Bhatkal|ಚಿಪ್ಪೆಕಲ್ಲು ದುರಂತದಲ್ಲಿ ತಾಯಿ ಸಾವು -ಮನನೊಂದಿದ್ದ ಮಗನ ಬದುಕು ದುರಂತ ಅಂತ್ಯ

Bhatkal:ಚಿಪ್ಪೆಕಲ್ಲು ದುರಂತದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖ ತಾಳಲಾರದೆ 36 ವರ್ಷದ ಆನಂದ ಅಣ್ಣಪ್ಪ ನಾಯ್ಕ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳದಲ್ಲಿ ನಡೆದಿದೆ.ವಿವರ ನೋಡಿ
ಭಟ್ಕಳ ತಾಲೂಕಿನ ಬೇಂಗ್ರೆ ಗ್ರಾಮದ ಮನೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆನಂದ ಅಣ್ಣಪ್ಪ ನಾಯ್ಕ ಪ್ರಕರಣಕ್ಕೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ ಭಟ್ಕಳ ತಾಲೂಕಿನ ಬೇಂಗ್ರೆ ಗ್ರಾಮದ ಮನೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆನಂದ ಅಣ್ಣಪ್ಪ ನಾಯ್ಕ ಪ್ರಕರಣಕ್ಕೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
ಭಟ್ಕಳ ತಾಲೂಕಿನ ಬೇಂಗ್ರೆ ಗ್ರಾಮದ ಮನೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆನಂದ ಅಣ್ಣಪ್ಪ ನಾಯ್ಕ ಪ್ರಕರಣಕ್ಕೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ

Bhatkal|ಚಿಪ್ಪೆಕಲ್ಲು ದುರಂತದಲ್ಲಿ ತಾಯಿ ಸಾವು -ಮನನೊಂದಿದ್ದ ಮಗನ ಬದುಕು ದುರಂತ ಅಂತ್ಯ.

ಕಾರವಾರ :- ಭಟ್ಕಳದ (bhatkal)ಚಿಪ್ಪೆಕಲ್ಲು ದುರಂತದಲ್ಲಿ ತಾಯಿಯ ಸಾವಿನಿಂದ ಮನನೊಂದ ಮಗ ಮನೆಯ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೇಂಗ್ರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮೋಳಿನಮನೆಯಲ್ಲಿ ಘಟನೆ ನಡೆದಿದ್ದು
ಆನಂದ ಅಣ್ಣಪ್ಪ ನಾಯ್ಕ (36) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.

ಎಂ.ಕಾಂ ಪದವಿದರನಾಗಿರುವ ಅಣ್ಣಪ್ಪ ನಾಯ್ಕ ಮದ್ಯ ವೆಸನಿಯಾಗಿದ್ದ , ತಾಯಿಯ ಆಶ್ರಯದಲ್ಲಿದ್ದನು.ಕಳೆದ ಮೇ ತಿಂಗಳಲ್ಲಿ ನಡೆದ ಶಿರಾಲಿಯ ತಟ್ಟಿಹಕ್ಕಲಿ ನಲ್ಲಿ ನಡೆದ ಚಿಪ್ಪೆಕಲ್ಲು ದುರಂತದಲ್ಲಿ ತಾಯಿ ಲಕ್ಷ್ಮಿ ಮೃತಳಾಗಿದ್ದಳು.

ಇದನ್ನೂ ಓದಿ:-Bhatkal| ಅಳಿವೆಕೋಡಿ ದುರಂತ 11 ಜನರ ಅಂತ್ಯಸಂಸ್ಕಾರ |ಅನಾಥವಾದ ಮಕ್ಕಳಿಗೆ ಸಚಿವ ಮಂಕಾಳುವೈದ್ಯ ದಿಕ್ಕು!

Advertisement

ತಾಯಿಯ ಸಾವಿನಿಂದ ಮನನೊಂದಿದ್ದ ಅಣ್ಣಪ್ಪ ನಾಯ್ಕ ಮನೆಯಲ್ಲೇ ಇರುತಿದ್ದು ಮದ್ಯದ ದಾಸನಾಗಿದ್ದನು. ಅಕ್ಕ ಪಕ್ಕದ ಜನ ಹಾಗೂ ಕುಟುಂಬದವರು ಸಹ ಆತನಿಗೆ ಕುಡಿತ ಬಿಡಿಸಿ ಸಹಜ ವೆಕ್ತಿಯನ್ನಾಗಿ ಪರಿವರ್ತಿಸಲು ಪ್ರಯತ್ನ ಪಟ್ಟಿದ್ದರು. ಆದರೇ ತಾಯಿಯ ದುರಂತ ಸಾವು ಮನೆಯಲ್ಲಿಯೇ ಇದ್ದ ಈತನಿಗೆ ಕಾಡುತಿದ್ದು
ಮನೆಯ ಹಿಂಭಾಗದಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement