್ರಿಭಾಷಾ ನಾಮಫಲಕಗಳನ್ನು ಬಳಸುತ್ತಿವೆ. ಹೀಗಿರುವಾಗ ಕರ್ನಾಟಕದಲ್ಲಿದ್ದು ಕನ್ನಡ ನಾಮಫಲಕ ಹಾಕದೇ ನಿರ್ಲಕ್ಷ ಮಾಡಿರುವುದು ಕನ್ನಡಿಗರ ಸ್ವಾಭಿಮಾನ ಕೆರಳುವಂತೆ ಮಾಡಿದೆ.

ಕನ್ನಡ ನಾಮಫಲಕ ಹಾಕದಿದ್ದರೆ ಪ್ರತಿಭಟನೆ ಎಚ್ಚರಿಕೆ

Karwar Naval base
Karwar Kadamba Neval base( kannadavani image)

ಇನ್ನು ಕರ್ನಾಟಕದಲ್ಲಿದ್ದು ಸ್ಥಳೀಯ ಭಾಷೆಯ ಫಲಕ ಬಳಸದಿರುವುದಕ್ಕೆ ಜಿಲ್ಲೆಯ ಕನ್ನಡ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಕರಾವಳಿ ಕನ್ನಡ ಸಂಘಟನೆ ಅಧ್ಯಕ್ಷ ಭಾಸ್ಕರ್  ಪಟಗಾರ್ ರವರು ಮಾತನಾಡಿ ಗಡಿನಾಡಿನ ಕದಂಬ ನೌಕಾನೆಲೆಯಲ್ಲಿ ಕನ್ನಡ ನಾಮಫಲಕ ಹಾಕದೇ ನಿರ್ಲಕ್ಷ ಮಾಡಲಾಗಿದೆ. ಕನ್ನಡ ನಾಡಿನಲ್ಲಿದ್ದು ಕನ್ನಡಕ್ಕೆ ಒತ್ತು ಕೊಡದೇ ಪ್ರಾದೇಶಿಕತೆಯನ್ನು ಮರೆತು ನಿರ್ಲಕ್ಷ ಮಾಡಲಾಗಿದೆ. ಈ ಬಗ್ಗೆ ನಮ್ಮ ವಿರೋಧವಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ.ಒಂದುವೇಳೆ ಕನ್ನಡ ನಾಮಫಲಕ ಹಾಕದಿದ್ದಲ್ಲಿ ನೌಕಾನೆಲೆ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದು ಕದಂಬ ನೌಕಾನೆಯಲ್ಲಿ ಕನ್ನಡವನ್ನು ನಿರ್ಲಕ್ಷ ಮಾಡಿರುವುದಕ್ಕೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement