ಮುರುಡೇಶ್ವರ ದೇವಾಲಯದ ಹೆಸರಲ್ಲಿ ಲಕ್ಕಿ ಡ್ರಾ ವಂಚನೆ -ಒಂದು ವರ್ಷದ ನಂತರ ಆರೋಪಿ ಬಂಧನ !.
ಕಾರವಾರ :- ಉತ್ತರ ಕನ್ನಡ (uttara kannada)ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ದೇವಾಲಯದ ಹೆಸರು ಬಳಸಿ ,ದೇವಾಲಯದ ಫೋಟೋ ಹಾಕಿ ಮುರ್ಡೇಶ್ವರ ಅದೃಷ್ಟ ಡ್ರಾ ಎಂಬ ಹೆಸರಿನಲ್ಲಿ ನಖಲಿ ಲಾಟರಿ ಟಿಕೇಟ್ ಮಾರಾಟಮಾಡಿ ವಂಚನೆ ಮಾಡುತಿದ್ದ ಆರೋಪಿಯನ್ನು ದೂರುದಾಖಲಾಗಿ ಒಂದು ವರ್ಷದ ನಂತರ ಮುರುಡೇಶ್ವರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ:-Jothishi Murder case|ಕಮಲಾಕರ್ ಭಟ್ ಸೇರಿ ಐವರಿಗೆ ಫೆ.21 ರ ವರೆಗೆ ನ್ಯಾಯಾಂಗ ಬಂಧನ
ಹೋಟೇಲ್ ಕೆಲಸ ಮಾಡಿಕೊಂಡು ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಸಾಲಖನಗಾಂವದ ನರಸಿಂಗ್ ತಂದೆ ವೆಂಕಟರಾವ್ ತಗರಖೇಡೆ ಬಂಧಿತ ಆರೋಪಿ ಆಗಿದ್ದಾನೆ.
ಘಟನೆ ಏನು?
ಯಾರೋ ಅಪರಿಚಿತ ವ್ಯಕ್ತಿಯು “ಮುರ್ಡೇಶ್ವರ ಅದೃಷ್ಟ ಡ್ರಾ ಹೆಸರಿನಲ್ಲಿ ನಕಲಿ ಪೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ಮೂಲಕ, ದೇವಸ್ಥಾನದ ಪೋಟೋವನ್ನು ಬಳಿಸಿಕೊಂಡು ಲಕ್ಕಿ ಡ್ರಾ ಮೂಲಕ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ, ಶ್ರೀ ಮುರುಡೇಶ್ವರ ಅದೃಷ್ಟ ಡ್ರಾ ಎಂದು ಪಾಂಪ್ಲೆಟ್ ತಯಾರಿಸಿ, ನಕಲಿ ಲಾಟರಿ ಟಿಕೇಟ್‌ನ್ನು ಹರಿ ಬಿಟ್ಟು. ಜನರಲ್ಲಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿ ಜನರಿಂದ ಹಣವನ್ನು ಪಡೆದು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದನು.
ಇದನ್ನೂ ಓದಿ:-Murdeshwara|ಜಮಖಂಡಿಯ 102 ವರ್ಷದ ಪುರಾತನ ಆಂಜನೇಯ ಮೂರ್ತಿ ಮುರ್ಡೇಶ್ವರ ಸಮುದ್ರದಲ್ಲಿ!
ಈ ಬಗ್ಗೆ ಶ್ರೀ ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮ್ಯಾನೇಜರ್ ಮಂಜುನಾಥ ತಂದೆ ಮದನ ಶೆಟ್ಟಿ ಎಂಬುವವರು ದಿನಾಂಕ : 06-08-2025 ರಂದು ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಠಾಣಾ ಗುನ್ನಾ ನಂ : 90/2025, ಕಲಂ: 318(4). 319(2), 336(2), 62. ಬಿ,ಎನ್,ಎಸ್-2023 ನೇದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ:-Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ.
ಸದ್ರಿ ಪ್ರಕರಣದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿ, ರಾಜಸ್ಥಾನ, ಮಹಾರಾಷ್ಟ್ರ, ಬೀದರ ಜಿಲ್ಲೆಗಳಲ್ಲಿ ಆರೋಪಿತನ ಇರುವಿಕೆಯ ಬಗ್ಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಮಾಹಿತಿ ಸಂಗ್ರಹಿಸಿ, ನಂತರ ಖಚಿತವಾದ ಹಾಗೂ ತಾಂತ್ರಿಕ ಮಾಹಿತಿಯ ಆದಾರದ ಮೇಲೆ
ಆರೋಪಿಯನ್ನು ದಸ್ತುಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜುರು ಪಡಿಸಿದ್ದು ಇದೀಗ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣದಲ್ಲಿ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ದೀಪನ ಎನ್.ಎಮ್ ರವರ ಸೂಚನೆಯಂತೆ ಗಿರೀಶ ಬಿ, ಪೊಲೀಸ್ ಉಪಾಧಿಕ್ಷಕರು ಭಟ್ಕಳ ಉಪ ವಿಭಾಗ ಹಾಗೂ ಜಗಧೀಶ ಹಂಚನಾಳ ಸಿಪಿಐ ಮುರ್ಡೇಶ್ವರ ವೃತ್ತರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ಹಣಮಂತ ಬಿರಾದಾರ ಮತ್ತು ಲೋಕನಾಥ ರಾಥೋಡ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಸಿ,ಪಿ,ಸಿ-1094 ಮಂಜುನಾಥ ಲಕ್ಕಾಪುರ, ಸಿ,ಪಿ,ಸಿ-603 ಬಿಲಾಲಹೃದ ಸಿದ್ದಾಪೂರ ಸಿ,ಪಿ,ಸಿ-2037 ವಿಜಯ ನಾಯ್ಕ ಸಿ.ಪಿ.ಸಿ-767 ಸಿದ್ದಪ್ಪ ಕಾಂಬಳೆ ರವರು ಕಾರಾಚರಣೆಯಲ್ಲಿ ಭಾಗವಹಿಸಿ ಬಂಧಿಸುವಲ್ಲಿ ಯಶಸ್ವಿಕಂಡಿದ್ದಾರೆ.
