Karwar| ಹೊಸ ಸಿಮೆಂಟ್ ರಸ್ತೆಗೆ ಗುಂಡಿ ಮುಚ್ಚುವ ನೆಪದಲ್ಲಿ ಡಾಂಬರೀಕರಣ- ಲೋಕೋಪಯೋಗಿ ಇಲಾಖೆ ಎಡವಟ್ಟು !

Public outrage in Karwar as PWD officials face criticism for laying tar over a well-maintained cement road under KSHIP instead of repairing damaged highway stretches.
Workers laying tar over an existing cement road in Karwar while locals question the unnecessary roadwork Workers laying tar over an existing cement road in Karwar while locals question the unnecessary roadwork

Karwar| ಹೊಸ ಸಿಮೆಂಟ್ ರಸ್ತೆಗೆ ಗುಂಡಿ ಮುಚ್ಚುವ ನೆಪದಲ್ಲಿ ಡಾಂಬರೀಕರಣ- ಲೋಕೋಪಯೋಗಿ ಇಲಾಖೆ ಎಡವಟ್ಟು !

 

ಕಾರವಾರ :- ರಸ್ತೆಯಲ್ಲಿ ಇರೋ ಹೊಂಡ ಗುಂಡಿ ಮುಚ್ಚಿ ಸರಿಪಡಿಸ್ರಪ್ಪ  ಅಂದ್ರೆ ಚನ್ನಾಗಿರೋ ಸಿಮೆಂಟ್ ರಸ್ತೆಗೆ ಮರಳಿ ಟಾರ್ ಹಾಕಿ ಎಡವಟ್ಟು ಮಾಡಿಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜನರಿಂದ ಚೀ..ಥೂ ಎಂದು ಉಗಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

Advertisement

Workers laying tar over an existing cement road in Karwar while locals question the unnecessary roadwork

ಹೌದು ಕಾರವಾರ ಕೈಗಾ -ಇಳಕಲ್ ರಾಜ್ಯ ಹೆದ್ದಾರಿಯು ಲೋಕೋಪಯೋಗಿ ಇಲಾಖೆಯಡಿ ಬರುತ್ತದೆ.ಕಳೆದ ಮೂರು ವರ್ಷದ ಹಿಂದೆ ಕಾರವಾರ(karwar) ನಗರದಿಂದ ಹಬ್ಬುವಾಡದ ವರೆಗೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಉತ್ತಮವಾಗಿರುವ ಈ ರಸ್ತೆಗೆ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಇರುವ ಕರ್ನಾಟಕ ಸ್ಟೇಟ್ ಹೈವೇ ಇಂಪ್ರುಮೆಂಟ್ ಪ್ರಾಜಕ್ಟ್ (ಕೆಸಿಪ್ ) ನಡಿ ಉತ್ತಮವಾಗಿರುವ ಸಿಮೆಂಟ್ ರಸ್ತೆಗೆ ಮತ್ತೆ ಡಾಂಬರ್ ಹಾಕಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಇನ್ನು ಈ ಸಿಮೆಂಟ್ ರಸ್ತೆಮೇಲೆ ಡಾಂಬರ್ ಹಾಕಿ ಅರ್ಥ ಕಿಲೋಮೀಟರ್ ವರೆಗೂ ಏಕಮುಖದಲ್ಲಿ ಡಾಂಬರ್ ಹಾಕಿದ್ದು ಇದನ್ನು ಗಮನಿಸಿದ ಜನ ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ರಸ್ತೆ ಸರಿಮಾಡುತಿದ್ದೇವೆ ಎಂದು ಗುತ್ತಿಗೆ ಪಡೆದ

ವಿಜಯಪುರದ ಎಸ್.ಎಸ್ ಆಲೂರು ಕನ್ ಸ್ಟ್ರಕ್ಷನ್ ಕಂಪನಿ ಸಿಬ್ಬಂದಿ ಉತ್ತರ ನೀಡಿದ್ದಾರೆ. ಇನ್ನು ಹಾಳುಬಿದ್ದ ಹೆದ್ದಾರಿ ಮುಂದೆ ಇರುವಾಗ ಉತ್ತಮ ಸಿಮೆಂಟ್ ರಸ್ತೆಮೇಲೆ ಡಾಂಬರ್ ಹೇಗೆ ಹಾಕುತ್ತೀರಾ ಎಂದು ಪ್ರಶ್ನೆ ಮಾಡಿದಾಗ ಅಧಿಕಾರಿಗಳ ಸಮೇತ ಸಿಬ್ಬಂದಿಗಳು ಕೆಲಸವನ್ನ ಅರ್ಧಕ್ಕೆ ಬಿಟ್ಟು ಕಾಲ್ಕಿತ್ತಿದ್ದಾರೆ.ಇನ್ನು ಈ ಲೋಕೋಪಯೋಗಿ ಇಲಾಖೆಯ ಈ ಎಡವಟ್ಟಿಗೆ ಜನ ಹಿಡಿ ಶಾಪ ಹಾಕಿದ್ದು ಹಾಳುಬಿದ್ದ ರಸ್ತೆ ಗುಂಡಿ ಸರಿಪಡಿಸುವ ಬದಲು ಚನ್ನಾಗಿರೋ ಸಿಮೆಂಟ್  ರಸ್ತೆಗೆ ಡಾಂಬರ್ ಹಾಕಿ ಜನರ ದುಡ್ಡು ಪೋಲು ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement