Bhatkal| ಅಳಿವೆಕೋಡಿ ದುರಂತ 11 ಜನರ ಅಂತ್ಯಸಂಸ್ಕಾರ |ಅನಾಥವಾದ ಮಕ್ಕಳಿಗೆ ಸಚಿವ ಮಂಕಾಳುವೈದ್ಯ ದಿಕ್ಕು!

Bhatkal:ಭಟ್ಕಳದ ಅಳಿವೆಕೋಡಿ ದುರಂತದಲ್ಲಿ ಮೃತಪಟ್ಟ 11 ಜನರ ಅಂತ್ಯಸಂಸ್ಕಾರ ಶಿರಾಲಿಯಲ್ಲಿ ನೆರವೇರಿತು. ಅನಾಥವಾದ ಮಕ್ಕಳ ಶಿಕ್ಷಣ ವೆಚ್ಚ ಭರಿಸುವುದಾಗಿ ಸಚಿವ ಮಂಕಾಳು ವೈದ್ಯ ಘೋಷಣೆ ಮಾಡಿದ್ದಾರೆ.
ಭಟ್ಕಳ ಅಳಿವೆಕೋಡಿ ದುರಂತದಲ್ಲಿ ಮೃತಪಟ್ಟ 11 ಜನರ ಸಾಮೂಹಿಕ ಅಂತ್ಯಸಂಸ್ಕಾರ ವೇಳೆ ಶೋಕದಲ್ಲಿ ಮುಳುಗಿದ ಕುಟುಂಬಸ್ಥರು ಮತ್ತು ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮಂಕಾಳು ವೈದ್ಯ. ಭಟ್ಕಳ ಅಳಿವೆಕೋಡಿ ದುರಂತದಲ್ಲಿ ಮೃತಪಟ್ಟ 11 ಜನರ ಸಾಮೂಹಿಕ ಅಂತ್ಯಸಂಸ್ಕಾರ ವೇಳೆ ಶೋಕದಲ್ಲಿ ಮುಳುಗಿದ ಕುಟುಂಬಸ್ಥರು ಮತ್ತು ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮಂಕಾಳು ವೈದ್ಯ.
ಭಟ್ಕಳ ಅಳಿವೆಕೋಡಿ ದುರಂತದಲ್ಲಿ ಮೃತಪಟ್ಟ 11 ಜನರ ಸಾಮೂಹಿಕ ಅಂತ್ಯಸಂಸ್ಕಾರ ವೇಳೆ ಶೋಕದಲ್ಲಿ ಮುಳುಗಿದ ಕುಟುಂಬಸ್ಥರು ಮತ್ತು ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮಂಕಾಳು ವೈದ್ಯ.

Bhatkal| ಅಳಿವೆಕೋಡಿ ದುರಂತ 11 ಜನರ ಅಂತ್ಯಸಂಸ್ಕಾರ |ಅನಾಥವಾದ ಮಕ್ಕಳಿಗೆ ಸಚಿವ ಮಂಕಾಳುವೈದ್ಯ ದಿಕ್ಕು!

Bhatkal news
ಭಟ್ಕಳ-ನದಿಯಲ್ಲಿ ಮುಳುಗುತ್ತಿರುವ 14 ಜನರ ಚಿತ್ರ

ಕಾರವಾರ :- ಅವರು ಜೀವನದ ನಿರ್ವಹಣೆಗಾಗಿ ಕಪ್ಪೆ ಜಿಪ್ಪು ಹೆಕ್ಕಿ ಬದುಕು ಕಟ್ಟಿಕೊಂಡವರು.ಆದ್ರೆ ಭಾನುವಾರ ಸೂರ್ಯ ನೆತ್ತಿಗೆ ಏರುವ ಮುಂಚೆ ಭರ ಸಿಡಿಲು ಬಡಿದಂತೆ ವೆಂಕಟಾಪುರ ನದಿಯ ನೀರು ಏಕಾ ಏಕಿ  ನುಗ್ಗಿದ್ದರಿಂದ ಒಂದೇ ಕುಟುಂಬದ ಎಂಟು ಜನ ಸೇರಿ  11 ಜನ ಸಾವಾಗಿದ್ದು ಇಂದು ಎಲ್ಲರ ಅಂತ್ಯ ಸಂಸ್ಕಾರ ಮೂಡ ಶಿರಾಲಿಯ ಶಾರದಹೊಳೆ ತೀರದಲ್ಲಿ ನೆರವೇರಿಸಲಾಯಿತು‌.

 ಒಂದೆಡೆ ಶವಾ ಗಾರದಲ್ಲಿ ರೋಧಿಸುತ್ತಿರುವ ಕುಟುಂಬಸ್ತರು.ಮತ್ತೊಂದೆಡೆ ಸಾಮೂಹಿಕ ಅಂತ್ಯ ಸಂಸ್ಕಾರ ಎಂತಬರ ಹೃದಯವನ್ನು ಕರಗಿಸಿತ್ತು.

Advertisement

ಹೌದು ಈ ದೃಶ್ಯ ನೋಡಿದರೇ ಯಂತವರ ಕರಳು ಚುರಕ್ ಎನ್ನದಿರದು. ಭಾನುವಾರ ಬೆಳಗ್ಗೆ ಭಟ್ಕಳದ(bhatkal) ಶಿರಾಲಿಯ ವೆಂಕಟಾಪುರ ನದಿಯ ಅಳವೆಯ ತಟ್ಟಿಹಕ್ಕಲಿನಲ್ಲಿ ಕಪ್ಪೆಚಿಪ್ಪು (ಚಿಪ್ಪಿಕಲ್ಲು) ಹೆಕ್ಕಲು ಹಲವರು ಹೋಗಿದ್ದರು. ಇದು ಅವರ ದಿನದ ಕಾಯಕ ಕೂಡ . ಆದರೇ ಸಮುದ್ರದ ಉಬ್ಬರ,ಇಳಿತ ಯಾವಾಗ ಬರಬಹುದೆಂಬ ಅರಿವಿನ ಸಮಸ್ಯೆ ಹಾಗೂ ದಿನದ ತುತ್ತಿಗಾಗಿ ಚಿಪ್ಪೆಕಲ್ಲು ಹುಡುಕುವ ಕಾಯಕಕ್ಕೆ ಹೋದವರು ಚಿಪ್ಪೆಕಲ್ಲು ತೆಗೆಯುತ್ತಿರುವಾಗ ಏಕಾ ಏಕಿ ನದಿಯ ನೀರು ಉಕ್ಕಿ ಹರಿದಿದೆ.

ಇದರ ಪರಿಣಾಮ 14 ಜನ ಕೊಚ್ಚಿಹೋದರು.ಅದೃಷ್ಟವಶಾತ್ ಸ್ಥಳೀಯರು ಹಲವರನ್ನ ರಕ್ಷಿಸಿದರು.ಆದರೂ ಒಂದೇ ಕುಟುಂಬದ ಎಂಟು ಜನ ಹಾಗೂ ಉಮೇಶ್ ಮಾಸ್ತಮ್ಮ,ಜ್ಯೋತಿ ಕುಟುಂಬ ನದಿಯಲ್ಲಿ ಉಸುರು ಚಲ್ಲಿದ್ದಾರೆ.

ದುರಂತ ಸಾವಿಲ್ಲಿ ಕೊನೆಗೊಂಡವರು ಇವರು:-

ಮೃತರ ಹೆಸರು -ಅಂದಾಜು  ವಯಸ್ಸು.

1 ಮಾಲತಿ ಜಟ್ಟಪ್ಪ ನಾಯ್ಕ (38)

2 ಲಕ್ಷ್ಮೀ ಮಾದೇವ ನಾಯ್ಕ ( 40)

3 ಲಕ್ಷ್ಮೀ ಶಿವರಾಮ ನಾಯ್ಕ ( 40 )

4 ಲಕ್ಷ್ಮೀ ಅಣ್ಣಪ್ಪ ನಾಯ್ಕ ( 50 )

5 ಉಮೇಶ ಮಂಜುನಾಥ ನಾಯ್ಕ ( 25)

6 ಲಕ್ಮೀ  ಮಾಧೆವ ನಾಯ್ಕ ಹೆಣ್ಣು 40

7 ಜ್ಯೋತಿ ನಾಗಪ್ಪ ನಾಯ್ಕ ( 38)

8 ಮಾಸ್ತಮ್ಮ ಮಂಜುನಾಥ ನಾಯ್ಕ (45)

9.ಮಾದೇವ ಬೈರಪ್ಪ ನಾಯ್ಕ (40)

10. ಮಂಜಮ್ಮ ಗೋಯ್ದ ನಾಯ್ಕ ( 30)

11. ನಾಗರತ್ನ ಪರಮೇಶ್ವರ ನಾಯ್ಕ( 38)

ರಕ್ಷಣೆಗೊಳಗಾದವರು

1 ಮಾದೇವಿ ಮಂಜುನಾಥ ನಾಯ್ಕ (60)

2 ಲತಾ ಜಗದೀಸ ನಾಯ್ಕ (38)

3 ನಾಗರತ್ನ ಈಶ್ವರ ನಾಯ್ಕ ( 40).

ರಕ್ಷಣೆ ಮಾಡಲು ಹೋಗಿ ಉಸಿರು ಚಲ್ಲಿದ ಮಾದೇವ ನಾಯ್ಕ

ಲಕ್ಷ್ಮಿ ಮಾದೇವ ನಾಯ್ಕ ದಂಪತಿ
ಲಕ್ಷ್ಮಿ ಮಾದೇವ ನಾಯ್ಕ ದಂಪತಿ

 ಇನ್ನು ಪತ್ನಿ ಹಾಗೂ ನಾದಿನಿ ಮನೆಗೆ ಬರಲಿಲ್ಲ ಎಂದು ನದಿಯ ಬಳಿ ನೋಡಲು ಹೋಗಿದ್ದ ಮಾದೇವ ನಾಯ್ಕ ರಕ್ಷಣೆ ಮಾಡಲು ಹೋಗಿ ತನ್ನ ಉಸಿರನ್ನ ಚಲ್ಲಿದರು.ದುರದೃಷವಶಾತ್ ಈತನೊಂದಿಗೆ ಇಡೀ ಕುಟುಂಬ ಜೀವ ತೆತ್ತಿದ್ದು ಸಂಬಂಧಿಕರು ಸಹ ಜೀವ ತೆತ್ತಿದ್ದು ಈತನ ಮಕ್ಕಳು ಮಾತ್ರ ಅನಾಥವಾಗಿದ್ದಾರೆ.

ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಈ ಮಕ್ಕಳ ಶಿಕ್ಷಣ ವೆಚ್ಚ ಭರಿಸುವುದಾಗಿ ಹೇಳುವ ಜೊತೆ ಚಿಕಿತ್ಸೆ ಪಡೆಯುತ್ತಿರುವವರ ವೈದ್ಯಕೀಯ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ‌ . ಇನ್ನು ರಾಜ್ಯ ಸರ್ಕಾರ ಮೃತ ಕುಟುಂಬಕ್ಕೆ ಐದು ಲಕ್ಷ ಹಾಗೂ ಕೇಂದ್ರದಿಂದ ಎರಡು ಲಕ್ಷ ಪರಿಹಾರ ಘೋಷಣೆ ಮಾಡಲಾಗಿದ್ದು ಕುಟುಂಬಕ್ಕೆ ಪರಿಹಾರದ ಚಕ್ ವಿತರಣೆಯಾಗಲಿದೆ.

Bhatkal ಮಾಂಸಕ್ಕಾಗಿ ಅಕ್ರಮ ಜಾನುವಾರು ಸಾಗಾಟ-ಹಿಂದೆಬಿದ್ದ ಪೊಲೀಸರಿಗೂ ಉಳಿಸಲಾಗಲಿಲ್ಲ ಜೀವ!

 ಸಧ್ಯ ಮೃತರಾದ ಒಂದೇ ಕುಟುಂಬದ ಎಲ್ಲಾ ಸದಸ್ಯರನ್ನ ಶಿರಾಲಿಯ ಶಾರದಹೊಳೆ ತೀರದಲ್ಲಿ ನಾಮದಾರಿ ಜನಾಂಗದ ಪದ್ದತಿಯಂತೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಇನ್ನು ಈ ದಿಡೀರ್ ಘಟನೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದಲ್ಲದೇ ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.ಒಟ್ಟಿನಲ್ಲಿ 2024 ರ ಶಿರೂರು ಭೂಕುಸಿತ ದುರಂತದ ನಂತರ ಇದೀಗ ಮತ್ತೆ 11 ಜನ ಪ್ರಕೃತಿ ವಿಕೋಪಕ್ಕೆ ಜೀವ ತೆತ್ತಿದ್ದು ಮಾತ್ರ ದುರಂತ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement