Ankola|ಅತೀ ವೇಗ -ಜಿಪ್ಸಂ ತುಂಬಿದ ಲಾರಿ ಪಲ್ಟಿ -ಚಾಲಕ ,ಕ್ಲೀನರ್ ಬಚಾವ್.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲ(ankola) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52 ರ ಅಡ್ಲೂರ್ ಬಳಿ ಜಿಪ್ಸಂ ತುಂಬಿದ ಲಾರಿಯೊಂದು(ಕ್ಯಾಲ್ಸಿಯಂ ಸಲ್ಫೇಟ್ ಮತ್ತು ಗಂಧಕ ಮಿಶ್ರಣ) ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನೆಡೆದಿದೆ.
ಇದನ್ನೂ ಓದಿ:-Ankola | ಒಂದೇ ಅಂಗಡಿಗೆ 5 ಬಾರಿ ಕಳ್ಳತನ! ಶಟರ್‌ಗೆ ಕರೆಂಟ್ ಹರಿಸಿ ಪರಾರಿಯಾಗುವ ಖತರ್ನಾಕ್ ಕಳ್ಳ -ವಿಡಿಯೋ ನೋಡಿ
ಕೇರಳದಿಂದ ಕೊಪ್ಪಳ ಕಡೆಗೆ ಜಿಪ್ಸಂ ಹೊತ್ತು ಸಾಗುತ್ತಿದ್ದ ಲಾರಿ ಅಡ್ಲೂರ್ ಬಳಿ ಬರುತ್ತಿದ್ದಂತೆ, ಚಾಲಕನ ಅತೀ ವೇಗದ ಚಾಲನೆಯಿಂದಾಗಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರೊಂದಕ್ಕೆ ಡಿಕ್ಕಿಯಾಗಿ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಲಾರಿ ಸಂಪೂರ್ಣ ಪಲ್ಟಿಯಾಗಿದ್ದರೂ, ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಯಾವುದೇ ಪ್ರಾಣಾಪಾಯವಿಲ್ಲದೇ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಲಾರಿ ಪಲ್ಟಿಯಾದ ರಭಸಕ್ಕೆ ಅದಲ್ಲಿದ್ದ ಜಿಪ್ಸಂ ಗೊಬ್ಬರವು ಘಟನಾ ಸ್ಥಳದ ಸುತ್ತಲೂ ಸುಮಾರು 50 ಮೀಟರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ಸಂಪೂರ್ಣವಾಗಿ ಹರಡಿಕೊಂಡಿದೆ.
ಪ್ರಸ್ತುತ ಮಳೆಗಾಲವಾಗಿರುವುದರಿಂದ, ಮಳೆ ಬಂದರೆ ಈ ಜಿಪ್ಸಂ ಪಕ್ಕದಲ್ಲೇ ಇರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಕೊಚ್ಚಿ ಹೋಗಿ ಸೇರುವ ಸಾಧ್ಯತೆ ಹೆಚ್ಚಾಗಿದೆ.
ಬಾವಿಯ ನೀರು ಕಲುಷಿತಗೊಂಡು ಕುಡಿಯಲು ಯೋಗ್ಯವಲ್ಲದಂತಾಗುವ ಭೀತಿ ಎದುರಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ಕುಡಿಯುವ ನೀರಿನ ಮೂಲಕ್ಕೆ ಧಕ್ಕೆಯಾಗದಂತೆ ಹರಡಿರುವ ಜಿಪ್ಸಂ ಅನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
