Kumta|ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ನಾಯ್ಕ ಸ್ಮರಣಾರ್ಥ ಪ್ರಶಾಂತ ಕುಮಾರ್ ನಾಯ್ಕ ಅವರಿಂದ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಗಿಡ ವಿತರಣೆ.

ಕುಮಟಾ ತಾಲೂಕಿನ ಬೆಟ್ಕುಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ. ನಾರಾಯಣ ನಾಯ್ಕ ಅವರ ಸ್ಮರಣಾರ್ಥ ವಕೀಲ ಪ್ರಶಾಂತ ಕುಮಾರ್ ನಾಯ್ಕ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಹಣ್ಣಿನ ಕಸಿ ಗಿಡಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸಿದರು.
School children and teachers in Betkuli, Kumta, receiving textbooks and fruit saplings during a commemorative program held in memory of freedom fighter Narayan Kuslappa Naik, promoting education and environmental awareness. School children and teachers in Betkuli, Kumta, receiving textbooks and fruit saplings during a commemorative program held in memory of freedom fighter Narayan Kuslappa Naik, promoting education and environmental awareness.
Ai image

Kumta|ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ನಾಯ್ಕ ಸ್ಮರಣಾರ್ಥ ಪ್ರಶಾಂತ ಕುಮಾರ್ ನಾಯ್ಕ ಅವರಿಂದ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಗಿಡ ವಿತರಣೆ.

 

Kumta news:-ಕುಮಟಾ(kumta)ತಾಲೂಕಿನ ಬೆಟ್ಕುಳಿಯ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ದಿ. ನಾರಾಯಣ ಕುಸ್ಲಪ್ಪ ನಾಯ್ಕ ಅವರ ಸ್ಮರಣಾರ್ಥ ಅವರ ಮೊಮ್ಮಗ ಹಾಗೂ ವಕೀಲರಾದ ಪ್ರಶಾಂತ ನಾಯ್ಕ ಬೆಟ್ಕುಳಿ ಅವರಿಂದ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ದಿ. ನಾರಾಯಣ ನಾಯ್ಕ ಅವರ ಮಗನಾದ ಶಂಕರ್ ನಾಯ್ಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶಾಲಾ ಮಕ್ಕಳಿಗೆ ಸಿಹಿ ಹಂಚಿ, ಉಚಿತವಾಗಿ ಪಠ್ಯಪುಸ್ತಕಗಳನ್ನು ಒದಗಿಸುವ ಮೂಲಕ ಪ್ರಶಾಂತ ನಾಯ್ಕ ಅವರು ತಮ್ಮ ಅಜ್ಜನ ನೆನಪಿಗಾಗಿ ಅಪಾರ ಶಿಕ್ಷಣ ಪ್ರೇಮವನ್ನು ಮೆರೆದರು.ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನೂ ಪ್ರದರ್ಶಿಸಿದ ಅವರು, ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕ ವೃಂದಕ್ಕೆ, ಅಡುಗೆ ಸಿಬ್ಬಂದಿಗೆ ಹಾಗೂ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಿಗೆ ಹಣ್ಣಿನ ಕಸಿ ಗಿಡಗಳನ್ನು ವಿತರಿಸುವ ಮೂಲಕ ತಂದೆಯಾದ ಶಂಕರ ನಾಯ್ಕ ಅವರ ಮೂಲಕ ಪರಿಸರ ಪ್ರೇಮದ ಸಂದೇಶ ಸಾರಿದರು.

Advertisement

School children and teachers in Betkuli, Kumta, receiving textbooks and fruit saplings during a commemorative program held in memory of freedom fighter Narayan Kuslappa Naik, promoting education and environmental awareness.
ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಗಿಡ ವಿತರಣೆ

 ಕಾರ್ಯಕ್ರಮದಲ್ಲಿ ನಾರಾಯಣ ನಾಯ್ಕ ಅವರ ಪುತ್ರ ಹಾಗೂ ನಿವೃತ್ತ ಶಿಕ್ಷಕರಾದ ಶಂಕರ ನಾಯ್ಕ, ಮೊಮ್ಮಗ ಪ್ರವೀಣ, ಮರಿಮೊಮ್ಮಕ್ಕಳಾದ ಅಭಿನವ ಮತ್ತು ಅಶ್ವಿನ್ ಉಪಸ್ಥಿತರಿದ್ದರು.ಶಾಲೆಯ ಶಿಕ್ಷಕರಾದ ಐ.ಜೆ. ನಾಯ್ಕ, ಅನಿಲಾ ನಾಯಕ, ಎಸ್‌ಡಿಎಂಸಿ ಸದಸ್ಯರಾದ ಪ್ರಕಾಶ ಹರಿಕಾಂತ, ತಿಪ್ಪಯ್ಯ ಹರಿಕಾಂತ, ಜಯಂತ್ ಹರಿಕಾಂತ ಹಾಗೂ ಊರ ನಾಗರಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement