Karwar|ತಪ್ಪು ತಿದ್ದಿಕೊಳ್ಳದ ಡ್ರಗ್ ಪೆಡ್ಲರ್  ಬಳ್ಳಾರಿ ಜೈಲಿಗೆ.

Karwar:ಕಾರವಾರ: PIT NDPS ಕಾಯ್ದೆಯಡಿ ಡ್ರಗ್ ಪೆಡ್ಲರ್ ಬಂಧನ, ಬಳ್ಳಾರಿ ಜೈಲಿಗೆ ರವಾನೆ
IMG 20260616 222301 IMG 20260616 222301

Karwar|ತಪ್ಪು ತಿದ್ದಿಕೊಳ್ಳದ ಡ್ರಗ್ ಪೆಡ್ಲರ್  ಬಳ್ಳಾರಿ ಜೈಲಿಗೆ.

 

ಕಾರವಾರದ‌ ಡ್ರಗ್ ಪೆಡ್ಲರ್ ವಿರುದ್ಧ PIT NDPS ಕಾಯ್ದೆಯಡಿ ಬಂಧನ ಆದೇಶ; ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನೆ.

ಕಾರವಾರ: ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ವೃತ್ತಿಪರ ಡ್ರಗ್ ಪೆಡ್ಲರ್ ಎಂದು ಗುರುತಿಸಲ್ಪಟ್ಟಿರುವ ಕಾರವಾರದ (karwar) ಇಬ್ರಾಹಿಂ ದವಳಸಾಬ ಚೋಪದಾರ (22) ವಿರುದ್ಧ PIT NDPS ಕಾಯ್ದೆಯಡಿ ಬಂಧನ ಆದೇಶ ಜಾರಿಗೊಳಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

Advertisement

ಕಾರವಾರ(karwar) ನಗರದ ಹಬ್ಬುವಾಡ ನಿವಾಸಿಯಾಗಿರುವ ಇಬ್ರಾಹಿಂ ವಿರುದ್ಧ ಕಾರವಾರ ನಗರ, ಅಂಕೋಲಾ (ankola)ಹಾಗೂ ಚಿತ್ತಾಕುಲ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಪ್ರತಿಬಂಧಕ ಕ್ರಮವಾಗಿ ಬಿಎನ್‌ಎಸ್‌ಎಸ್ ಕಾಯ್ದೆಯಡಿ ಮತ್ತೊಂದು ಪ್ರಕರಣವೂ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:-Karwar|ಆಟೋ ಚಾಲಕನಿಗೆ ತನ್ನೂರಿನ ದೇವಸ್ಥಾನವೇ ಟಾರ್ಗೆಟ್ ! ಆರು ದಿನದಲ್ಲಿ ಏಳು ದೇವಸ್ಥಾನದಲ್ಲಿ ಕಳವು-ಬಂಧನ

ಆರೋಪಿಯು ಮಾದಕ ವಸ್ತುಗಳ ಸೇವನೆ, ಸಾಗಣೆ, ಸರಬರಾಜು ಹಾಗೂ ಮಾರಾಟದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಲ್ಲದೆ, ವಿವಿಧ ಪ್ರಕರಣಗಳಲ್ಲಿ ಜಾಮೀನು ಪಡೆದ ಬಳಿಕವೂ ಷರತ್ತುಗಳನ್ನು ಉಲ್ಲಂಘಿಸಿ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ. ಈತನ ಚಟುವಟಿಕೆಗಳಿಂದ ಯುವಜನರ ಆರೋಗ್ಯ, ಭವಿಷ್ಯ ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದನ್ನು ಪರಿಗಣಿಸಿ ಬಂಧನ ಆದೇಶಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಕಾರವಾರ (karwar)ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಕಾರವಾರ ಉಪವಿಭಾಗದ ಡಿವೈಎಸ್ಪಿ ಅವರ ವರದಿ ಆಧರಿಸಿ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಸಲ್ಲಿಸಲಾದ ಪ್ರಸ್ತಾವನೆಯನ್ನು ಪರಿಶೀಲಿಸಿದ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರು, The Prevention of Illicit Traffic in Narcotic Drugs and Psychotropic Substances Act ಅಡಿಯಲ್ಲಿ ಆರೋಪಿಯನ್ನು ಬಂಧನದಲ್ಲಿಡುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ:-Karwar| ಈ ಶ್ವಾನದ ಮಾಲೀಕ ನಾನಲ್ಲ ! ಜಿಲ್ಲಾಧಿಕಾರಿ ಮೊರೆ ಹೋದ ಯುವಕ ! ಏನಿದು ಕತೆ?

ಆದೇಶದಂತೆ ಆರೋಪಿಯನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.

ಪೊಲೀಸ್ ಇಲಾಖೆ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸಲಿದ್ದು, ಯುವಜನತೆ ಹಾಗೂ ಸಾರ್ವಜನಿಕರು ಡ್ರಗ್ಸ್ ಸಂಬಂಧಿತ ಅಕ್ರಮ ಚಟುವಟಿಕೆಗಳಿಂದ ದೂರವಿರಬೇಕು ಎಂದು ಮನವಿ ಮಾಡಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ನಡೆಯುವ ಅನುಮಾನಾಸ್ಪದ ಡ್ರಗ್ಸ್ ಮಾರಾಟ ಅಥವಾ ಸಾಗಣೆ ಕುರಿತು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement