Dandeli |ಯುವತಿಯನ್ನ ರೂಮಿಗೆ ಕರೆದ ಪೊಲೀಸರು! ಇಬ್ಬರು ಪೊಲೀಸರ ಮೇಲೆ ದೂರು ದಾಖಲು 

Dandeli:ದಾಂಡೇಲಿ ಪೊಲೀಸ್ ಠಾಣೆಯ ಇಬ್ಬರು ಕಾನಸ್ಟೇಬಲ್‌ಗಳ ವಿರುದ್ಧ 18 ವರ್ಷದ ಯುವತಿಗೆ ವಾಟ್ಸ್ಆಪ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೆಚ್ಚಿನ ವಿವರ ನೋಡಿ
Dandeli Town Police Station where an FIR was registered against two police constables over allegations of sexually harassing an 18-year-old woman through WhatsApp and Instagram messages. Dandeli Town Police Station where an FIR was registered against two police constables over allegations of sexually harassing an 18-year-old woman through WhatsApp and Instagram messages.
ಆರೋಪಿಗಳು ಹಾಗೂ ನೊಂದ ಯುವತಿ ಫೋಟೋ

Dandeli |ಯುವತಿಯನ್ನ ರೂಮಿಗೆ ಕರೆದ ಪೊಲೀಸರು! ಇಬ್ಬರು ಪೊಲೀಸರ ಮೇಲೆ ದೂರು ದಾಖಲು.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (dandeli)ಪಟ್ಟಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ 18 ವರ್ಷದ ಯುವತಿಗೆ ವಾಟ್ಸ್ಆಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಘಟನೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ:-Honnavar|ಮಾಮನ ಸ್ವಾಮೀಜಿ ವಿರುದ್ಧ ಅಪಸ್ವರ | ಹೊನ್ನಾವರ ಮಠದಲ್ಲಿ ಗಲಾಟೆ ವಿಡಿಯೋ ವೈರಲ್.

ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಜುಲೈ 8ರಂದು ರಾತ್ರಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ದಾಂಡೇಲಿ ಪಟ್ಟಣ ಪೊಲೀಸ್ ಠಾಣೆಯ ಕಾನಸ್ಟೇಬಲ್ ಇಮ್ರಾನ್ , ಇನ್ನೋರ್ವ ಕಾನಸ್ಟೇಬಲ್ ಮಾಂತೇಶ್ ಮೇಲೆ ದೂರು ದಾಖಲಾಗಿದೆ.

Advertisement

ದೂರುದಾರೆಯ ಹೇಳಿಕೆಯ ಪ್ರಕಾರ, ಜುಲೈ 4ರಂದು ಅಪಘಾತಕ್ಕೊಳಗಾದ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಹಾಗೂ ಆತನ ಮೊಬೈಲ್ ಫೋನ್ ಪಡೆಯಲು ಸ್ನೇಹಿತೆಯೊಂದಿಗೆ ದಾಂಡೇಲಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಬಿಡಿಸಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ ಹಣ ಪಡೆದು ವಾಹನ ಬಿಡುಗಡೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:-Bhatkal| ಮುರಿನಕಟ್ಟೆ ಸಂಘರ್ಷ ಗುಪ್ತಚರ ಇಲಾಖೆ ವರದಿ- ಭಟ್ಕಳದ 60 ಜನ ರೌಡಿಶೀಟರ್ ಗೆ ನೋಟಿಸ್

ಇದರ ಎರಡು ದಿನಗಳ ನಂತರ ಠಾಣೆಯ ದಾಖಲೆಯಲ್ಲಿದ್ದ ತನ್ನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಆರೋಪಿಗಳಲ್ಲಿ ಒಬ್ಬರು ವಾಟ್ಸ್ಆಪ್ ಮೂಲಕ ಸಂಪರ್ಕ ಸಾಧಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಜುಲೈ 6ರಂದು ರಾತ್ರಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ರೂಮ್ ಗೆ ಕರೆದಿದ್ದು ,ನಂತರ ದೂರವಾಣಿ ಕರೆ ಮಾಡಿ ಅಸಭ್ಯವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:-bhatkal| ಬಾವಿಗೆ ಬಿದ್ದ ಚಿರತೆ ರಕ್ಷಣೆ ವಿಡಿಯೋ ನೋಡಿ.

ಈ ಬಗ್ಗೆ ಪಿ.ಎಸ್.ಐ ಗೂ ಮಾಹಿತಿ ನೀಡಿದ್ದು ಆರಂಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿರುವ ಯುವತಿ, ನಂತರ ಕಾರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಎಸ್.ಪಿ ದೀಪನ್ ರವರ ಸೂಚನೆಯಂತೆ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-Dandeli | ಕಾಳಿ ನದಿ ತೀರದಲ್ಲಿ 40 ಮರಿಗಳೊಂದಿಗೆ ಮೊಸಳೆ ! ವಿಡಿಯೋ ನೋಡಿ

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ಆಪ್ ಸಂದೇಶಗಳು, ಕರೆ ವಿವರಗಳು ಹಾಗೂ ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.

ಕೆಲವು ದಿನದ ಹಿಂದೆಯಷ್ಟೇ ಮಂಕಿ ಠಾಣೆ ಪಿ.ಎಸ್.ಐ ರವರ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಇದೀಗ  ಪೊಲೀಸ್ ಸಿಬ್ಬಂದಿಯ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಯುವತಿ ನೋವಿನ ಹೇಳಿಕೆ.

ಕಾನಸ್ಟೇಬಲ್ ಇಮ್ರಾನ್ ರವರು ನನ್ನ ತಂದೆತಾಯಿ ರವರ ವಿಚ್ಛೇಧನ ಪ್ರಕರಣದಲ್ಲಿ ಪರಿಚಿತರಾಗಿದ್ದರು. ನಾನು ತಾಯಿಯೊಂದಿಗೆ ವಾಸವಿದ್ದೇನೆ. ಇಮ್ರಾನ್ ನನಗೆ ಇನ್ ಸ್ಟಾ ಮೂಲಕ ಅಶ್ಲೀಲ ಮೆಸೇಜ್ ಮಾಡುತಿದ್ದನು. ನನ್ನ ಫಾಲೋ ಮಾಡುವುದನ್ನ ಮಾಡುತಿದ್ದ. ಇದರ ನಂತರ ಮಾಂತೇಶ್ ಕೂಡ ಇನ್ ಸ್ಟಾದಲ್ಲಿ ಮೆಸೇಜ್ ಮಾಡಿದ್ದಾನೆ .ನಂತರ ನನ್ನ ನಂಬರ್ ಗೆ ವಾಟ್ಸ್ ಅಪ್ ಮಾಡಿ ಅಶ್ಲೀಲವಾಗಿ ಮೆಸೇಜ್ ಮಾಡಿ ನಗರದ ಲಾಡ್ಜ್ ಒಂದರ ರೂಮಿಗೆ ಬರುವಂತೆ ಮೆಸೇಜ್ ಮಾಡಿದ್ದು ಕಿರುಕುಳ ನೀಡಿದ್ದಾನೆ. ಎಂದು ಆಕೆ ಆರೋಪ ಮಾಡಿದ್ದಾಳೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement