Karwar| ಸ್ವಾರ್ಥಕ್ಕಾಗಿ ಶಾಲಾ ಮಕ್ಕಳ ಪ್ರಾಣ ತೆಗೆಯಲು ಸಿದ್ದವಾದ ಹಬ್ಬುವಾಡ ರಸ್ತೆ ಬಸ್ ನಿಲ್ದಾಣ

Karwar:ಕಾರವಾರದ ಹಿಂದೂ ಹೈಸ್ಕೂಲ್ ಸಮೀಪ ಫುಟ್‌ಪಾತ್ ಮೇಲೆ ನಿರ್ಮಿಸಲಾಗಿರುವ ಹೊಸ ಹಬ್ಬುವಾಡ ಬಸ್ ನಿಲ್ದಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳ ಸುರಕ್ಷತೆ, ಟ್ರಾಫಿಕ್ ಸಮಸ್ಯೆ ಹಾಗೂ ರಾಜಕೀಯ ಆರೋಪಗಳು ಚರ್ಚೆಗೆ ಗ್ರಾಸವಾಗಿವೆ.
file 000000008da8720793477c3888f4236a 1 file 000000008da8720793477c3888f4236a 1

Karwar| ಸ್ವಾರ್ಥಕ್ಕಾಗಿ ಶಾಲಾ ಮಕ್ಕಳ ಪ್ರಾಣ ತೆಗೆಯಲು ಸಿದ್ದವಾದ ಹಬ್ಬುವಾಡ ರಸ್ತೆ ಬಸ್ ನಿಲ್ದಾಣ.

 

ಕಾರವಾರ :- ಕಾರವಾರ(,karwar) ನಗರದ ಹೆಂಜನಾಯ್ಕ ಸರ್ಕಲ್ ಬಳಿಯ ಹಿಂದೂ ಹೈಸ್ಕೂಲ್ ಬಳಿ ಹಬ್ಬುವಾಡಕ್ಕೆ ತೆರಳುವ ಮಾರ್ಗದಲ್ಲಿ ರಾತ್ರಿ ಬೆಳಗಾಗುವುದರೊಳಗೆ ನಗರಸಭೆ ಪುಟ್ ಬಾತ್ ಮೇಲೆಯೇ ಹೊಸ ಬಸ್ ನಿಲ್ದಾಣವನ್ನು ಮಾಡಲಾಗಿದೆ.

ಈ ನಿಲ್ದಾಣದ ನಿರ್ಮಾಣ ಇದೀಗ ಸ್ಥಳೀಯ ಜನರ ಅಕ್ರೋಶಕ್ಕೆ ಕಾರಣವಾಗಿದ್ದು ನಗರಸಭೆ ಹಾಗೂ ಶಾಸಕ ಸೈಲ್ ವಿರುದ್ಧ ಹಿಡಿ ಶಾಪ ಹಾಕುವಂತಾಗಿದೆ.

Advertisement

ಇದನ್ನೂ ಓದಿ:-Karwar| ಹೊಸ ಸಿಮೆಂಟ್ ರಸ್ತೆಗೆ ಗುಂಡಿ ಮುಚ್ಚುವ ನೆಪದಲ್ಲಿ ಡಾಂಬರೀಕರಣ- ಲೋಕೋಪಯೋಗಿ ಇಲಾಖೆ ಎಡವಟ್ಟು !

ಹೌದು “ಕಚ್ಚೆ ತುಂಡಿನಂತೆ” ಇರುವ ಈ ರಸ್ತೆಯಲ್ಲಿ ಹಿಂದೂ ಹೈಸ್ಕೂಲ್ ,ಬಾಲವಂದಿರ ಶಾಲೆಗಳಿವೆ. ಜೊತೆಗೆ ಪುಟ್ ಬಾತ್ ಮೇಲೆ ಸ್ಥಳೀಯ ಮಹಿಳೆಯರು ವ್ಯಾಪಾರ ಮಾಡುತ್ತಾರೆ.

ಬೆಳಗಾದರೇ ಇಲ್ಲಿರುವ ಶಾಲೆಗೆ ಸಾವಿರಾರು ವಿದ್ಯಾರ್ಥಿ ,ಪೋಷಕರು ಬರುತ್ತಾರೆ. ಬೆಳಗ್ಗೆ,ಮಧ್ಯಹ್ನ ಹಾಗೂ ಸಂಜೆ ವೇಳೆಯಲ್ಲಿ ಶಾಲೆ ಬಿಡುವ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ವಾಹನಗಳು ಒಂದಿಂಚು ಅಲುಗಲು ಇಲ್ಲಿ ಹೆಣಗಾಡಬೇಕಾಗುತ್ತದೆ. ಹೀಗಿರುವಾಗ ದೂರದಲ್ಲಿ ಇದ್ದ ನಗರ  ಬಸ್ ನಿಲ್ದಾಣವನ್ನ ಏಕಾಏಕಿ ಪುಟ್ ಬಾತ್ ಮೇಲೆ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳು ಆಫ್ ದಿ ರೆಕಾರ್ಡ ನಲ್ಲಿ ಶಾಸಕರ ಒತ್ತಡ ಎಂಬ ಉತ್ತರ ಕೊಡುತ್ತಾರೆ.

ಇನ್ನು ಇಲ್ಲಿ ಪ್ರತಿ ದಿನ  ಬಸ್ ನಿಲ್ಲಿಸಿದರೆ ಅಪಘಾತ ಆಗೋದು ಗ್ಯಾರಂಟಿ ಅನ್ನುವ ಸ್ಥಿತಿ ಇದೆ. ಬಸ್ ಅಕ್ಕಪಕ್ಕ ಮಕ್ಕಳು ಚಲಿಸುವುದರಿಂದ ಅಪಘಾತ ಸಾಧ್ಯತೆಗಳಿವೆ.ಹೀಗಿರುವಾಗ ಹಬ್ಬುವಾಡದ ಸಿಮೆಂಟ್ ರಸ್ತೆಗೆ ಡಾಂಬರ್ ಸುರಿದು ಹೊಸ ರಸ್ತೆ ಮಾಡಲು ಹೊರಟ ಎಡಬಿಡಂಗಿ ಕಮಂಗಿಗಳಂತೆ ಒಂದು ಬಸ್ ನಿಲ್ದಾಣ ಇದ್ದರೂ ಪುಟ್ ಬಾತ್ ಮೇಲೆ ಹೊಸ ಬಸ್ ನಿಲ್ದಾಣ ನಿರ್ಮಿಸಲಾಗಿದೆ.

ಪ್ರತಿ ದಿನ ಈ ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಪೊಲೀಸ್ ಇಲಾಖೆ ಹರಸಾಹಸ ಪಡುತ್ತದೆ. ಎದ್ವಾ ತದ್ವ ನಿಯಮ ಮೀರಿ ಬರುವ ವಾಹನಗಳಿಗೆ ಅಂಕುಷವೇ ಇಲ್ಲ. ಇನ್ನು ಮಳೆ ಬಂದರೇ ಮೊಳಕಾಲು ಉದ್ದ ನೀರು ನಿಲ್ಲವ ಈ ರಸ್ತೆಯಲ್ಲಿ ನಗರಸಭೆ ಮೊದಲು ಚಿರಂಡಿ ಸ್ವಚ್ಛ ಮಾಡುವುದು ಬಿಟ್ಟು, ಮಕ್ಕಳನ್ನ ಬಲಿ ಪಡೆಯಲು ಬಲಿ ಕಟ್ಟೆ ಕಟ್ಟಿದಂತಿದೆ ಎಂಬುದು ಸ್ಥಳೀಯ ಜನರ ಅಕ್ರೋಶ.

ಶಾಸಕ ಸೈಲ್ ಜಮೀನಿಗೆ ದಾರಿ ಮಾಡಿಕೊಡಲು ಬಸ್ ನಿಲ್ದಾಣ ಷಿಪ್ಟ್!

Bus stop

ತನ್ನ ಮೂರು ಎಕರೆ ಖಾಸಗಿ ಜಮೀನಿಗೆ ದಾರಿ ಮಾಡಿಕೊಡುವ ದುರುದ್ದೇಶದಿಂದ ಹಳೆಯ ಬಸ್ ಸ್ಟಾಪ್ ಸ್ಥಳಾಂತರಿಸಿ, ಹಿಂದು ಹೈಸ್ಕೂಲ್ ‌ಬಳಿಯ ಫುಟ್ ಪಾತ್ ಮೇಲೆ‌ ನೂತನ ಬಸ್ ಸ್ಟಾಪ್ ನಿರ್ಮಾಣಕ್ಕೆ ಶಾಸಕ ಸತೀಶ ಸೈಲ್ ಒತ್ತಡ ಹಾಕಿದ್ದಾರೆ‌ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.

ಅವರು ಹಿಂದು ಹೈಸ್ಕೂಲ್ ಬಳಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ,

ಜನ ಓಡಾಡುವ ಜಾಗದಲ್ಲಿ ಹಿಂದು ಮುಂದು ವಿಚಾರಿಸದೆ ಕಾರವಾರ ನಗರಸಭೆಯವರು ಫುಟ್ ಪಾತ್ ಮೇಲೆ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕೆ  ಶಾಸಕ ಸತೀಶ್ ಸೈಲ್ ಅವರ ಕುಮ್ಮಕ್ಕೆ ಕಾರಣ ಎಂದು ಆರೋಪಿಸಿದರು.

Karwar|ಆಟೋ ಚಾಲಕನಿಗೆ ತನ್ನೂರಿನ ದೇವಸ್ಥಾನವೇ ಟಾರ್ಗೆಟ್ ! ಆರು ದಿನದಲ್ಲಿ ಏಳು ದೇವಸ್ಥಾನದಲ್ಲಿ ಕಳವು-ಬಂಧನ

ಹತ್ತಿರದಲ್ಲೇ ನೂರು ಮೀಟರ್ ದೂರದಲ್ಲೇ ಹಳೆಯ ಪ್ರಯಾಣಿಕರ ತಂಗುದಾಣ ಇದೆ. ಆದರೆ ಶಾಸಕ ಸೈಲ್ ಆ ತಂಗುದಾಣದ ಹಿಂದೆ ಇರುವ ತಮ್ಮ ಮೂರು ಎಕರೆ ಖಾಸಗಿ ಜಮೀನಿಗೆ ದಾರಿ ಮಾಡಿ ಕೊಡುವ ಉದ್ದೇಶದಿಂದ ಅದನ್ನು ತೆರವುಗೊಳಿಸಿ, ಪುಟಪಾತ್ ಮೇಲೆ ಬಸ್ ಸ್ಟಾಪ್ ನಿರ್ಮಾಣಕ್ಕೆ ನಗರಸಭೆಯ ಮೇಲೆ ಒತ್ತಡ ಹಾಕಿದ್ದಾರೆ‌ ಎಂದು ಆರೋಪಿಸಿದರು.

ಸೈಲ್ ಮನೆಯಲ್ಲಿ ಆರಾಮ ಇರಬೇಕು.

IMG 20260611 WA0002
ರೂಪಾಲಿ ನಾಯ್ಕ ರಿಂದ ನಗರಸಭೆ ಕಮಿಷಿನರ್ ಗೆ ತರಾಟೆ

ಯಾವ ಕಾರಣಕ್ಕೂ ಶಾಲೆ ಬಳಿಯ ಪುಟಪಾತ್ ಮೇಲೆ ಬಸ್ ಸ್ಟಾಪ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ ರೂಪಾಲಿ ನಾಯ್ಕ, ಶಾಸಕ ಸತೀಶ ಸೈಲ್ ಅನಾರೋಗ್ಯ ಎಂದು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಅವರು ಮನೆಯಲ್ಲಿ ಆರಾಮ ಇರಬೇಕು. ಅದು ಬಿಟ್ಟು ಇಂಥ ಎಡಬಿಡಂಗಿ ಕೆಲಸ ಮಾಡುವುದನ್ನು ಮೊದಲು ಬಿಡಲಿ ಎಂದು ಕಿವಿ ಮಾತು ಹೇಳಿದರು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement