Kumta|ಹಸಿದ ಭಿಕ್ಷುಕ ಊಟ ಕೇಳಿದ್ದಕ್ಕೆ ಗೂಸ ಕೊಟ್ಟ ಹೋಟಲ್ ಮಾಲೀಕ-ಪ್ರಕರಣ ದಾಖಲು

ಕುಮಟಾದ ಗೋವರ್ಧನ ಹೋಟೆಲ್‌ನಲ್ಲಿ ಊಟ ಕೇಳಿದ ಭಿಕ್ಷುಕ ದಂಪತಿಗೆ ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ ಆರೋಪ. ಗಾಯಗೊಂಡ ದಂಪತಿಗೆ ಚಿಕಿತ್ಸೆ ನೀಡಲಾಗಿದ್ದು, ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kumta|ಹಸಿದ ಭಿಕ್ಷುಕ ಊಟ ಕೇಳಿದ್ದಕ್ಕೆ ಗೂಸ ಕೊಟ್ಟ ಹೋಟಲ್ ಮಾಲೀಕ-ಪ್ರಕರಣ ದಾಖಲು Kumta|ಹಸಿದ ಭಿಕ್ಷುಕ ಊಟ ಕೇಳಿದ್ದಕ್ಕೆ ಗೂಸ ಕೊಟ್ಟ ಹೋಟಲ್ ಮಾಲೀಕ-ಪ್ರಕರಣ ದಾಖಲು
ಹಲ್ಲೆಗೊಳಗಾದ ಭಿಕ್ಷಕ

Kumta|ಹಸಿದ ಭಿಕ್ಷುಕ ಊಟ ಕೇಳಿದ್ದಕ್ಕೆ ಗೂಸ ಕೊಟ್ಟ ಹೋಟಲ್ ಮಾಲೀಕ-ಪ್ರಕರಣ ದಾಖಲು

 

ಕಾರವಾರ:-ಹೊಟ್ಟೆ ಹಸಿವಿನಿಂದ ಹೋಟಲ್ ನಲ್ಲಿ ಊಟ ಕೇಳಿದ್ದಕ್ಕೆ ಭಿಕ್ಷುಕ ದಂಪತಿಗಳಿಗೆ ಹೋಟಲ್ ಮಾಲೀಕ ಹಾಗೂ ಸಿಬ್ಬಂದಿ ಹಿಗ್ನಾಮುಗ್ಗ ಥಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ನಗರದ ಹೊಸ ಬಸ್ ನಿಲ್ದಾಣದ ಗೋವರ್ಧನ ಹೋಟಲ್ ನಲ್ಲಿ ನಡೆದಿದೆ.ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ದೇವಿಕೆರೆ ಗ್ರಾಮದ ನಿವಾಸಿ ರಮೇಶ ದ್ಯಾಮಣ್ಣ ಅಲೆಮಾರಿ (62) ಆತನ ಪತ್ನಿ ದ್ಯಾಮವ್ವ ರಮೇಶ ಅಲೆಮಾರಿ (51) ಹಲ್ಲೆಗೊಳಗಾದವರಾಗಿದ್ದಾರೆ.ಗೋವರ್ಧನ್ ಹೋಟೆಲ್ ಮಾಲೀಕ ಗಣೇಶ ನಾಯ್ಕ ಹಾಗೂ ಹೋಟೆಲ್ ವಾಚ್‌ಮನ್ ಗಣೇಶ ಗುರಕಾ ಹಲ್ಲೇ ಮಾಡಿದ ವ್ಯಕ್ತಿಗಳಾಗಿದ್ದಾರೆ.

ಇದನ್ನೂ ಓದಿ:-Kumta|ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿ ಸಮುದ್ರಪಾಲು

Advertisement

ಮಧ್ಯಹ್ನದ ವೇಳೆ ಹೋಟಲ್ ಗೆ ಬಂದ ಬಿಕ್ಷುಕರು ಊಟ ನೀಡುವಂತೆ ಪೀಡಿಸಿದ್ದಾರೆ. ಇದರಿಂದ ಕುಪಿತನಾದ ಹೋಟಲ್ ಮಾಲೀಕ

ಬಿಕ್ಷಕರನ್ನ ತಳ್ಳಿ ಹೊಡೆದಿದ್ದಾರೆ. ಈ ವೇಳೆ ಭಿಕ್ಷಕ ರಮೇಶ್  ದ್ಯಾವಣ್ಣ ರಸ್ತೆಯಲ್ಲಿ ಬಿದ್ದು ತಲೆಗೆ ಪೆಟ್ಟಾಗಿದೆ.ಹಲ್ಲೆಯಿಂದ ನಡು ರಸ್ತೆಯಲ್ಲೇ ರಕ್ತಸಿಕ್ತವಾಗಿ ಬಿದ್ದಿದ್ದ ದಂಪತಿಗಳನ್ನ ಕುಮಟಾ ಪೊಲೀಸರು  ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು ಘಟನೆ ಸಂಬಂಧ ಹೋಟಲ್ ಮಾಲೀಕ ಹಾಗೂ ಸಿಬ್ಬಂದಿ ವಿರುದ್ಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement