Sirsi| ಸ್ನೇಹಿತನ ಹತ್ತು ವರ್ಷದ ಬಾಲಕಿಗೆ ನಿರಂತರ ಲೈಂಗಿಕ ದೌರ್ಜನ್ಯ- ಆರೋಪಿ ಬಂಧನ.
Sirsi :- ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi)ಹಳ್ಳಿಯೊಂದರಲ್ಲಿ (ಸ್ಥಳವನ್ನು ಗೌಪ್ಯವಾಗಿಡಲಾಗಿದೆ)ಸ್ನೇಹಿತನ ಹತ್ತು ವರ್ಷದ ಬಾಲಕಿಯನ್ನ ನಿರಂತರ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:-Sirsi |ಹಾಸ್ಟೆಲ್ ನಲ್ಲೇ ಅಪ್ರಾಪ್ತೆ ಬಾಲಕಿ ಹೆರಿಗೆ-ಟಾಯ್ಲೆಟ್ ನಿಂದ ಹುಟ್ಟಿದ ಮಗು ಎದೆದ ಬಾಲಕಿ
ಶಿರಸಿ ಗ್ರಾಮೀಣ ಭಾಗದ ಹಳ್ಳಿಯೊಂದರ ನಾಗೇಶ್ ಗೌಡ ಎಂಬಾತನೇ ಪುಟ್ಟ ಬಾಲಕಿಯನ್ನ ನಿರಂತರ ಲೈಂಗಿಕ ದೌರ್ಜನ್ಯ ಮಾಡಿದ ವೆಕ್ತಿಯಾಗಿದ್ದು ಈತನನ್ನ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ನಾಗೇಶ್ ಗೌಡ ಎಂಬಾತ ದೌರ್ಜನ್ಯಕ್ಕೊಳಗಾದ ಪುಟ್ಟ ಬಾಲಕಿಯ ಸ್ಬೇಹಿತನಾಗಿದ್ದಾನೆ. ಬಾಲಕಿಯ ತಾಯಿ ಶಿರಸಿ(sirsi) ನಗರದ ಹೋಟಲ್ ಒಂದರಲ್ಲಿ ಕೆಲಸ ಮಾಡುತಿದ್ದು ಮನೆಯಲ್ಲಿ ಬಾಲಕಿ ಜೊತೆ ತಂದೆ ಮಾತ್ರ ಇರುತಿದ್ದನು. ಬಾಲಕಿಯ ತಂದೆ ಮದ್ಯ ವೆಸನಿಯಾಗಿದ್ದು ಈತನಿಗೆ ಪ್ರತಿ ದಿನ ಮದ್ಯ ಸೇವಿಸಲು ನಾಗೇಶ್ ಗೌಡ ಸಾತ್ ನೀಡುತಿದ್ದ.
ಇದನ್ನೂ ಓದಿ:-Sirsi:ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ:1.30 ಲಕ್ಷ ರೂ. ಮೌಲ್ಯದ ಚಿನ್ನ, ನಗದು ಜಪ್ತಿ
ಬಾಲಕಿ ತಾಯಿ ಮನೆಯಲ್ಲಿ ಇರದಿದ್ದಾಗ ನಾಗೇಶ್ ಗೌಡನದ್ದೇ ಕಾರುಬಾರಾಗಿದ್ದು ಮದ್ಯ ಸೇವಿಸಿ ಪುಟ್ಟ ಬಾಲಕಿ ಎಂಬ ಕರುಣೆಯನ್ನು ಸಹ ತೋರದೇ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಬಾಲಕಿ ನಿರಂತರ ಲೈಂಗಿಕ ದೌರ್ಜನ್ಯದಿಂದ ಹೊಟ್ಟೆ ನೋವಿನಿಂದ ಬಳಲಿದ್ದಾಳೆ.ಇದನ್ನ ಗಮನಿಸಿದ ತಾಯಿ ವೈದ್ಯರ ಬಳಿ ಕರೆದೊಯ್ದಿದ್ದು ಬಾಲಕಿಯನ್ನ ವಿಚಾರಿಸಿದಾಗ ನಾಗೇಶ್ ಗೌಡ ಎಂಬಾತನ ಕ್ರೌರ್ಯ ಹೊರಬಂದಿದೆ.
ತಕ್ಷಣ ಶಿರಸಿ ಗ್ರಾಮೀಣ ಠಾಣೆಗೆ ಮಾಹಿತಿ ನೀಡಿದ್ದು ,ಕಾರ್ಯಪ್ರವೃತ್ತರಾದ ಪೊಲೀಸರು ನಾಗೇಶ್ ಗೌಡನನ್ನ ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದು ,ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲೂ ದೌರ್ಜನ್ಯವಾಗಿರುವುದು ಬೆಳಕಿಗೆ ಬಂದಿದೆ.







