Ankola| ಅಂಕೋಲದಲ್ಲಿ ನಾಡಬಾಂಬ್ ತೆಗೆದುಕೊಂಡು ಹೋದ ಮೃತ ನಾಗೇಂದ್ರ|ರಮ್ಯಾಳಿಂದ ಲವ್ ಸ್ಟೋರಿ ರಿವೀಲ್ 

ಅಂಕೋಲದ ನಾಗೇಂದ್ರ ಪ್ರಕರಣದಲ್ಲಿ ರಮ್ಯಾ ನೀಡಿದ ಹೇಳಿಕೆಯಿಂದ ಪ್ರೇಮ ಕಥೆಯ ಹೊಸ ವಿವರಗಳು ಬಹಿರಂಗವಾಗಿವೆ. ನಾಡಬಾಂಬ್ ಸ್ಫೋಟ, ಚಾಕು ದಾಳಿ ಹಾಗೂ ಪೊಲೀಸ್ ತನಿಖೆಯ ಸಂಪೂರ್ಣ ಮಾಹಿತಿ.
ಅಂಕೋಲದ ನಾಗೇಂದ್ರ ಪ್ರಕರಣಕ್ಕೆ ಸಂಬಂಧಿಸಿದ ಸಂಕೇತಾತ್ಮಕ ಚಿತ್ರ; ನಾಡಬಾಂಬ್ ಸ್ಫೋಟ ಪ್ರಕರಣ, ರಮ್ಯಾ ಹೇಳಿಕೆ ಮತ್ತು ಪೊಲೀಸ್ ತನಿಖೆ ಕುರಿತು. ಅಂಕೋಲದ ನಾಗೇಂದ್ರ ಪ್ರಕರಣಕ್ಕೆ ಸಂಬಂಧಿಸಿದ ಸಂಕೇತಾತ್ಮಕ ಚಿತ್ರ; ನಾಡಬಾಂಬ್ ಸ್ಫೋಟ ಪ್ರಕರಣ, ರಮ್ಯಾ ಹೇಳಿಕೆ ಮತ್ತು ಪೊಲೀಸ್ ತನಿಖೆ ಕುರಿತು.
ಅಂಕೋಲದ ನಾಗೇಂದ್ರ ಪ್ರಕರಣಕ್ಕೆ ಸಂಬಂಧಿಸಿದ ಸಂಕೇತಾತ್ಮಕ ಚಿತ್ರ; ನಾಡಬಾಂಬ್ ಸ್ಫೋಟ ಪ್ರಕರಣ, ರಮ್ಯಾ ಹೇಳಿಕೆ ಮತ್ತು ಪೊಲೀಸ್ ತನಿಖೆ ಕುರಿತು.

Ankola| ಅಂಕೋಲದಲ್ಲಿ ನಾಡಬಾಂಬ್ ತೆಗೆದುಕೊಂಡು ಹೋದ ಮೃತ ನಾಗೇಂದ್ರ|ರಮ್ಯಾಳಿಂದ ಲವ್ ಸ್ಟೋರಿ ರಿವೀಲ್ .

ಅಂಕೋಲಾ: ಏಳೆಂಟು ವರ್ಷಗಳ ಪ್ರೀತಿ, ಜಾತಿಯ ಆಟದಿಂದ ಪ್ರೀತಿ ಕೊನೆಗೆ ರಕ್ತಸಿಕ್ತವಾಗಿ ನಾಡಬಾಂಬ್ ಸ್ಫೋಟದೊಂದಿಗೆ ದಾರುಣ ಅಂತ್ಯ ಕಂಡಿದೆ! ಪ್ರೀತಿಸಿದಾಕೆಗೆ ಚಾಕು ಇರಿದು, ತಾನು ತಂದಿದ್ದ ನಾಡ ಬಾಂಬ್ ಸ್ಫೋಟಿಸಿಕೊಂಡು ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿಯ ಪುನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

​ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜನಗುಳಿ ಹೊಳೆಗದ್ದೆಯ ನಾಗೇಂದ್ರ ತಿಮ್ಮಪ್ಪ ಗೌಡ (32) ಮೃತಪಟ್ಟ ದುರ್ದೈವಿ. ಈತನ ದಾಳಿಯಿಂದ ಪ್ರೀತಿಪಾತ್ರಳಾದ ರಮ್ಯಾ ನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​ಕೊರಿಯರ್ ಬಾಯ್ ಲವ್ ಸ್ಟೋರಿಯ ದಾರುಣ ಅಂತ್ಯ:

ಸ್ಪೋಟಗೊಂಡ ಕಾರು

Advertisement

​ಕೇವಲ 10ನೇ ತರಗತಿ ಓದಿದ್ದ ನಾಗೇಂದ್ರ ಗೌಡ ಅಂಕೋಲಾದಲ್ಲಿ ಖಾಸಗಿ ಕಂಪನಿಯ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೂ ರಮ್ಯಾ ನಾಯ್ಕಗೂ ಕಳೆದ ಏಳೆಂಟು ವರ್ಷಗಳಿಂದ ಪ್ರೀತಿ ಇತ್ತು ಎನ್ನಲಾಗಿದೆ. ಆದರೆ, ಇವರ ಪ್ರೀತಿಗೆ ಜಾತಿ ಅಡ್ಡ ಬಂದಿದ್ದರಿಂದ ಕೆಲ ವರ್ಷಗಳಿಂದ ಸುಮ್ಮನಾಗಿದ್ದರು. ಆದರೆ ನಾಗೇಂದ್ರನ ಮನಸ್ಸಿನಲ್ಲಿ ಪ್ರೀತಿಯ ಕಿಚ್ಚು ಆರಿರಲಿಲ್ಲ ಎನ್ನಲಾಗಿದೆ.ಕಳೆದ ಏಳೆಂಟು ದಿನಗಳಿಂದ ಬೆಂಗಳೂರಿನಲ್ಲೇ ಇದ್ದ ನಾಗೇಂದ್ರ ಶುಕ್ರವಾರ ಬೆಳಿಗ್ಗೆ ಮನೆಗೆ ಬಂದಿದ್ದನು. ಹಾಗೆಯೇ ಮತ್ತೆ ಕೆಲಸದಮೇಲೆ ಶುಕ್ರವಾರ ರಾತ್ರಿ ಹೆಬ್ಬುಳ ಗ್ರಾಮದ ಪ್ರತಿಷ್ಠಿತ ಹೋಟೆಲ್ ಬಳಿ ಬೈಕ್ ನಿಲ್ಲಿಸಿ ಬೆಂಗಳೂರಿಗೆ ತೆರಳಿದ್ದ ಎನ್ನಲಾಗಿದೆ.

ಅಂಕೋಲದ ನಾಗೇಂದ್ರ ಪ್ರಕರಣಕ್ಕೆ ಸಂಬಂಧಿಸಿದ ಸಂಕೇತಾತ್ಮಕ ಚಿತ್ರ; ನಾಡಬಾಂಬ್ ಸ್ಫೋಟ ಪ್ರಕರಣ, ರಮ್ಯಾ ಹೇಳಿಕೆ ಮತ್ತು ಪೊಲೀಸ್ ತನಿಖೆ ಕುರಿತು.
ಅಂಕೋಲದ ನಾಗೇಂದ್ರ ಪ್ರಕರಣಕ್ಕೆ ಸಂಬಂಧಿಸಿದ ಸಂಕೇತಾತ್ಮಕ ಚಿತ್ರ; ನಾಡಬಾಂಬ್ ಸ್ಫೋಟ ಪ್ರಕರಣ, ರಮ್ಯಾ ಹೇಳಿಕೆ ಮತ್ತು ಪೊಲೀಸ್ ತನಿಖೆ ಕುರಿತು.
IMG 20260627 202437
ಹೋಟೆಲ್ ನಲ್ಲಿ ಬೈಕ್ ಬಿಟ್ಟು ಹೋಗಿದ್ದ ನಾಗೇಂದ್ರ

ಶನಿವಾರ ಬೆಳಿಗ್ಗೆ ಬೆಂಗಳೂರಿನ ಸಿದ್ದಾಪುರ ಠಾಣೆಯ ವ್ಯಾಪ್ತಿಯ ಭೋವಿ ಕಾಲೊನಿಯಲ್ಲಿ ಗೆಳತಿಯೊಂದಿಗೆ ವಾಸವಿದ್ದ ರಮ್ಯಾ ನಾಯ್ಕ ರೂಮಿಗೆ ತೆರಳಿ ಚಾಕು ತೋರಿಸಿ ನಾಗೇಂದ್ರ ಗೌಡ ಅಪಹರಿಸಿದ್ದ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಆರೋಪಿಯನ್ನು ಹಿಡಿಯುವಷ್ಟರಲ್ಲಿ ಈ ದುರಂತ ಸಂಭವಿಸಿದೆ.

​ಕಾರಿನಲ್ಲೇ ಚಾಕು ಇರಿತ, ನಾಡ ಬಾಂಬ್ ಸ್ಫೋಟ!

Tumkur Car Fire Ramya Nagendra
ಮೃತ ನಾಗೇಂದ್ರ ಗೌಡ ಹಾಗೂ ಗಾಯಗೊಂಡ ರಮ್ಯ ಚಿತ್ರ

​ಶನಿವಾರ ಕೊರಿಯರ್ ಕೆಲಸಕ್ಕೆಂದು ಮನೆಯಿಂದ ಬೆಂಗಳೂರಿಗೆ ತೆರಳಿದ್ದ ನಾಗೇಂದ್ರ, ಅಲ್ಲಿಂದ ಬೆಂಗಳೂರಿನಿಂದಲೇ ಕ್ಯಾಬ್ (ಕಾರು) ಬುಕ್ ಮಾಡಿಕೊಂಡು ರಮ್ಯಾ ನಾಯ್ಕಳನ್ನು ಚಾಕು ತೋರಿಸಿ ಹೆದರಿಸಿ ಕರೆದುಕೊಂಡು ಬರುತ್ತಿದ್ದ ಎನ್ನಲಾಗಿದೆ. ಕಾರು ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ತಲುಪುತ್ತಿದ್ದಂತೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಈ ವೇಳೆ ನಾಗೇಂದ್ರ ರಮ್ಯಾಗೆ ಚಾಕುವಿನಿಂದ ಇರಿದಿದ್ದಾನೆ. ಅಷ್ಟಕ್ಕೇ ನಿಲ್ಲದೆ, ತಾನು ತಂದಿದ್ದ ನಾಡ ಬಾಂಬ್ ಸ್ಫೋಟಿಸಲು ಮುಂದಾಗಿದ್ದಾನೆ. ಅಷ್ಟರಲ್ಲಿ ನಾಗೇಂದ್ರನ ಕೈಯಲ್ಲಿದ್ದ ಬಾಂಬ್ ಹಾಗೂ ಆತನ ಭೀಕರ ರೂಪವನ್ನು ಕಂಡ ತಕ್ಷಣ ರಮ್ಯಾ ನಾಯ್ಕ ಹಾಗೂ ಕಾರು ಚಾಲಕ ಚಲಿಸುತ್ತಿದ್ದ ಕಾರಿನಿಂದ ಹೊರಗೆ ಹಾರಿದ್ದಾರೆ. ತಕ್ಷಣವೇ ಕಾರಿನೊಳಗೆ ಭೀಕರ ನಾಡ ಬಾಂಬ್ ಸ್ಫೋಟ ಸಂಭವಿಸಿದ್ದು, ಕಾರು ಸಂಪೂರ್ಣವಾಗಿ ಭಸ್ಮವಾಗಿದೆ. ನಾಗೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

​ಸೈಲೆಂಟ್ ಹುಡುಗ ವೈಲೆಂಟ್ ಆಗಿದ್ದು ಹೇಗೆ?

​ಊರಿನಲ್ಲಿ ಅತ್ಯಂತ ಸೌಮ್ಯ ಹಾಗೂ ಶಾಂತ ಸ್ವಭಾವದವನಾಗಿದ್ದ ನಾಗೇಂದ್ರ ಗೌಡ, ಈ ಮಟ್ಟಿಗೆ ವೈಲೆಂಟ್ ಆಗಿ ‘ಸೂಸೈಡ್ ಬಾಂಬರ್’ ಮಾದರಿಯಲ್ಲಿ ಸ್ಫೋಟಿಸಿಕೊಂಡಿದ್ದು ಹೇಗೆ ಎನ್ನುವುದು ಇಡೀ ಗ್ರಾಮಸ್ಥರಿಗೆ ಕೌತುಕ ಹಾಗೂ ಆಘಾತ ಮೂಡಿಸಿದೆ. ಪ್ರೀತಿಯ ವಿಫಲತೆಯೇ ಈತನನ್ನು ಈ ಕ್ರೌರ್ಯಕ್ಕೆ ತಳ್ಳಿತೇ ಎಂಬ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ:-Ankola| ಸರ್ಕಾರದ ಅನುದಾನ ಇಲ್ಲ ಗೃಹಲಕ್ಷ್ಮಿ ಹಣದಿಂದ ಶಾಲೆ ಅಡುಗೆ ಕಟ್ಟಡ ನಿರ್ಮಿಸಿದ ವನಿತೆಯರು

ಹತ್ಯೆಗೆ ಮೊದಲೇ ಸ್ಕೆಚ್ !

ಆತನ ಚಲನವಲನ ಗಮನಿಸಿದಾಗ ,ನಾಗೇಂದ್ರ ಮೊದಲೇ ಪ್ರೀಪ್ಲಾನ್ ಮಾಡಿಕೊಂಡಿದ್ದಾನೆ ಎಂಬುದು ಅನುಮಾನ ಬರುತ್ತವೆ. ಕೆಲವು ಸಿಸಿ ಕ್ಯಾಮರಾ ದೃಶ್ಯಾವಳಿಗಳು ಲಭ್ಯವಾಗಿದ್ದು ಆತ ಮೊದಲೇ ಊರಿನಿಂದ ನಾಡಬಾಂಬ್ ಅನ್ನು ಯಾರಲ್ಲಿಯೋ ಸಿದ್ದಪಡಿಸಿಕೊಂಡು ಖರೀದಿಸಿ ತಂದಿರುವ ಸಾಧ್ಯತೆಗಳಿವೆ.

ಇದನ್ನೂ ಓದಿ:-Kumta|ಹಸಿದ ಭಿಕ್ಷುಕ ಊಟ ಕೇಳಿದ್ದಕ್ಕೆ ಗೂಸ ಕೊಟ್ಟ ಹೋಟಲ್ ಮಾಲೀಕ-ಪ್ರಕರಣ ದಾಖಲು

ಈತ ಹೋಟಲ್ ಒಂದರಲ್ಲಿ ಬ್ಯಾಗ್ ಹಾಕಿಕೊಂಡು ಅದೇ ಹೋಟಲ್ ನಲ್ಲಿ ಊಟ ಕಟ್ಟಿಸಿಕೊಂಡು ಬೆಂಗಳೂರು ಬಸ್ ಏರಿದ್ದಾನೆ. ಹೀಗಾಗಿ ಆತ ಊರಿನಿಂದಲೇ ನಾಡಬಾಂಬ್ ತಯಾರಿಸಿಕೊಂಡು ಹೋಗಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ.

​ಪೊಲೀಸರ ತನಿಖೆ ಚುರುಕು: ನಾಡ ಬಾಂಬ್ ಸಿಕ್ಕಿದ್ದು ಎಲ್ಲಿ?

Videoshot 20260628 201848

​ಘಟನಾ ಸ್ಥಳಕ್ಕೆ ಸಿಪಿಐ ಶ್ರೀಧರ್ ಎಸ್.ಆರ್. ಹಾಗೂ ಚಂದ್ರಶೇಖರ್ ಮಠಪತಿ ಭೇಟಿ ನೀಡಿ ನಾಡ ಬಾಂಬ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಾಗೇಂದ್ರನ ಕೈಗೆ ಈ ನಾಡ ಬಾಂಬ್ ಎಲ್ಲಿಂದ ದೊರೆಯಿತು? ಇದರ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಕೋಲಾದಲ್ಲಿರುವ ನಾಗೇಂದ್ರನ ಮನೆಗೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ  ಆಗಮಿಸಿದ್ದು, ತೀವ್ರ ಶೋಧ ಕಾರ್ಯ ನಡೆಸಿದೆ. ಇನ್ನು ಈತನ ಗೆಳೆಯರೇ ಯಲ್ಲಾಪುರ ಅಥವಾ ಹಳಿಯಾಳ ದಿಂದ ನಾಡಬಾಂಬ್ ಕೊಡಿಸಿರುವ ಸಾಧ್ಯತೆಗಳಿದ್ದು ಈಬಗ್ಗೆ ಸಹ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:-Ankola| ದೋಣಿ ಮುಳುಗಿ ಮೀನುಗಾರ ಸಾವು

​ಗಾಯಗೊಂಡಿರುವ ರಮ್ಯಾ ನಾಯ್ಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದೀಗ ಮೃತ ನಾಗೇಂದ್ರನ ವಿರುದ್ಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಲ್ಲದೇ ರಮ್ಯಾ ಪೊಲೀಸರಿಗೆ ಸ್ಟೇಟ್ಮೆಂಟ್ ನೀಡಿದ್ದು ತಾನು ಆರು ವರ್ಷದಿಂದ ಪ್ರೀತಿಸುತಿದ್ದೆ ಆತ ಎರಡು ವರ್ಷದ ನಂತರ ಅನುಮಾನ ಪಡುವುದು ,ಕಿರುಕುಳ ನೀಡುವುದನ್ನ ಮಾಡುತಿದ್ದ , ಅದಕ್ಕಾಗಿ ಆತನಿಂದ ದೂರ ಉಳಿದಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.

ನಾಗೇಂದ್ರ ಸಣ್ಣ ಸಣ್ಣ ವಿಚಾರಕ್ಕೂ ಹಲ್ಲೆ ಮಾಡ್ತಿದ್ದ – ಪಾಗಲ್‌ ಪ್ರೇಮಿಯ ಕರಾಳ ಮುಖ ಬಿಚ್ಚಿಟ್ಟ ಯುವತಿ.

ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪಾಗಲ್‌ ಪ್ರೇಮಿ ನಾಗೇಂದ್ರನ ಬಗ್ಗೆ ನೊಂದ ಯುವತಿ ರಮ್ಯಾ ಒಂದೊಂದೇ ಮಾಹಿತಿ ಬಿಚ್ಚಿಟ್ಟಿದ್ದಾರೆ

ನಾಲ್ಕು ಪುಟಗಳ ದೂರು ಸಲ್ಲಿಸಿರುವ ಯುವತಿ, ಕಳೆದ ಆರು ವರ್ಷಗಳ ಪ್ರೀತಿ ಬಗ್ಗೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರೀತಿ ಆರಂಭವಾದ ಎರಡು ವರ್ಷದ ಬಳಿಕ ನಾಗೇಂದ್ರನ ನಡವಳಿಕೆ ಬದಲಾಗಿತ್ತು. ಸಣ್ಣಪುಟ್ಟ ವಿಚಾರಕ್ಕೂ ಹೊಡೆಯುವುದು ಬೈಯುವುದು ಮಾಡುತಿದ್ದ. ಬಳಿಕ ಆತನ ನಡವಳಿಕೆಯಿಂದ ಬೇಸತ್ತು ದೂರಾಗಿದ್ದೆ ಎಂದು ಯುವತಿ ಹೇಳಿಕೊಂಡಿದ್ದಾರೆ

ನಾನು ಮಾತನಾಡುವುದು ನಿಲ್ಲಿಸಿದರೂ ಪುನಃ ಹುಡುಕಿಕೊಂಡು ಬರುತ್ತಿದ್ದ. ನಾನು ಇರುವಲ್ಲಿ ಬಂದು ಗಲಾಟೆ ಮಾಡಿ ಹಲ್ಲೆ ಮಾಡುತಿದ್ದ. ಆಗ ನಾನೇ ಆತನ ಸಮಾಧಾನ ಮಾಡಿ ಕಳುಹಿಸುತ್ತಿದ್ದೆ. ಅದಾದ ಬಳಿಕ ನಾನೂ ಊರು ತೊರೆದು ಬಂದಿದ್ದೆ. ಆದರೂ ಬಿಡದೇ ಬಂದು ಕಿರುಕುಳ ಕೊಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement