Election | ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ -ನಾಲ್ಕು ಜಿಲ್ಲೆಗಳಲ್ಲಿ ಎಷ್ಟು ಮತದಾರರು? ಹೇಗಿದೆ ವ್ಯವಸ್ತೆ?

Western Graduates Constituency election 2026 voter and polling booth details of Dharwad, Gadag, Haveri and Uttara Kannada districts Western Graduates Constituency election 2026 voter and polling booth details of Dharwad, Gadag, Haveri and Uttara Kannada districts
Western Graduates Constituency election 2026 voter and polling booth details of Dharwad, Gadag, Haveri and Uttara Kannada districts

Election | ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ -ನಾಲ್ಕು ಜಿಲ್ಲೆಗಳಲ್ಲಿ ಎಷ್ಟು ಮತದಾರರು? ಹೇಗಿದೆ ವ್ಯವಸ್ತೆ?ವಿವರ ನೋಡಿ-

ಕಾರವಾರ /ಧಾರವಾರ:- ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಘೋಷಣೆಯಾಗಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ದಿನಾಂಕ ಕೂಡಾ ಆರಂಭವಾಗಿದೆ. ಹಾಗಿದ್ರೆ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ. ಯಾವ ಜಿಲ್ಲೆಯಲ್ಲಿ ಎಷ್ಟು ಮತದಾರರು ,ಎಷ್ಟು ಬೂತುಗಳನ್ನ ಮಾಡಲಾಗಿದೆ. ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ

 ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಸೆಪ್ಟೆಂಬರ್ 22ರಂದು ಘೋಷಣೆ ಮಾಡಲಾಗಿದೆ. 22 ರಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 2 ಕೊನೆಯ ದಿನವಾಗಿದ್ದು ,ನಾಮಪತ್ರ ಪರಿಶೀಲನೆ ಅಕ್ಟೋಬರ್ 07 ಆಗಿದ್ದು,ಉಮೇದುವಾರಿಕೆ ಹಿಂಪಡೆಯಲು ಅಕ್ಟೋಬರ್ 9 ಕೊನೆಯ ದಿನ.ಮತದಾನವು ಅಕ್ಟೋಬರ್ 23 ರಂದು ನಡೆಯಲಿದ್ದು ಮತೆಣಿಕೆ ಅ.27 ರಂದು ನಡೆಯಲಿದೆ.ಇದನ್ನೂ ಓದಿ:-Uttara kannada |ಜಿಲ್ಲೆಯ 13 ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಮುಂದಾದ ಇಲಾಖೆ -ಯಾವುದೆಲ್ಲಾ ಪಟ್ಟಿಯಲ್ಲಿದೆ?

Advertisement

ಅಭ್ಯರ್ಥಿಗಳನ್ನ ಘೋಷಣೆ ಮಾಡಿರುವ ಪಕ್ಷಗಳು.

ಚುನಾವಣೆ ಘೋಷಣೆ ಮೊದಲೇ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಗಳನ್ನ ಕಣದಲ್ಲಿ ಇಳಿಸಿದ್ದರು. ಸದ್ಯ ಧಾರವಾಡದಲ್ಲಿ ನಾಲ್ಕು ಜಿಲ್ಲೆ ಒಳಗೊಂಡ ಈ ಕ್ಷೇತ್ರದ ನಾಮಪತ್ರ ಸಲ್ಲಿಕೆ ನಡೆಯಲಿದೆ.

ಕಾಂಗ್ರೆಸ್ ಪಕ್ಷದಿಂದ ಮೋಹನ ಲಿಂಬಿಕಾಯಿ ಕಣದಲ್ಲಿ ಇದ್ದರೆ, ಬಿಜೆಪಿಯಿಂದ ಹಾಲಿ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಅವರನ್ನೇ ಕಣದಲ್ಲಿ ಇಳಿಸಲಾಗಿದೆ. ನಾಲ್ಕು ಜಿಲ್ಲೆಗಳನ್ನೊಳಗೊಂಡ ಈ ಕ್ಷೇತ್ರದ ನಾಮಪತ್ರ ಸಲ್ಲಿಕೆ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲೇ ನಡೆಯಲಿದ್ದು ಅಕ್ಟೋಬರ್ 6 ರವರೆಗೆ  ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ ಮಾಡಲಾಗಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ ಎಂ ಜಾನಕಿ ಮುಖ್ಯ ಚುನಾವಣಾಧಿಕಾರಿಯಾಗಿದ್ದು, ನಾಲ್ಕು ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಉಪಚುನಾವಣಾಧಿಕಾರಿಗಳಾಗಿರುತ್ತಾರೆ. ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಒಟ್ಟು 92005 ಪದವೀಧರರು ತಮ್ಮ ಹಕ್ಕನ್ನ ಚಲಾಯಿಸಲಿದ್ದಾರೆ.

 ನಾಲ್ಕು ಜಿಲ್ಲೆಯ ಎಷ್ಟು ಪದವೀಧರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.?

  • ಧಾರವಾಡ -32938
  • ಹಾವೇರಿ-22987
  • ಗದಗ -20437
  • ಉತ್ತರ ಕನ್ನಡ.-15643.

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಒಟ್ಟು 137 ಮತಗಟ್ಟೆಗಳನ್ನು ಮಾಡಲಾಗಿದೆ.

  • ಧಾರವಾಡ-56
  • ಹಾವೇರಿ-29
  • ಗದಗ-27
  • ಉತ್ತರ ಕನ್ನಡ‌-25

 ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮತ ಏಣಿಕೆ ಕಾರ್ಯ ಅಕ್ಟೋಬರ್27 ರಂದು ನಡೆಯಲಿದೆ. ಸದ್ಯ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ತಯಾರಿ ಸಂಪೂರ್ಣ ಮಾಡಿಕೊಳ್ಳಲಾಗಿದ್ದು, ಧಾರವಾಡ ಜಿಲ್ಲಾಧಿಕಾರಿ ಕಚೇರಿ ಅಕ್ಕಪಕ್ಕ ಬ್ಯಾರಿಕೆಡ್ ಹಾಕಿ ನಾಮಪತ್ರ ಸಲ್ಲಿಕೆಗೆ ಸಜ್ಜು ಮಾಡಿಕೊಳ್ಳಲಾಗಿದೆ. ನಾಲ್ಕು ಜಿಲ್ಲೆಯ ಎಷ್ಟು ಜನರು ಕಣದಲ್ಲಿ ಇಳಿಯಲಿದ್ದಾರೆ ಅನ್ನೊದು ಲೆಕ್ಕಾಚಾರ ನಡೆದಿದೆ. ಯಾಕೆಂದ್ರೆ ಆಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಹೊರತು ಪಡಿಸಿ ಪಕ್ಷೇತರ ಅಭ್ಯರ್ಥಿಗಳು ಕೂಡಾ ಕಣದಲ್ಲಿ ಇಳಿಯಲಿದ್ದಾರೆ. ಹೀಗಾಗಿ ಈ ಬಾರಿ ಕೂಡಾ ಚುನಾವಣಾ ಕಣ ರಂಗೇರಲಿದೆ

ಇದನ್ನೂ ಓದಿ:-Uttara kannada : 37 ಗ್ರಾಮಗಳಲ್ಲಿ ಶೂನ್ಯ ಜನಸಂಖ್ಯೆ- ಗ್ರಾಮ ತೊರೆಯುತ್ತಿರುವ ಜನರು

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement