ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟೇಬಲ್ ಇಟ್ಟು ಮ್ಯೂಸಿಕ್ ಹಾಕಿ ವಾಹನ ಅಡ್ಡಗಟ್ಟಿದ ಭೂಪ-ವಿಡಿಯೋ ನೋಡಿ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೇಬಲ್ ಮೇಲೆ ಟಿವಿ ಇಟ್ಟು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಯುವಕನನ್ನು ಬಂಧಿಸಿದ ಘಟನೆ ನೆಡೆದಿದ್ದು ವಿಡಿಯೋ ಇಲ್ಲಿದೆ ನೋಡಿ
ಉಡುಪಿ ಜಿಲ್ಲೆಯ ಕೋಟ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿವಿ ಇಟ್ಟು ವಾಹನ ತಡೆದ ಯುವಕ. ಪೊಲೀಸರ ಮೇಲೆ ಕತ್ತಿ ಬೀಸಲು ಯತ್ನಿಸಿದ ಆರೋಪದಡಿ ಬಂಧನ, ಘಟನೆಯ ವಿಡಿಯೋ ವೈರಲ್. ಉಡುಪಿ ಜಿಲ್ಲೆಯ ಕೋಟ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿವಿ ಇಟ್ಟು ವಾಹನ ತಡೆದ ಯುವಕ. ಪೊಲೀಸರ ಮೇಲೆ ಕತ್ತಿ ಬೀಸಲು ಯತ್ನಿಸಿದ ಆರೋಪದಡಿ ಬಂಧನ, ಘಟನೆಯ ವಿಡಿಯೋ ವೈರಲ್.
ಘಟನೆಯ ನೈಜ ಚಿತ್ರ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟೇಬಲ್ ಇಟ್ಟು ಮ್ಯೂಸಿಕ್ ಹಾಕಿ ವಾಹನ ಅಡ್ಡಗಟ್ಟಿದ ಭೂಪ-ವಿಡಿಯೋ ನೋಡಿ

ಉಡುಪಿ:-ಉಡುಪಿ (udupi) ಜಿಲ್ಲೆಯ ಕೋಟ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ವಿಚಿತ್ರ ಘಟನೆಯೊಂದು ವಾಹನ ಸವಾರರಲ್ಲಿ ಕೆಲವು ಕಾಲ ಆತಂಕ ಸೃಷ್ಟಿಸಿತು.

Advertisement

 ರಾಷ್ಟ್ರೀಯ ಹೆದ್ದಾರಿಯ ಮಧ್ಯೆಯೇ ಟೇಬಲ್ ಇಟ್ಟು, ಅದರ ಮೇಲೆ ಟಿವಿ ಹಾಗೂ ಮ್ಯೂಸಿಕ್ ವ್ಯವಸ್ಥೆ ಮಾಡಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಇದನ್ನೂ ಓದಿ:-Udupi| ಕಡವೆ ಗೆ ಬೈಕ್ ಡಿಕ್ಕಿ ವಾಹನ ಸವಾರ ಸಾವು ಸಹ ಸವಾರ ಗಂಭೀರ

ಉಡುಪಿ ಜಿಲ್ಲೆಯ ಕೋಟ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನೊಬ್ಬ ವಿಚಿತ್ರವಾಗಿ ವರ್ತಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದಾನೆ.

ಬೆಲ್ಲದ ಗಣಪತಿ ದೇವಸ್ಥಾನ ಸಮೀಪದ ನಿವಾಸಿ 25 ವರ್ಷದ ರಂಜಿತ್ ಸೋಮಯಾಜಿ ಎಂಬಾತ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಟೇಬಲ್ ಇಟ್ಟು, ಅದರ ಮೇಲೆ ಟಿವಿ ಹಾಗೂ ಮ್ಯೂಸಿಕ್ ವ್ಯವಸ್ಥೆ ಮಾಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ.

ಇದನ್ನೂ ಓದಿ:-Udupi: ತಂದೆಯ ಚಿತೆಯ ಮುಂದೆ ಭೂಗತ ಪಾತಕಿ ಬನ್ನಂಜೆ ರಾಜ

ಉದ್ದನೆಯ ತಲೆಕೂದಲು ಮತ್ತು ಗಡ್ಡ ಹೊಂದಿದ್ದ ಯುವಕನ ವರ್ತನೆ ಕಂಡು ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಹಲವರು ವಾಹನಗಳನ್ನು ನಿಧಾನಗೊಳಿಸಿ ಎಚ್ಚರಿಕೆಯಿಂದ ಸಂಚರಿಸಿದರೆ, ಸ್ಥಳೀಯರು ತಕ್ಷಣ ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ಪಡೆಯಲು ಮುಂದಾದ ವೇಳೆ, ಆತ ಪೊಲೀಸರ ಮೇಲೆಯೇ ಕತ್ತಿ ಬೀಸಿ ಹಲ್ಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಬಳಿಕ ಪೊಲೀಸರು ಯುವಕನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಮಾನಸಿಕ ಅಸ್ವಸ್ಥತೆಯ ಸಾಧ್ಯತೆಯನ್ನು ಪರಿಶೀಲಿಸಲಾಗಿದ್ದರೂ, ಮಾನಸಿಕ ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಸಂಪೂರ್ಣ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಪ್ರಕರಣದ ಕುರಿತು ಕೋಟ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement