Ankola| ಸರ್ಕಾರದ ಅನುದಾನ ಇಲ್ಲ ಗೃಹಲಕ್ಷ್ಮಿ ಹಣದಿಂದ ಶಾಲೆ ಅಡುಗೆ ಕಟ್ಟಡ ನಿರ್ಮಿಸಿದ ವನಿತೆಯರು

Ankola:ಉತ್ತರ ಕನ್ನಡ ಜಿಲ್ಲೆಯ ಅಂಬುಕೋಣ ಗ್ರಾಮದಲ್ಲಿ ಮಹಿಳೆಯರು ತಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿ ಸರ್ಕಾರಿ ಶಾಲೆಗೆ ಹೊಸ ಬಿಸಿಯೂಟ ಅಡುಗೆ ಕಟ್ಟಡ ನಿರ್ಮಿಸಿ ಮಾದರಿಯಾಗಿದ್ದಾರೆ
ಅಂಬುಕೋಣ ಗ್ರಾಮದ ಮಹಿಳೆಯರು ಗೃಹಲಕ್ಷ್ಮಿ ಹಣದಿಂದ ನಿರ್ಮಿಸಿದ ಸರ್ಕಾರಿ ಶಾಲೆಯ ಹೊಸ ಬಿಸಿಯೂಟ ಅಡುಗೆ ಕಟ್ಟಡದ ಮುಂದೆ ಗ್ರಾಮಸ್ಥರು ಮತ್ತು ಶಾಲಾ ಸಿಬ್ಬಂದಿ ಅಂಬುಕೋಣ ಗ್ರಾಮದ ಮಹಿಳೆಯರು ಗೃಹಲಕ್ಷ್ಮಿ ಹಣದಿಂದ ನಿರ್ಮಿಸಿದ ಸರ್ಕಾರಿ ಶಾಲೆಯ ಹೊಸ ಬಿಸಿಯೂಟ ಅಡುಗೆ ಕಟ್ಟಡದ ಮುಂದೆ ಗ್ರಾಮಸ್ಥರು ಮತ್ತು ಶಾಲಾ ಸಿಬ್ಬಂದಿ
ಅಂಬುಕೋಣ ಗ್ರಾಮದ ಮಹಿಳೆಯರು ಗೃಹಲಕ್ಷ್ಮಿ ಹಣದಿಂದ ನಿರ್ಮಿಸಿದ ಸರ್ಕಾರಿ ಶಾಲೆಯ ಹೊಸ ಬಿಸಿಯೂಟ ಅಡುಗೆ ಕಟ್ಟಡದ ಮುಂದೆ ಗ್ರಾಮಸ್ಥರು ಮತ್ತು ಶಾಲಾ ಸಿಬ್ಬಂದಿ

Ankola| ಸರ್ಕಾರದ ಅನುದಾನ ಇಲ್ಲ ಗೃಹಲಕ್ಷ್ಮಿ ಹಣದಿಂದ ಶಾಲೆ ಅಡುಗೆ ಕಟ್ಟಡ ನಿರ್ಮಿಸಿದ ವನಿತೆಯರು.

 

ಕಾರವಾರ :- ರಾಜ್ಯಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ (gruhalaksmi) ಯೋಜನೆ ಹಲವು ಬಡ ಮಹಿಳೆಯರ ಜೀವನವನ್ನ ಬೆಳಕಾಗಿಸಿದೆ. ಮನೆಯ ಮಂದಿಯ ಕಷ್ಟಕ್ಕೆ ನೆರವಾದರೆ ,ಸ್ವ ಉದ್ಯೋಗಕ್ಕೂ ನೆರವಾಗಿದೆ.ಆದರೇ ಮಹಿಳೆಯರೆಲ್ಲಾ ಸೇರಿ ತಮ್ಮೂರಿನ ಶಾಲೆಯನ್ನು ಉಳಿಸಿ ಬೆಳೆಸಲು ತಮ್ಮ ಗೃಹಲಕ್ಷ್ಮಿ ಹಣವನ್ನ ವೆಯಿಸಿ ಮಾದರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ:-Ankola| ವಿಭೂತಿ ಫಾಲ್ಸ್ ಗೆ ಪ್ರವಾಸಿಗರಿಗೆ ನಿರ್ಬಂಧ 

Advertisement

ಹೌದು ಉತ್ತರ ಕನ್ನಡ ಜಿಲ್ಲೆಯ ಅಂಬುಕೋಣ ಗ್ರಾಮ ಕುಮಟಾ-ಅಂಕೋಲ(ankola) ಗಡಿಯ ಗ್ರಾಮ. ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಬರುವ ಈ ಪುಟ್ಟ ಗ್ರಾಮದಲ್ಲಿ 49 ಮನೆಗಳಿದ್ದು ಹಾಲಕ್ಕಿ ಗೌಡರೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ಬಹುತೇಕರು ಬಡ ಕೃಷಿಕರು.

ಪ್ರತಿ ದಿ‌ನ ತಾವು ಬೆಳೆದ ತರಕಾರಿಯನ್ನ ಗೋಕರ್ಣ ,ಅಂಕೋಲದ ಮಾರುಕಟ್ಟೆಗೆ ತಂದು ಮಾರಾಟ ಮಾಡಿ ಜೀವನ ನಡೆಸುವ

 ಈ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯೊಂದಿದೆ. ಐದನೇ ತರಗತಿವರೆಗೆ ಮಾತ್ರ ಇರುವ ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 16 ವಿದ್ಯಾರ್ಥಿಗಳಿದ್ದು ಇಬ್ಬರು ಶಿಕ್ಷಕರಿದ್ದಾರೆ. ಈಬಾರಿ ಹೊಸ ಪ್ರವೇಶಾತಿ ಕೂಡ ಕಡಮೆ ಇರುವುದರಿಂದ ಈ ಶಾಲೆ ಮುಚ್ಚುವ ಹಂತದಲ್ಲಿದೆ.

ಹೀಗಾಗಿ ಈ ಶಾಲೆಗೆ ಶಿಕ್ಷಣ ಇಲಾಖೆಯಿಂದ ಬರುವ ಅನುದಾನವೂ ಕಡಿಮೆ. ಈ ಹಿಂದೆ ಶಾಲೆಯ ಧ್ವಜ ಕಟ್ಟೆ ನಿರ್ಮಾಣಕ್ಕೆ ಮಹಿಳೆಯೊಬ್ಬರು ತಾನು ಕೂಡಿಟ್ಟ ಗೃಹಲಕ್ಷ್ಮಿ ಹಣ ನೀಡಿ ಧ್ವಜಕಟ್ಟೆ ನಿರ್ಮಿಸಿದ್ದರು.

ಅಂಬುಕೋಣ ಗ್ರಾಮದ ಮಹಿಳೆಯರು ಗೃಹಲಕ್ಷ್ಮಿ ಹಣದಿಂದ ನಿರ್ಮಿಸಿದ ಸರ್ಕಾರಿ ಶಾಲೆಯ ಹೊಸ ಬಿಸಿಯೂಟ ಅಡುಗೆ ಕಟ್ಟಡದ ಮುಂದೆ ಗ್ರಾಮಸ್ಥರು ಮತ್ತು ಶಾಲಾ ಸಿಬ್ಬಂದಿ
ಹೊಸದಾಗಿ ನಿರ್ಮಾಣವಾದ ಅಡುಗೆ ಕೊಠಡಿ

ಇನ್ನು ಶಾಲೆಯಲ್ಲಿ ಈ ಹಿಂದೆ ಇದ್ದ ಬಿಸಿಯೂಟ ಅಡುಗೆ ಕೊಠಡಿ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಇದ್ದು ಶಿಕ್ಷಣ ಇಲಾಖೆಗೆ ಹಾಗೂ ಶಾಸಕರಿಗೆ ಸಹ ಹೊಸ ಬಿಸಿಯೂಟ ಕೊಠಡಿ ನಿರ್ಮಾಣ ಮಾಡಿಕೊಡಲು ಅನುದಾನ ಕೇಳಿದ್ದರು.

ಆದರೇ ಈ ಅನುದಾನ ಮಂಜೂರಾಗಲೇ ಇಲ್ಲ. ಇನ್ನು ಪುಟ್ಟ ಮಕ್ಕಳಿಗೆ ಶಿಥಿಲಾವಸ್ತೆ ಹಾಗೂ ಸೂಕ್ತ ವೆವಸ್ತೆ ಇಲ್ಲದ ಅಡುಗೆ ಕೊಠಡಿಯಲ್ಲಿ ಆಹಾರ ಪದಾರ್ಥ ಬೇಯಿಸುವುದು ,ಸಾಮಗ್ರಿಗಳನ್ನ ಸಂಗ್ರಹಿಸುವುದೇ ದೊಡ್ಡ ಸಮಸ್ಯೆಯಾಗಿತ್ತು.

ಇದನ್ನೂ ಓದಿ:-Ankola| ಪೆಟ್ರೋಲಿಯಂ ಉತ್ಪನ್ನ ಹೊತ್ತುತಂದ ಟ್ಯಾಂಕರ್ ಗೆ ಬೆಂಕಿ|ಸಂಚಾರ ಬಂದ್ 

ಈ ಸಮಸ್ಯೆ ಅರಿತ ಶಾಲೆಯ ಎಸ್.ಡಿ.ಎಮ್.ಸಿ ಹಾಗೂ ಮುಖ್ಯ ಶಿಕ್ಷಕ ವೆಂಕಟೇಶ್ ಗೌಡ ರವರು ಶಾಲೆ ಪ್ರಾರಂಭಕ್ಕೂ ಮುಂಚೆ ಅಡುಗೆ ಕೊಠಡಿ ನಿರ್ಮಿಸುವ ಪಣ ತೊಟ್ಟರು.

ಆದರೇ ಸಂಪನ್ನೂಲ ಕ್ರೂಡೀಕರಣವೇ ದೊಡ್ಡ ಸವಾಲಾಗುತ್ತು.ತಮ್ಮೂರಿನ ಶಾಲೆ ಉಳಿಸಿಕೊಳ್ಳಬೇಕು ,ಮಕ್ಕಳಿಗೆ ಉತ್ತಮ ಬಿಸಿಯೂಟ ಸಿಗಬೇಕು ಎಂಬ ಹಂಬಲದಿಂದ ಊರಿನ ಜನ ಅಡುಗೆ ಕೊಠಡಿ ನಿರ್ಮಾಣಕ್ಕೆ ತಮ್ಮ ಹಣ ನೀಡಲು ಮುಂದಾದರು. ಇನ್ನು ಊರಿನ ಮಹಿಳೆಯರು ತಮ್ಮ ಖಾತಗೆ ಬಂದ ಗೃಹಲಕ್ಷ್ಮಿ ಹಣವನ್ನು ನೀಡಲು ಮುಂದಾದರು.

ಇದನ್ನೂ ಓದಿ:-Karwar| ಸ್ವಾರ್ಥಕ್ಕಾಗಿ ಶಾಲಾ ಮಕ್ಕಳ ಪ್ರಾಣ ತೆಗೆಯಲು ಸಿದ್ದವಾದ ಹಬ್ಬುವಾಡ ರಸ್ತೆ ಬಸ್ ನಿಲ್ದಾಣ

ಇದರ ಫಲವಾಗಿ ಊರಿನ ವನಿತೆಯರ ಗೃಹಲಕ್ಷ್ಮಿ ಹಣ 98 ಸಾವಿರ ಹಾಗೂ ಉಳಿದವರು ಕೂಡಿಸಿದ ಒಟ್ಟು ಎರಡು ಲಕ್ಷ ಹಣವನ್ನು ಸಂಗ್ರಹಿಸಿ ತಾವೇ ಸ್ವತಹ ಅಡುಗೆ ಕೊಠಡಿ ನಿರ್ಮಿಸಲು ಕೈ ಹಾಕಿದರು.ಇವರ ಶ್ರಮದ ಫಲವಾಗಿ ಉತ್ತಮ ಗುಣಮಟ್ಟದ ಅಡುಗೆ ಕೊಠಡಿ ನಿರ್ಮಾಣವಾಯಿತು. ಕೊಠಡಿಗೆ ಟೈಲ್ಸ್ ನ ನೆಲಹಾಸು ಹಾಕಿ ,ಅಡಿಗೆ ಸಾಮಗ್ರಿ ಇಡಲು ಬೇಕಾದ ಎಲ್ಲಾ ವೆವಸ್ತೆ ಮಾಡಿ ಶಾಲೆ ಪ್ರಾರಂಭದ ದಿನ ಮಕ್ಕಳಿಗೆ ಉತ್ತಮ ಬಿಸಿಊಟ ಸಿಗಲು ಕೊಠಡಿ ತಲೆಎತ್ತುವ ಮೂಲಕ ಮಾದರಿಯಾಯಿತು.

ಇದನ್ನೂ ಓದಿ:-Uttara kannada ಸರಣಿ ಕಳ್ಳತನ | ಮುರುಡೇಶ್ವರ ಸೇರಿದಂತೆ ಜಿಲ್ಲೆಯ ದೇವಾಲಯಗಳ ಭದ್ರತೆ ಹೆಚ್ಚಿಸಲು 15 ದಿನದ ಗಡುವು 

ಸರ್ಕಾರದ ಯಾವುದೇ ಅನುದಾನ ಬಳಸದೇ ಊರಿನವರೇ ಒಂದು ಬಿಸಿಯೂಟ ಕೊಠಡಿ ನಿರ್ಮಿಸಿ ಮಾದರಿಯಾಗಿದ್ದಾರೆ. ಜೊತೆಗೆ ಗ್ರಾಮದ ವನಿತೆಯರ ಗೃಹಲಕ್ಷ್ಮಿ ಹಣ ಸದ್ಬಳಕೆಮಾಡುವ ಮೂಲಕ ಮಕ್ಕಳ ವಿದ್ಯಭ್ಯಾಸಕ್ಕೆ ದಾರಿ ದೀಪವಾಗಿದ್ದು ಎಲ್ಲರಿಗೂ ಮಾದರಿ ಎನಿಸಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement